Monday, December 5, 2022
Google search engine
HomeUncategorizedಕಾಂಗ್ರೆಸ್ ಗೆ ಬಿಗ್ ಶಾಕ್: ಬಿಜೆಪಿ ಸೇರಿದ ಹಿರಿಯ ಶಾಸಕ; ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ...

ಕಾಂಗ್ರೆಸ್ ಗೆ ಬಿಗ್ ಶಾಕ್: ಬಿಜೆಪಿ ಸೇರಿದ ಹಿರಿಯ ಶಾಸಕ; ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ 10 ಬಾರಿ ಎಂಎಲ್ಎ ಆಗಿದ್ದ ಮೋಹನ್ ರಾಥ್ವಾ

ಕಾಂಗ್ರೆಸ್ ಗೆ ಬಿಗ್ ಶಾಕ್: ಬಿಜೆಪಿ ಸೇರಿದ ಹಿರಿಯ ಶಾಸಕ; ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ 10 ಬಾರಿ ಎಂಎಲ್ಎ ಆಗಿದ್ದ ಮೋಹನ್ ರಾಥ್ವಾ

ಗುಜರಾತ್ ಅಸೆಂಬ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ದೊಡ್ಡ ಆಘಾತವಾಗಿದೆ. 10 ಬಾರಿ ಶಾಸಕರಾಗಿದ್ದ ಮೋಹನ್ ರಾಥ್ವಾ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

10 ಬಾರಿ ಪಕ್ಷದ ಶಾಸಕ ಮೋಹನ್ ಸಿಂಗ್ ರಾಥ್ವಾ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಜರಾತ್‌ ನಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕಾಂಗ್ರೆಸ್‌ ಗೆ ಭಾರಿ ಹಿನ್ನಡೆಯಾಗಿದೆ.

ಇತ್ತೀಚೆಗಷ್ಟೇ, ಮುಂಬರುವ ವಿಧಾನಸಭಾ ಚುನಾವಣೆಗೆ ತಾನು ಟಿಕೆಟ್ ಬಯಸುವುದಿಲ್ಲ ಎಂದು ರಾಥ್ವಾ ಘೋಷಿಸಿದ್ದರು. ಆದರೆ ಪಕ್ಷವು ಅವರ ಸ್ಥಾನದಿಂದ ತನ್ನ ಮಗ ರಾಜೇಂದ್ರಸಿಂಹ ರಾಥ್ವಾ ಅವರನ್ನು ಕಣಕ್ಕಿಳಿಸಲು ಬಯಸಿತ್ತು.

78 ವರ್ಷದ ನಾಯಕ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ ಕಳುಹಿಸಿದ್ದಾರೆ. ಪ್ರಮುಖ ಬುಡಕಟ್ಟು ನಾಯಕ ರಾಥ್ವಾ ಅವರು 10 ಬಾರಿ ಶಾಸಕರಾಗಿದ್ದಾರೆ. ಪ್ರಸ್ತುತ ಮಧ್ಯ ಗುಜರಾತ್‌ ನ ಛೋಟಾ ಉದಯಪುರ(ST) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2012 ರ ಮೊದಲು ಅವರು ಛೋಟಾ ಉದೇಪುರ್ ಜಿಲ್ಲೆಯ ಪಾವಿ-ಜೆಟ್ಪುರ್(ST) ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ರಾಜೀನಾಮೆ ಪತ್ರವನ್ನು ಕಳುಹಿಸಿದ ನಂತರ ರಾಥ್ವಾ ಅವರು ಅಹಮದಾಬಾದ್‌ ನಲ್ಲಿರುವ ಗುಜರಾತ್ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರಿದ್ದಾರೆ.

ಸಮಾರಂಭದಲ್ಲಿ ರಾಥ್ವಾ ಅವರ ಮಕ್ಕಳಾದ ರಾಜೇಂದ್ರಸಿಂಹ ಮತ್ತು ರಂಜಿತ್‌ ಸಿನ್ಹ ಕೂಡ ಬಿಜೆಪಿಗೆ ಸೇರ್ಪಡೆಗೊಂಡರು. ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲಿದೆಯೇ ಎಂಬ ಪ್ರಶ್ನೆಗೆ, 100 ಪ್ರತಿಶತ ಖಚಿತ ಎಂದು ರಾಥ್ವಾ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments