Friday, March 24, 2023
Google search engine
HomeUncategorizedಎಳನೀರು ಕುಡಿದ ಬಳಿಕ ಗಂಜಿಯನ್ನು ಎಸೆಯಬೇಡಿ, ಅದರಲ್ಲೇ ಇದೆ ಆರೋಗ್ಯದ ಗುಟ್ಟು….!

ಎಳನೀರು ಕುಡಿದ ಬಳಿಕ ಗಂಜಿಯನ್ನು ಎಸೆಯಬೇಡಿ, ಅದರಲ್ಲೇ ಇದೆ ಆರೋಗ್ಯದ ಗುಟ್ಟು….!

ಎಳನೀರು ಕುಡಿದ ಬಳಿಕ ಗಂಜಿಯನ್ನು ಎಸೆಯಬೇಡಿ, ಅದರಲ್ಲೇ ಇದೆ ಆರೋಗ್ಯದ ಗುಟ್ಟು….!

ಎಳನೀರಿಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ದೇಹವನ್ನು ಹೈಡ್ರೇಟ್‌ ಆಗಿಡಬಲ್ಲ ಅಗ್ಗದ ಮತ್ತು ಆರೋಗ್ಯಕರ ಪಾನೀಯ ಇದು. ಇದರ ರುಚಿ ಕೂಡ ಅನೇಕ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಸಮುದ್ರ ತೀರದಿಂದ ಹಿಡಿದು ಮಹಾನಗರಗಳವರೆಗೆ ಎಲ್ಲರೂ ಎಳನೀರು ಸವಿಯುವ ಚಾನ್ಸ್‌ ಮಿಸ್‌ ಮಾಡಿಕೊಳ್ಳುವುದಿಲ್ಲ. ಆದರೆ ಹೆಚ್ಚಿನ ಜನರು ಎಳನೀರು ಕುಡಿದ ನಂತರ ಅದರ ಕೆನೆ ಎಸೆಯುವುದನ್ನು ನೀವು ನೋಡಿರಬೇಕು. ಈ ರೀತಿ ಮಾಡುವುದು ಸೂಕ್ತವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಎಳನೀರು ಕುಡಿದ ಬಳಿಕ ಅದರಲ್ಲಿರುವ ಗಂಜಿ ಅಥವಾ ಕೊಬ್ಬರಿ ತಿನ್ನಬೇಕು, ಇಲ್ಲದಿದ್ದರೆ ಅದರ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ.

ತೂಕ ನಷ್ಟದಲ್ಲಿ ಪರಿಣಾಮಕಾರಿ

ಎಳನೀರಿನ ಗಂಜಿ ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ ಎಂದು ಅನೇಕರು ನಂಬಿದ್ದಾರೆ. ಇದರಿಂದಾಗಿ ಬೊಜ್ಜು ಬರುವ ಅಪಾಯವಿದೆ ಎಂದುಕೊಂಡಿದ್ದಾರೆ.  ಆದರೆ ಇದು ನಿಜವಲ್ಲ, ನೀವು ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ತೂಕ ಇಳಿಸಬಹುದು. ಹೊಟ್ಟೆ ಮತ್ತು ಸೊಂಟದ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಕಾರಿ

ಅಜೀರ್ಣದ ಸಮಸ್ಯೆ ಇರುವವರು . ಎಳನೀರಿನಲ್ಲಿರುವ ಕೆನೆಯನ್ನು ತಿನ್ನಬೇಕು.  ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸೂಪರ್‌ಫುಡ್‌ನಂತೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ನಮ್ಮ ಕರುಳನ್ನು ಆರೋಗ್ಯಕರವಾಗಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚ

ಕರೋನಾ ಬಳಿಕ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಜಾಗೃತರಾಗಿದ್ದಾರೆ. ಎಳನೀರು ಮತ್ತು ಅದರಲ್ಲಿರುವ ಗಂಜಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಮುಖದಲ್ಲಿ ಕಾಂತಿ ಹೆಚ್ಚಳ

ನಮ್ಮ ಮುಖದ ಚರ್ಮವು ಬೇಸಿಗೆಯಲ್ಲಿ ಹವಾಮಾನ ಮತ್ತು ತೇವಾಂಶದ ಉಷ್ಣತೆಯಿಂದ ಹೊಳಪು ಕಳೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಎಳನೀರು ಮತ್ತು ಗಂಜಿಯನ್ನು ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ವಯಸ್ಸಾದ ಪರಿಣಾಮವು ಕಡಿಮೆಯಾಗಲು ಪ್ರಾರಂಭಿಸುತ್ತದೆ.

ತ್ವರಿತ ಶಕ್ತಿಯ ಮೂಲ

ಬೇಸಿಗೆಯಲ್ಲಿ ಅನೇಕ ಬಾರಿ ಸುಡುವ ಬಿಸಿಲು, ತೇವಾಂಶ ಮತ್ತು ಬೆವರುವಿಕೆಯಿಂದ ನಾವು ಸುಸ್ತಾಗಿಬಿಡುತ್ತೇವೆ. ಅಂತಹ ಸಂದರ್ಭದಲ್ಲಿ ಎಳನೀರು ಮತ್ತದರ ಕೆನೆಯನ್ನು ಸೇವಿಸಬೇಕು. ಆಗ ದೇಹದಲ್ಲಿ ಶಕ್ತಿಯ ಪರಿಚಲನೆಯು ವೇಗವಾಗಿರುತ್ತದೆ ಮತ್ತು ಉಲ್ಲಾಸವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments