Sunday, April 2, 2023
Google search engine
HomeUncategorizedಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮದುವೆ ಸಂಭ್ರಮ ಬೆನ್ನಲ್ಲೇ ನೋವಿನ ಘಟನೆ; ಕಟ್ಟಡದಿಂದ ಬಿದ್ದು ರಿತೇಶ್...

ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮದುವೆ ಸಂಭ್ರಮ ಬೆನ್ನಲ್ಲೇ ನೋವಿನ ಘಟನೆ; ಕಟ್ಟಡದಿಂದ ಬಿದ್ದು ರಿತೇಶ್ ತಂದೆ ಸಾವು

ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮದುವೆ ಸಂಭ್ರಮ ಬೆನ್ನಲ್ಲೇ ನೋವಿನ ಘಟನೆ; ಕಟ್ಟಡದಿಂದ ಬಿದ್ದು ರಿತೇಶ್ ತಂದೆ ಸಾವು

OYO founder Ritesh Agarwal's father dies after falling from a high-rise  buildingಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮದುವೆ ಸಂಭ್ರಮದ ಬೆನ್ನಲ್ಲೇ ಅವರ ಮನೆಯಲ್ಲಿ ಸಾವಿನ ನೋವು ಆವರಿಸಿದೆ.

ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅವರು ಗುರುಗ್ರಾಮ್‌ನಲ್ಲಿರುವ ಮನೆಯ 20 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ರಮೇಶ್ ಅಗರ್ವಾಲ್ ಅವರು ಪತ್ನಿಯೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ರಿತೇಶ್ ಅಗರ್ವಾಲ್ ಈ ಕಟ್ಟಡದಲ್ಲಿ ವಾಸಿಸುತ್ತಿರಲಿಲ್ಲ ಎಂದು ವರದಿಯಾಗಿದೆ.

ಗುರುಗ್ರಾಮದ ಸೆಕ್ಟರ್ 54ರ ಡಿಎಲ್‌ಎಫ್ ದಿ ಕ್ರೆಸ್ಟ್ ನಲ್ಲಿ 20 ನೇ ಮಹಡಿಯಿಂದ ಬಿದ್ದು ರಮೇಶ್ ಅಗರ್ವಾಲ್ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ರಿತೇಶ್ ಅಗರ್ವಾಲ್ ಹೇಳಿದರು, “ಭಾರವಾದ ಹೃದಯದಿಂದ, ನನ್ನ ಕುಟುಂಬ ಮತ್ತು ನಾನು, ನಮ್ಮ ಮಾರ್ಗದರ್ಶಿ ಬೆಳಕು ಮತ್ತು ಶಕ್ತಿ, ನನ್ನ ತಂದೆ ಶ್ರೀ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂದು ಹಂಚಿಕೊಳ್ಳುತ್ತಿದ್ದೇವೆ. ಅವರು ಪೂರ್ಣ ಜೀವನವನ್ನು ನಡೆಸಿದರು ಮತ್ತು ನನಗೆ ಮತ್ತು ನಮ್ಮಲ್ಲಿ ಅನೇಕರಿಗೆ ಪ್ರತಿದಿನ ಸ್ಫೂರ್ತಿ ನೀಡಿದರು. ಅವರ ನಿಧನದಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ ಎಂದಿದ್ದಾರೆ.

ರಮೇಶ್ ಅವರ ಕುಟುಂಬವು ರಿತೇಶ್ ಅಗರ್ವಾಲ್ ಅವರ ವಿವಾಹವನ್ನು ಆಚರಿಸಿದ ಕೆಲವು ದಿನಗಳ ನಂತರ ಈ ದುರಂತ ಘಟನೆ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments