Sunday, January 29, 2023
Google search engine
HomeUncategorizedಏಕಕಾಲದಲ್ಲಿ 4 ಲಕ್ಷ ಜನರಿಂದ ಯೋಗ ಪ್ರದರ್ಶನ: ಗಿನ್ನಿಸ್ ದಾಖಲೆ ಸೇರಿದ ‘ಯೋಗಥಾನ್’: ಎಲ್ಲೆಲ್ಲಿ ಎಷ್ಟು...

ಏಕಕಾಲದಲ್ಲಿ 4 ಲಕ್ಷ ಜನರಿಂದ ಯೋಗ ಪ್ರದರ್ಶನ: ಗಿನ್ನಿಸ್ ದಾಖಲೆ ಸೇರಿದ ‘ಯೋಗಥಾನ್’: ಎಲ್ಲೆಲ್ಲಿ ಎಷ್ಟು ಜನರಿಂದ ಯೋಗ…? ಇಲ್ಲಿದೆ ಮಾಹಿತಿ

ಏಕಕಾಲದಲ್ಲಿ 4 ಲಕ್ಷ ಜನರಿಂದ ಯೋಗ ಪ್ರದರ್ಶನ: ಗಿನ್ನಿಸ್ ದಾಖಲೆ ಸೇರಿದ ‘ಯೋಗಥಾನ್’: ಎಲ್ಲೆಲ್ಲಿ ಎಷ್ಟು ಜನರಿಂದ ಯೋಗ…? ಇಲ್ಲಿದೆ ಮಾಹಿತಿ

ಧಾರವಾಡ: ಇಂದು ರಾಜ್ಯದ 4,05,255 ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡುವ ಮೂಲಕ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಗಿನ್ನಿಸ್ ದಾಖಲೆ ಮಾಡಲಾಗಿದೆ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ: ಕೆ.ಸಿ. ನಾರಾಯಣಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ಇಂದು ಧಾರವಾಡದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾರವಾಡದಲ್ಲಿ ಆಯೋಜನೆಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಯೋಗಥಾನ್ ಆಯೋಜಿಸಲು ನಿರ್ಧರಿಸಿ, ಇಂದು ರಾಜ್ಯದಾದ್ಯಂತ ಯೋಗಾಥಾನ್ ಸಂಘಟಿಸಲಾಗಿತ್ತು.

ಯೋಗಾಥಾನದಲ್ಲಿ ಭಾಗವಹಿಸಲು ರಾಜ್ಯದ ಸುಮಾರು 14 ಲಕ್ಷ ಯೋಗಪಟುಗಳು, ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇಂದು ಜರುಗಿದ ಯೋಗಾಥಾನದಲ್ಲಿ ಏಕಕಾಲಕ್ಕೆ ರಾಜ್ಯದ 4,05,255 ಜನ ಭಾಗವಹಿಸಿ, ಯೋಗಾಥಾನದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಂದಿನ ಬೃಹತ್ ಯೋಗಾಥಾನ್‍ದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ 5904, ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ 3405, ಆರ್‍ಎನ್‍ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 4769, ವಿದ್ಯಾಗಿರಿಯ ಜೆಎಸ್‍ಎಸ್ ಕಾಲೇಜು ಮೈದಾನದಲ್ಲಿ 3769, ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ 6076 ಸೇರಿ ಒಟ್ಟು ಧಾರವಾಡ ಜಿಲ್ಲೆಯ 5 ಸ್ಥಳಗಳಿಂದ 23,923 ಜನ ಏಕಕಾಲದಲ್ಲಿ ಯೋಗಾಸನ ಪ್ರದರ್ಶನ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಿವಿವಿಎಸ್ ಕಾಲೇಜು ಮೈದಾನದಲ್ಲಿ 16,632, ಬೆಳಗಾವಿಯ ಆರ್ಮಿ ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,914, ಸುವರ್ಣಸೌಧದ ಮುಂದೆ 17,712, ಬಳಾರಿಯ ಏರ್‍ಪೋರ್ಟ್ ಮೈದಾನಲ್ಲಿ 11,847, ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ 8,446, ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ 4,798 ಬೀದರದ ಜಿಲ್ಲಾ ಕ್ರೀಡಾಂಗಣದಲ್ಲಿ 1,980, ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ 6,843, ಚಿಕ್ಕಬಳ್ಳಾಪುರ ಎಸ್‍ಜೆಸಿಐಟಿ ಕಾಲೇಜು ಮೈದಾನದಲ್ಲಿ 9256, ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ 8,675 ಜನ ಯೋಗ ಪ್ರದರ್ಶನ ಮಾಡಿದ್ದಾರೆ,

ದಕ್ಷಿಣ ಕನ್ನಡ ಮೂಡಬಿದರೆ ಆಳ್ವಾಸ್ ಕಾಲೇಜು ಮೈದಾನದಲ್ಲಿ 31,986, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ 11,808, ಗದಗ ಎಎಸ್‍ಎಸ್ ಆರ್ಟ್ಸ್ ಕಾಲೇಜು ಮೈದಾನದಲ್ಲಿ 7842, ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 6,544, ಕಲಬುರ್ಗಿಯ ಪೊಲೀಸ್ ಪೆರೆಡ್ ಮೈದಾನದಲ್ಲಿ 16,064, ಎನ್‍ವಿ ಕಾಲೇಜು ಮೈದಾನದಲ್ಲಿ 4,461, ಕೋಲಾರದ ಶ್ರೀ ಎಂ.ವಿ. ಕ್ರೀಡಾಂಗಣದಲ್ಲಿ 16,451, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 9781, ಮಂಡ್ಯ ಪಿಇಎಸ್ ಕ್ರಿಕೆಟ್ ಮೈದಾನದಲ್ಲಿ 8,892, ಮೈಸೂರು ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,042 ಜನ ಯೋಗ ಪ್ರದರ್ಶನ ಮಾಡಿದ್ದಾರೆ,

ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ 6842, ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 5654, ಶಿವಮೊಗ್ಗ ನೆಹರು ಮೈದಾನದಲ್ಲಿ 11,743, ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ 10,083, ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯ ಮೈದಾನದಲ್ಲಿ 14,564, ಉತ್ತರ ಕನ್ನಡ ತಾಲೂಕು ಜಿಲ್ಲೆಯ ಭಟ್ಕಳ ತಾಲೂಕಾ ಮೈದಾನದಲ್ಲಿ 3594, ವಿಜಯಪುರ  ಸೈನಿಕ ಶಾಲೆಯ ಮೈದಾನದಲ್ಲಿ 36,644 ಹಾಗೂ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ 9,234 ಜನರು ಇಂದು ಯೋಗಾಸನ ಮಾಡಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳ 33 ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಮಾಡಿದ್ದಾರೆ.

ಈಗಾಗಲೇ 2018 ರಲ್ಲಿ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 1,00,984 ಜನ ಯೋಗ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಿದ್ದರು. ಇದಕ್ಕೂ ಮೊದಲು 2017 ರಲ್ಲಿ ನಮ್ಮ ರಾಜ್ಯದ ಮೈಸೂರು ನಗರದಲ್ಲಿ ಏಕಕಾಲಕ್ಕೆ 55,524 ಜನ ಯೋಗ ಪ್ರದರ್ಶನ ಮಾಡುವ ಮೂಲಕ ಗಿನ್ನೀಸ್ ದಾಖಲೆ ಮಾಡಿದ್ದರು.

ಆದರೆ ಈಗ ಇಡೀ ಕರ್ನಾಟಕ ರಾಜ್ಯದ 33 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಪ್ರದರ್ಶಿಸುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ, ಹೊಸದಾಗಿ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದ್ದಾರೆ. ರಾಜಸ್ಥಾನದಲ್ಲಿ ಯೋಗ ಪ್ರದರ್ಶಿಸಿದವರಿಗಂತ ಹೆಚ್ಚಿನ ಸಂಖ್ಯೆ ಅಂದರೆ ಮೂರುಪಟ್ಟು ಹೆಚ್ಚು ಜನ ಏಕಕಾಲಕ್ಕೆ ಶಿಸ್ತುಬದ್ಧವಾಗಿ, ಶಾಂತವಾಗಿ, ನಿಯಮಾನುಸಾರ ಯೋಗ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಚಿವ ಡಾ: ಕೆ.ಸಿ. ನಾರಾಯಣಗೌಡ ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments