Wednesday, February 8, 2023
Google search engine
HomeUncategorizedಕಲ್ಲಿನಿಂದ ಹೊಡೆದು RTI ಕಾರ್ಯಕರ್ತನ ಕೊಲೆ: ಆರೋಪಿ ಪಿಡಿಒ ನ್ಯಾಯಾಲಯಕ್ಕೆ ಶರಣು

ಕಲ್ಲಿನಿಂದ ಹೊಡೆದು RTI ಕಾರ್ಯಕರ್ತನ ಕೊಲೆ: ಆರೋಪಿ ಪಿಡಿಒ ನ್ಯಾಯಾಲಯಕ್ಕೆ ಶರಣು

ಕಲ್ಲಿನಿಂದ ಹೊಡೆದು RTI ಕಾರ್ಯಕರ್ತನ ಕೊಲೆ: ಆರೋಪಿ ಪಿಡಿಒ ನ್ಯಾಯಾಲಯಕ್ಕೆ ಶರಣು

ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೌರಿಪುರದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಪಿಡಿಒ ಎ.ಟಿ. ನಾಗರಾಜ್ ದಾವಣಗೆರೆ ನ್ಯಾಯಾಲಯಕ್ಕೆ ಗುರುವಾರ ಶರಣಾಗಿದ್ದಾನೆ.

ಕಳೆದ ಶನಿವಾರ ಸಂಜೆ ಹೊಸಕೆರೆ ಗ್ರಾಮದ ಡಾಬಾ ಒಂದರಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ರಾಮಕೃಷ್ಣನನ್ನು ಎ.ಟಿ. ನಾಗರಾಜ್ ಮತ್ತು ಅವರ ಬೆಂಬಲಿಗರು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕೃಷ್ಣ ಅವರ ತಂದೆ ಪ್ರಕಾಶ್ ಪಿಡಿಒ ಸೇರಿದಂತೆ 11 ಮಂದಿ ವಿರುದ್ಧ ಜಗಳೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರು ಆರೋಪಿಗಳು ಜಗಳೂರು ಪೊಲೀಸರಿಗೆ ಶರಣಾಗಿದ್ದರು. ತಲೆ ಮರೆಸಿಕೊಂಡಿದ್ದ ಎ1 ಆರೋಪಿ ಪಿಡಿಒ ನಾಗರಾಜ್ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments