Friday, October 7, 2022
Google search engine
HomeUncategorizedಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ವಿಡಿಯೋ

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ವಿಡಿಯೋ

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ವಿಡಿಯೋ

ಸಮಾಜದಲ್ಲಿ ಆರ್ಥಿಕ ಅಸಮಾನತೆ ಸಾಕಷ್ಟಿದೆ. ಸೂರಿಲ್ಲದವರ ಸಂಖ್ಯೆ ಬಹಳವಿದ್ದರೆ, ಹೊತ್ತಿನ ಕೂಳಿಗೂ ಪರದಾಡುವವ ಸಂಖ್ಯೆಯೇನು ಕಡಿಮೆ ಇಲ್ಲ.

ಬಡವರ ಪ್ರತಿದಿನ ಹೋರಾಟಗಳನ್ನು ಚಿತ್ರಿಸುವಂತ ವಿಡಿಯೋ ಒಂದು ವೈರಲ್​ ಆಗಿದ್ದು, ನೆಟ್ಟಿಗರು ಅದನ್ನು ಕಂಡು ಭಾವುಕರಾಗಿದ್ದಾರೆ. ಬಹಳಷ್ಟು ಲೈಕ್‌ ​ಗಳಿಸಿದ ಕ್ಲಿಪ್​ ಹೃದಯವಿದ್ರಾವಕವಾಗಿದ್ದು, ಅನೇಕರ ಕಣ್ಣಲ್ಲಿ ನೀರು ತರಿಸಿರಲೂ ಸಾಕು.

ಜಿಂದಗಿ ಗುಲ್ಜಾರ್​ ಹೈ ಹೆಸರಿನ ಟ್ವಿಟರ್​ ಅಕೌಂಟ್​ನಿಂದ ಅಪ್​ಲೋಡ್​ ಮಾಡಲಾದ 30 ಸೆಕೆಂಡ್​ಗಳ ವಿಡಿಯೊದಲ್ಲಿ ಧಾರಾಕಾರ ಮಳೆಯ ನಡುವೆ ಭಿಕ್ಷುಕನಂತೆ ಕಾಣುವ ವ್ಯಕ್ತಿ ರಸ್ತೆ ಬದಿ ಪಾರ್ಕಿಂಗ್​ ನಲ್ಲಿ ನಿಲ್ಲಿಸಲಾದ ಸ್ಕೂಟರ್​ಗ ಪೈಕಿ ಒಂದರ ಪಕ್ಕ ಕುಳಿತು ಊಟ ಮಾಡುವುದು ಕಾಣುತ್ತದೆ. ಭೀಕರ ಮಳೆಯಲ್ಲೂ ತಟ್ಟೆಯಲ್ಲಿದ್ದ ಆಹಾರವನ್ನು ತಿನ್ನುವುದನ್ನು ನೋಡಿದರೆ ಆತನ ಹಸಿವು ಎಷ್ಟೆಂದು ಅರ್ಥವಾಗುತ್ತದೆ.

ಭಾರೀ ಮಳೆಯ ಆರ್ಭಟಕ್ಕೆ ಊಟ ಒದ್ದೆಯಾಗದಂತೆ ರಕ್ಷಿಸಲು ಆ ವ್ಯಕ್ತಿ ಸ್ಕೂಟರ್​ ಕೆಳಗೆ ಆಹಾರವನ್ನು ಇಟ್ಟುಕೊಂಡಿರುವುದನ್ನು ಕಾಣಬಹುದು. ಅನೇಕರು ಕಾಮೆಂಟ್​ ಮಾಡಿ ತಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments