Friday, October 7, 2022
Google search engine
HomeUncategorizedಎಚ್ಚರ…! ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಿದರೆ ಕಾದಿದೆ ಶಿಕ್ಷೆ

ಎಚ್ಚರ…! ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಿದರೆ ಕಾದಿದೆ ಶಿಕ್ಷೆ

ಎಚ್ಚರ…! ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಿದರೆ ಕಾದಿದೆ ಶಿಕ್ಷೆ

ಕೆಲವೊಂದು ಜಿಮ್ ಗಳಲ್ಲಿ ಕಟ್ಟುಮಸ್ತಾದ ದೇಹ ಹೊಂದುವ ಭರವಸೆ ನೀಡಿ ಅಕ್ರಮವಾಗಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ಈ ರೀತಿ ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹೌದು, ವಿಧಾನಸಭೆಯಲ್ಲಿ ಮಂಗಳವಾರದಂದು ಶಾಸಕ ಸತೀಶ್ ರೆಡ್ಡಿ ಈ ಕುರಿತಂತೆ ವಿಷಯ ಪ್ರಸ್ತಾಪಿಸಿ, ಜಿಮ್ ಗಳಲ್ಲಿ ಅಕ್ರಮವಾಗಿ ಪ್ರೊಟೀನ್ ಪೌಡರ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಗಮನವಹಿಸುವಂತೆ ಮನವಿ ಮಾಡಿದರು.

ಇದಕ್ಕೆ ಬಹಳಷ್ಟು ಶಾಸಕರು ಪ್ರತಿಕ್ರಿಯಿಸಿದ್ದು, ಇಂತಹ ಕಾನೂನು ಬಾಹಿರ ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆಹಾರ ಸುರಕ್ಷತಾ ಇಲಾಖೆ ಮೂಲಕ ಜನ ಜಾಗೃತಿ ಕೈಗೊಳ್ಳಲಾಗುತ್ತದೆ. ಈ ಅಕ್ರಮದಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments