Sunday, March 26, 2023
Google search engine
HomeUncategorizedಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ….!

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ….!

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ಕಾಡುತ್ತೆ ಈ ಸಮಸ್ಯೆ….!

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ರೋಗ ಆಹ್ವಾನಿಸಿದಂತೆ ಅಂತಾ ಹಿರಿಯರು ಹೇಳ್ತಾರೆ. ಈಗಿನ ಜನರು ಅದನ್ನು ನಿರ್ಲಕ್ಷಿಸಿಯಾಗಿದೆ. ಹಿತವೆನಿಸುವ ಕಾರಣ ಸಾಮಾನ್ಯವಾಗಿ ಎಲ್ಲರೂ ಈ ಭಂಗಿಯಲ್ಲಿ ಕುಳಿತುಕೊಳ್ಳಲು ಇಷ್ಟ ಪಡ್ತಾರೆ. ಆದ್ರೆ ಹಿರಿಯರು ಹೇಳುವುದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಅಧ್ಯಯನವೊಂದು ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ ಎಂದಿದೆ.

ಪುರುಷರು ಈ ರೀತಿ ಕುಳಿತುಕೊಳ್ಳುವುದು ಕಡಿಮೆ. ಮಹಿಳೆಯರು ಇದೇ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಅದು ಅವರಿಗೆ ಕಂಫರ್ಟ್ ಎನ್ನಿಸುತ್ತದೆ. ವರದಿ ಪ್ರಕಾರ ದೀರ್ಘ ಸಮಯ ಹೀಗೆ ಕುಳಿತುಕೊಳ್ಳುವುದರಿಂದ ಸಂಧಿವಾತದ ಸಮಸ್ಯೆ ಕಾಡುವ ಸಂಭವವಿರುತ್ತದೆಯಂತೆ.

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ರಕ್ತ ಸಂಚಾರ ನಿಧಾನವಾಗುತ್ತದೆ. ಕಾಲಿನ ಕೆಲ ಭಾಗ ದಪ್ಪಗಾಗುವ ಸಾಧ್ಯತೆಗಳಿವೆ. ಉರಿ ಊತ ಕೂಡ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಸೊಂಟ ನೋವು ನಿಮ್ಮನ್ನು ಕಾಡಲಿದೆ. ನಡು ಹಾಗೂ ಕಾಲು ನೋವು ಕೂಡ ಕಾಣಿಸಿಕೊಂಡು ನೀವು ಬೇಗ ಮುದುಕರಾಗ್ತೀರಿ ಎನ್ನುತ್ತದೆ ಸಂಶೋಧನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments