Friday, October 7, 2022
Google search engine
HomeUncategorizedಏಕಕಾಲದಲ್ಲಿ ಎರಡು ಬಾರಿ ಪ್ರಾಣಾಪಾಯದಿಂದ ಬೈಕ್ ಸವಾರ ಪಾರು; ಜೀವ ಉಳಿಯಲು ನೆರವಾಯ್ತು ಹೆಲ್ಮೆಟ್

ಏಕಕಾಲದಲ್ಲಿ ಎರಡು ಬಾರಿ ಪ್ರಾಣಾಪಾಯದಿಂದ ಬೈಕ್ ಸವಾರ ಪಾರು; ಜೀವ ಉಳಿಯಲು ನೆರವಾಯ್ತು ಹೆಲ್ಮೆಟ್

ಏಕಕಾಲದಲ್ಲಿ ಎರಡು ಬಾರಿ ಪ್ರಾಣಾಪಾಯದಿಂದ ಬೈಕ್ ಸವಾರ ಪಾರು; ಜೀವ ಉಳಿಯಲು ನೆರವಾಯ್ತು ಹೆಲ್ಮೆಟ್

ಹೆಲ್ಮೆಟ್ ಮಹತ್ವ ಸಾರುವ ಕುರಿತಂತೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹೆಲ್ಮೆಟ್ ಧರಿಸಿದ ಕಾರಣಕ್ಕಾಗಿ ಭೀಕರ ಅಪಘಾತಕ್ಕೆ ತುತ್ತಾದರೂ ಸಹ ಸವಾರರ ಜೀವ ಉಳಿದಿದೆ. ಇದೀಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೆಹಲಿ ಪೊಲೀಸರು ಈ ವಿಡಿಯೋವನ್ನು ಗುರುವಾರ ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ಜನ ಇದನ್ನು ವೀಕ್ಷಿಸಿದ್ದಾರೆ. ಜೊತೆಗೆ ಇತರರಿಗೂ ಹೆಲ್ಮೆಟ್ ಧರಿಸುವುದರ ಮಹತ್ವ ತಿಳಿಸಲು 5,000ಕ್ಕೂ ಅಧಿಕ ಮಂದಿ ಇದನ್ನು ರೀ ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿರುವಂತೆ ಬೈಕ್ ನಲ್ಲಿ ಹೋಗುತ್ತಿದ್ದ ಸವಾರನೊಬ್ಬ ಕಾರು ಅಡ್ಡ ಬಂದ ಕಾರಣ ವಿಚಲಿತಗೊಂಡು ಏಕಾಏಕಿ ಬ್ರೇಕ್ ಹಾಕಿದ್ದು, ಇದರ ಪರಿಣಾಮ ನೆಲಕ್ಕೆ ಬಿದ್ದು ಜಾರಿಕೊಂಡು ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ಈತನ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಅದು ನೇರವಾಗಿ ಮೇಲೆ ಏಳುತ್ತಿದ್ದ ಸವಾರನ ಮೇಲೆ ಬಿದ್ದಿದೆ. ಇದರಿಂದಾಗಿ ಆತ ಮತ್ತೆ ಕುಸಿದು ಬಿದ್ದಿದ್ದು ಆದರೆ ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments