Wednesday, August 17, 2022
Google search engine
HomeUncategorizedಐಷಾರಾಮಿ ಕಾರಿಗೆ ಯುವರಾಜ್‌ ಸಿಂಗ್‌ ಕ್ಲೀನ್‌ ಬೋಲ್ಡ್‌; ಮನೆಗೆ ಬಂತು ಹೊಸ ಅತಿಥಿ

ಐಷಾರಾಮಿ ಕಾರಿಗೆ ಯುವರಾಜ್‌ ಸಿಂಗ್‌ ಕ್ಲೀನ್‌ ಬೋಲ್ಡ್‌; ಮನೆಗೆ ಬಂತು ಹೊಸ ಅತಿಥಿ

ಐಷಾರಾಮಿ ಕಾರಿಗೆ ಯುವರಾಜ್‌ ಸಿಂಗ್‌ ಕ್ಲೀನ್‌ ಬೋಲ್ಡ್‌; ಮನೆಗೆ ಬಂತು ಹೊಸ ಅತಿಥಿ

ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟರ್‌ಗಳಿಗೆಲ್ಲ ಬೈಕ್‌ ಹಾಗೂ ಕಾರ್‌ ಕ್ರೇಝ್‌ ಇದ್ದೇ ಇದೆ. ಮಹೇಂದ್ರ ಸಿಂಗ್‌ ಧೋನಿ ಈ ಸಾಲಿನಲ್ಲಿ ಮೊದಲಿಗರು. ಧೋನಿ ಬಳಿ ಸಾಕಷ್ಟು ಐಷಾರಾಮಿ ಕಾರುಗಳು, ಜೀಪು, ಬೈಕ್‌ಗಳಿವೆ. ಇದೀಗ ಮಾಜಿ ಕ್ರಿಕೆಟರ್‌ ಯುವರಾಜ್‌ ಸಿಂಗ್‌ ಕೂಡ ಹೊಸ ಐಷಾರಾಮಿ ಕಾರೊಂದನ್ನು ಖರೀದಿಸಿದ್ದಾರೆ.

ಯುವರಾಜ್‌ಗೆ ಜರ್ಮನ್ ಬ್ರಾಂಡ್‌ನ BMW ಕಾರು ಫೇವರಿಟ್‌. ಹಾಗಾಗಿಯೇ BMW X7 ಐಷಾರಾಮಿ SUV ಯನ್ನು ಯುವಿ ಕೊಂಡುಕೊಂಡಿದ್ದಾರೆ. 6 ಆಸನಗಳುಳ್ಳ ಈ ಕಾರಿನ ಆರಂಭಿಕ ಬೆಲೆಯೇ 1.17 ಕೋಟಿ ರೂಪಾಯಿ. ಮೂರು ವರ್ಷನ್‌ಗಳಲ್ಲಿ ಈ ಕಾರು ಲಭ್ಯವಿದೆ.

ಐಷಾರಾಮಿ SUV ಅನ್ನು ಬಹು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕಪ್ಪು ನೀಲಿ, ಮಿನರಲ್ ವೈಟ್, ಟೆರ್ರಾ ಬ್ರೌನ್, ಫೈಟೋನಿಕ್ ಬ್ಲೂ ಮತ್ತು ಆರ್ಕ್ಟಿಕ್ ಗ್ರೇ ಬ್ರಿಲಿಯನ್ ಎಫೆಕ್ಟ್ ಹೀಗೆ ಹಲವು ಬಣ್ಣದ ಕಾರುಗಳು ಗ್ರಾಹಕರ ಕಣ್ಸೆಳೆಯುವಂತಿವೆ. ಯುವರಾಜ್ ಸಿಂಗ್ ಫೈಟೋನಿಕ್ ಬ್ಲೂ ಬಣ್ಣ ಬಿಎಂಡಬ್ಲ್ಯೂ ವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು SUVಯ ಇತರ ಮಾಡೆಲ್‌ಗಳಿಗೆ ಹೋಲಿಸಿದರೆ ಹೆಚ್ಚು ಸ್ಪೋರ್ಟಿಯರ್ ಲುಕ್‌ ಹೊಂದಿದೆ.

ಯುವಿ ಖರೀದಿಸಿರೋ ಈ ಹೊಸ ಕಾರಿನಲ್ಲಿ ಸಾಕಷ್ಟು ಐಷಾರಾಮಿ ವ್ಯವಸ್ಥೆಗಳಿವೆ. ಸುಂದರವಾದ ಕ್ಯಾಬಿನ್‌ ಹಾಗೂ ಅತ್ಯುನ್ನತ ತಂತ್ರಜ್ಞಾನ ಈ ಕಾರಿನ ವಿಶೇಷ. ಯುವಿ ಖರೀದಿಸಿರುವ BMW X7 ಟ್ವಿನ್-ಟರ್ಬೋಚಾರ್ಜ್ಡ್ 3.0-ಲೀಟರ್ ಎಂಜಿನ್‌ ಹೊಂದಿದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದ್ದು, SUV ಯ ಎಲ್ಲಾ ನಾಲ್ಕು ಚಕ್ರಗಳಿಗೆ ಇದು ಶಕ್ತಿಯನ್ನು ವರ್ಗಾಯಿಸುತ್ತದೆ. ಹೊಸ ಕಾರಿನ ಜೊತೆಗೆ ಯುವಿ ಕ್ಲಿಕ್ಕಿಸಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.

https://www.instagram.com/p/Cgv0x_upJVE/?utm_source=ig_embed&ig_rid=740bb8ae-0da3-425f-8b53-8be251973082

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments