Sunday, September 25, 2022
Google search engine
HomeUncategorizedಏರುತ್ತಲೇ ಇದೆ ಅದಾನಿ ಸಂಪತ್ತು; ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಮೂರು ಶತಕೋಟಿ ಡಾಲರ್...

ಏರುತ್ತಲೇ ಇದೆ ಅದಾನಿ ಸಂಪತ್ತು; ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಮೂರು ಶತಕೋಟಿ ಡಾಲರ್ ಅಂತರವಷ್ಟೇ ಬಾಕಿ…!

ಏರುತ್ತಲೇ ಇದೆ ಅದಾನಿ ಸಂಪತ್ತು; ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಮೂರು ಶತಕೋಟಿ ಡಾಲರ್ ಅಂತರವಷ್ಟೇ ಬಾಕಿ…!

ಅಮೆರಿಕದ ಹಣದುಬ್ಬರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಏರಿಕೆಯಾಗಿರುವ ಕಾರಣ ಕುಬೇರರ ಸಂಪತ್ತು ಕ್ಷಣಮಾತ್ರದಲ್ಲಿ ಕರಗಿದೆ. ಮಂಗಳವಾರ ಒಂದೇ ದಿನ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಬರೋಬ್ಬರಿ 80,000 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ವಿಶ್ವದ ನಂಬರ್ 1 ಶ್ರೀಮಂತ ಟೆಸ್ಲಾ ಕಂಪನಿ ಬಿಇಓ ಎಲಾನ್ ಮಸ್ಕ್, ಫೇಸ್ಬುಕ್ ಒಡೆತನದ ಮೆಟಾ ಫ್ಲಾಟ್ ಫಾರ್ಮ್ಸ್ ಇಂಕ್ ಸಿಇಓ ಮಾರ್ಕ್ ಝುಕರ್ ಬರ್ಗ್, ವಾರೆನ್ ಬಫೆಟ್, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ಎಲ್ಲರೂ ಸಹ ನಷ್ಟಕ್ಕೊಳಗಾಗಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಆಸ್ತಿ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಪ್ರಸ್ತುತ ಅವರು 11.68 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಜೆಫ್ ಬೆಜೋಸ್ ಮತ್ತು ಗೌತಮ್ ಅದಾನಿ ನಡುವೆ ಕೇವಲ ಮೂರು ಶತಕೋಟಿ ಡಾಲರ್ ಆಸ್ತಿಯ ಅಂತರ ಮಾತ್ರವಿದ್ದು, ಅದಾನಿಯವರ ಆಸ್ತಿಯಲ್ಲಿ ಇದೇ ರೀತಿ ಏರಿಕೆ ಕಂಡರೆ ಅವರು ಕೆಲವೇ ದಿನಗಳಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತರಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments