Sunday, April 2, 2023
Google search engine
HomeUncategorizedಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ ಫೋಟೋ ಸಾಕ್ಷಿಯಾಗಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ರಾಯ್‌ಪುರದ ಸಬ್‌ವೇ ಔಟ್‌ಲೆಟ್‌ನಲ್ಲಿ ಕ್ಲಿಕ್ ಮಾಡಲಾದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಅಧ್ಯಯನ ಮಾಡುವುದನ್ನು ನೋಡಬಹುದು.

ಕರೀನಾ ಎಂಬ ಈ ಯುವತಿ ಅಂಬುಜಾ ಮಾಲ್‌ನಲ್ಲಿರುವ ಸಬ್‌ವೇ ಔಟ್‌ಲೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಗ್ರಾಹಕರಿಗೆ ಅಡುಗೆ ಮಾಡುವುದರ ಜೊತೆಗೆ ಸ್ವಲ್ಪ ಬಿಡುವು ಸಿಕ್ಕರೂ ಅಲ್ಲಿಯೇ ಪುಸ್ತಕ ಹಿಡಿದು ಅಧ್ಯಯನ ಮಾಡುತ್ತಾರೆ.

ಈ ಚಿತ್ರವನ್ನು ಶೇರ್‌ ಮಾಡಿಕೊಂಡಾಗಿನಿಂದ ಹಲವರು ಶ್ಲಾಘನೆಗಳ ಸುರಿಮಳೆಗೈಯುತ್ತಿದ್ದಾರೆ. ಇಂಥವರು ಅಲ್ಲಲ್ಲಿ ಕಾಣಸಿಗುತ್ತಾರೆ. ಇವರು ಎಲ್ಲರಿಗೂ ಮಾದರಿ ಎಂದು ಹಲವರು ಕಮೆಂಟ್‌ ಮೂಲಕ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments