Thursday, August 11, 2022
Google search engine
HomeUncategorizedಕಾಗೆ – ಬೆಕ್ಕಿನ ವಿಡಿಯೋ ನೋಡಿ ಮನಃಪೂರ್ತಿ ನಕ್ಕ ನೆಟ್ಟಿಗರು

ಕಾಗೆ – ಬೆಕ್ಕಿನ ವಿಡಿಯೋ ನೋಡಿ ಮನಃಪೂರ್ತಿ ನಕ್ಕ ನೆಟ್ಟಿಗರು

ಕಾಗೆ – ಬೆಕ್ಕಿನ ವಿಡಿಯೋ ನೋಡಿ ಮನಃಪೂರ್ತಿ ನಕ್ಕ ನೆಟ್ಟಿಗರು

ಕಾಗೆಗಳು ತಮ್ಮ ವರ್ತನೆಗಳಿಂದ ನಮ್ಮನ್ನು ರಂಜಿಸುತ್ತವೆ. ಇದೀಗ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಇಂಥದ್ದೇ ಒಂದು ಸಣ್ಣ ಸುಂದರ ಹಾಸ್ಯಮಯ ಸನ್ನಿವೇಶವಿದೆ.

ವಿಡಿಯೊದಲ್ಲಿ ಕಾಗೆಯು ಬೆಕ್ಕನ್ನು ಚುಡಾಯಿಸುವುದನ್ನು ನೋಡಬಹುದಾಗಿದೆ. ಕಾಗೆಯ ಚೇಷ್ಟೆ ಎಂಥವರಲ್ಲೂ ನಗು ತರಿಸುತ್ತದೆ. ನೆಲದ ಮೇಲೆ ಮಲಗಿರುವ ನಿದ್ರೆಯ ಮೂಡ್​ನಲ್ಲಿರುವ ಬೆಕ್ಕಿನತ್ತ ಕಾಗೆಯೊಂದು ಹಿಂಬದಿಯಿಂದ ಹತ್ತಿರ ಹತ್ತಿರ ಎರಡೆರಡೆ ಹೆಜ್ಜೆ ಬರುತ್ತದೆ.

ಆ ಬೆಕ್ಕು ಕಾಗೆಯೊಂದಿಗೆ ಸರಸವಾಡುವ ಮೂಡ್​ನಲ್ಲೂ ಇಲ್ಲ, ಕಾಗೆಯನ್ನು ಬೆದರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಕಾಗೆ ಮಾತ್ರ ನಿಧಾನವಾಗಿ ಬೆಕ್ಕಿನ ಹತ್ತಿರ ಬರಲು ಪ್ರಾರಂಭಿಸುತ್ತದೆ. ಆದರೆ ಬೆಕ್ಕು ಹಿಂತಿರುಗಿ ನೋಡಿದಂತೆ ನಟಿಸುತ್ತದೆ. ಒಂದು ಹಂತದಲ್ಲಿ ಕಾಗೆ ಬೆಕ್ಕಿಗೆ ತೊಂದರೆ ಕೊಡಲು ಪ್ರಯತ್ನಿಸುತ್ತದೆ, ಆದರೆ ಆಸಕ್ತಿಯಿಲ್ಲದ ಬೆಕ್ಕು ಕಾಗೆಯನ್ನು ನೋಡಿದ ತಕ್ಷಣ ಹಿಮ್ಮೆಟ್ಟುತ್ತದೆ. ಈ ವಿಡಿಯೋವನ್ನು ಪಾರ್ಕ್​ನಲ್ಲಿ ರೆಕಾರ್ಡ್​ ಮಾಡಿದಂತಿದೆ.

ಈ ತಮಾಷೆಯ ಕಾಗೆ – ವಿಡಿಯೊ ವೈರಲ್​ ಆಗಿದ್ದು, ಕಾಗೆ- ಬೆಕ್ಕಿನ ದೃಶ್ಯವನ್ನು ನೋಡಿದ ನೆಟ್ಟಿಗರು ಭರ್ತಿ ನಕ್ಕಿದ್ದಾರೆ. ಅವು ನಾವೆಲ್ಲರೂ ಯೋಚಿಸುವುದಕ್ಕಿಂತ ಬುದ್ಧಿವಂತರು ಎಂದು ಒಬ್ಬರು ಕಾಮೆಂಟ್​ ಕೂಡ ಮಾಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments