Thursday, August 11, 2022
Google search engine
HomeUncategorizedಈ ರಾಶಿಯ ವಿದ್ಯಾರ್ಥಿಗಳಿಗಿದೆ ಉತ್ತಮ ಸಮಯ

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಉತ್ತಮ ಸಮಯ

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಉತ್ತಮ ಸಮಯ

ಮೇಷ ರಾಶಿ

ಆರ್ಥಿಕ ಯೋಜನೆಗಳಲ್ಲಿ ಆರಂಭಿಕ ಅಡಚಣೆ ಎದುರಾಗಲಿದೆ. ಆದ್ರೂ ಕಾರ್ಯ ಯಶಸ್ವಿಯಾಗುತ್ತದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಆನಂದ ದೊರೆಯಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣವಿದೆ.

ವೃಷಭ ರಾಶಿ

ಇವತ್ತು ನಿಮ್ಮ ಮನಸ್ಸು ವೈಚಾರಿಕತೆಯತ್ತ ಆಕರ್ಷಿತವಾಗಲಿದೆ. ಅಧಿಕ ಸಂವೇದನಾಶೀಲನೆ ಮತ್ತು ಭಾವುಕತೆ ಉಂಟಾಗಲಿದೆ. ಇಂದು ಯಾರೊಂದಿಗೂ ವಾದ-ವಿವಾದದಲ್ಲಿ ತೊಡಗಿಕೊಳ್ಳಬೇಡಿ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲಿದ್ದೀರಿ. ಅಧಿಕ ಹಣ ಖರ್ಚಾಗದಂತೆ ಎಚ್ಚರ ವಹಿಸಿ.

ಕರ್ಕ ರಾಶಿ

ಇಂದು ನಿಮ್ಮ ಆದಾಯ ಮತ್ತು ಖರ್ಚು ಎರಡೂ ಅಧಿಕವಾಗಿರುತ್ತದೆ. ಕಣ್ಣಿನ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮಾತಿನ ಮೇಲೆ ಸಂಯಮವಿರಲಿ. ಯಾವುದೇ ರೀತಿಯ ಭ್ರಮೆಗೆ ಒಳಗಾಗಬೇಡಿ.

ಸಿಂಹ ರಾಶಿ

ಇಂದು ನಿಮ್ಮ ಮನಸ್ಸಿನಲ್ಲಿ ಕೋಪ ಮತ್ತು ಆವೇಶ ಹೆಚ್ಚಾಗಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ವ್ಯವಹರಿಸಿ. ಆರೋಗ್ಯವೂ ಹದಗೆಡುವ ಸಾಧ್ಯತೆ ಇದೆ. ಮನಸ್ಸು ವ್ಯಗ್ರವಾಗಿರುತ್ತದೆ.

ಕನ್ಯಾ ರಾಶಿ

ಬೆಳಗಿನ ಸಮಯ ಆನಂದಮಯವಾಗಿ, ಲಾಭಕರವಾಗಿದೆ. ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಲಾಭವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ದೊರೆಯಲಿದೆ. ಕುಟುಂಬದಲ್ಲೂ ಸಂತೋಷ ತುಂಬಿರುತ್ತದೆ.

ತುಲಾ ರಾಶಿ

ಶಾರೀರಿಕ ಮತ್ತು ಮಾನಸಿಕ ಸುಖ ದೊರೆಯುತ್ತದೆ. ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದೀರಿ. ಪದೋನ್ನತಿ ಯೋಗವಿದೆ. ಸರ್ಕಾರಿ ಕಾರ್ಯ ಸರಳವಾಗಿ ಪೂರ್ಣಗೊಳ್ಳಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.

ವೃಶ್ಚಿಕ ರಾಶಿ

ಇಂದು ನೀವು ಎಚ್ಚರಿಕೆಯಿಂದ ಇರುವುದು ಒಳಿತು. ಕೋಪದಿಂದ ಹಾನಿಯಾಗಬಹುದು. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಕಾಡುತ್ತದೆ. ಹಿರಿಯ ಅಧಿಕಾರಿಗಳ ವರ್ತನೆ ನಕಾರಾತ್ಮಕವಾಗಿರುತ್ತದೆ.

ಧನು ರಾಶಿ

ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ವಾದ-ವಿವಾದದಲ್ಲಿ ತೊಡಗಿಕೊಳ್ಳಬೇಡಿ. ವ್ಯಾಪಾರ ಕ್ಷೇತ್ರದಲ್ಲಿ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ಮಕರ ರಾಶಿ

ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ವಾಹನ ಸುಖ ಪ್ರಾಪ್ತಿಯಾಗಲಿದೆ. ಗೌರವ ಪ್ರತಿಷ್ಠೆ ಹೆಚ್ಚಲಿದೆ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇವತ್ತು ನಿಮಗೆ ಶುಭ ದಿನ. ಕಲೆಯ ಬಗ್ಗೆ ಒಲವು ಹೆಚ್ಚಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಮೀನ ರಾಶಿ

ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ವೃದ್ಧಿಯಾಗುತ್ತದೆ. ಮಧ್ಯಾಹ್ನದ ನಂತರ ಮನರಂಜನಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments