Sunday, April 2, 2023
Google search engine
HomeUncategorizedಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ರಸ್ತೆಮಾರ್ಗಗಳಲ್ಲಿ ಲೋಡ್ ಸಾಗಿಸುವ ವಾಹನಗಳನ್ನು ನೀವು ನೋಡಿರಬಹುದು. ಕೆಲವೊಮ್ಮೆ, ಓವರ್​ಲೋಡ್​ ಆಗಿ
ಅಪಘಾತ ಆಗಿರುವ ಸುದ್ದಿಗಳನ್ನೂ ಕೇಳಿರುವಿರಿ. ಇಂತಹ ಘಟನೆಗಳು ಚಾಲಕನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾರ್ಗದಲ್ಲಿ ಇತರ ಪ್ರಯಾಣಿಕರಿಗೂ ಅಪಾಯವನ್ನುಂಟುಮಾಡುತ್ತದೆ, ನೀವು ಒಪ್ಪುತ್ತೀರಿ ಅಲ್ಲವೇ?

ಆದರೆ ಇಲ್ಲೊಂದು ವೈರಲ್​ ವಿಡಿಯೋ ನೋಡಿದರೆ ನೀವು ಹುಬ್ಬೇರಿಸುತ್ತೀರಿ. ಈ ವಿಡಿಯೋದಲ್ಲಿ ಕಬ್ಬಿನಿಂದ ತುಂಬಿದ ಟ್ರ್ಯಾಕ್ಟರ್​ ಅನ್ನು ನೀವು ನೋಡಬಹುದು. ಚಾಲಕನೊಬ್ಬ ಕಬ್ಬಿನ ಟ್ರಾಕ್ಟರ್ ಅನ್ನು ಚಾಲನೆ ಮಾಡುತ್ತಿರುವುದನ್ನು ಇದು ತೋರಿಸುತ್ತದೆ.

ಆದರೆ ಕಬ್ಬಿನ ಕಟ್ಟುಗಳಿಂದ ತುಂಬಿದ ಟ್ರ್ಯಾಕ್ಟರ್​ ಸಮತೋಲನ ಕಾಪಾಡುವ ಸಲುವಾಗಿ ಚಾಲಕ ಟ್ರ್ಯಾಕ್ಟರ್​ ಮುಂಭಾಗವನ್ನು ಮೇಲಕ್ಕೆ ಎತ್ತಿ ಕಬ್ಬಿಗೆ ಆಸರೆ ನೀಡಿದ್ದಾನೆ. ಈ ಮೂಲಕ ನಿಧಾನವಾಗಿ ಟ್ರ್ಯಾಕ್ಟರ್​ ಓಡಿಸುತ್ತಿದ್ದಾರೆ. ಹಲವರು ಇದಕ್ಕೆ ಭೇಷ್​ ಭೇಷ್​ ಎಂದಿದ್ದರೆ, ಇದು ಯಾವ ಸಮಯದಲ್ಲಿ ಬೇಕಾದರೂ ಅಪಘಾತಕ್ಕೆ ಕಾರಣವಾಗಬಹುದು ಎಂದು ಇನ್ನು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments