Friday, March 24, 2023
Google search engine
HomeUncategorizedಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಪ್ರಾಪ್ತಿ

ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಪ್ರಾಪ್ತಿ

ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಪ್ರಾಪ್ತಿ

ಮೇಷ: ಹಿತಶತ್ರುಗಳ ಕಾಟ ನಿಮ್ಮನ್ನ ಭಾದಿಸಲಿದೆ. ದಿನಸಿ ವ್ಯಾಪಾರಿಗಳು ಅಭಿವೃದ್ಧಿ ಕಾಣಲಿದ್ದಾರೆ. ಕ್ರೀಡಾಳುಗಳು ಉತ್ತಮ ಸುದ್ದಿಯನ್ನ ಕೇಳುತ್ತೀರಾ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ವೃತ್ತಿರಂಗದಲ್ಲಿ ಕೊಂಚ ಕಿರಿಕಿರಿ ಇರಲಿದೆ. ಕುಲದೇವತೆಯನ್ನ ಪ್ರಾರ್ಥಿಸಿ.

ವೃಷಭ : ನೆಂಟರಿಷ್ಟರಿಂದ ಉತ್ತಮ ಸಲಹೆಯನ್ನ ಸ್ವೀಕರಿಸುತ್ತೀರ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ದವಸ ಧಾನ್ಯಗಳನ್ನ ದಾನ ಮಾಡಿ. ಶುಭ ಲಾಭವಿದೆ.

ಮಿಥುನ : ಪಿರ್ತಾಜ್ರಿತ ಆಸ್ತಿ ವಿಚಾರದಲ್ಲಿ ಇದ್ದ ಕಿರಿಕಿರಿಯೆಲ್ಲ ದೂರವಾಗಿ ನಿಮ್ಮ ಪಾಲು ನ್ಯಾಯಯುತವಾಗಿ ನಿಮ್ಮ ಕೈ ಸೇರಲಿದೆ. ಕೌಟುಂಬಿಕ ವಿಚಾರದಲ್ಲಿ ಕೊಂಚ ಕಿರಿಕಿರಿ ಎದುರಿಸುತ್ತೀರಾ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಆಂಜನೇಯ ಮಂತ್ರ ಪಠಿಸಿ.

ಕಟಕ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ವೃತ್ತಿರಂಗದಲ್ಲಿ ನೀವು ಪಾಲಿಸಿಕೊಂಡು ಬರುತ್ತಿರುವ ನಿಷ್ಠೆ ನಿಮ್ಮನ್ನ ಕಾಪಾಡಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮನಸ್ಸಿಗೆ ನೆಮ್ಮದಿ ಇದೆ.

ಸಿಂಹ : ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸೋದು ಅತ್ಯಗತ್ಯ. ಹೊಸ ಉದ್ಯಮಗಳಿಗೆ ಬಂಡವಾಳ ಹೂಡಿಕೆ ಮಾಡಲು ಇದು ಸಕಾಲವಲ್ಲ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ವಾರ್ತೆ ಕಾದಿದೆ.

ಕನ್ಯಾ : ದಾಂಪತ್ಯ ಜೀವನದಲ್ಲಿ ಇದ್ದ ಕಲಹಗಳು ದೂರಾಗಿ ನೆಮ್ಮದಿ ನೆಲೆಸಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಾದಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.

ತುಲಾ : ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗಿಟ್ಟಿಸುವ ಕೆಲಸವನ್ನ ನೀವು ಮಾಡಲಿದ್ದೀರಿ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ಮಾಡಲಿದ್ದೀರಿ.

ವೃಶ್ಚಿಕ: ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭ ವಾರ್ತೆಯನ್ನ ಕೇಳುತ್ತೀರಾ. ದೂರ ಪ್ರಯಾಣ ಮಾಡೋದು ಒಳ್ಳೆಯದಲ್ಲ. ಆದ್ದರಿಂದ ಜಾಗರೂಕರಾಗಿರಿ. ಶೀತ, ಜ್ವರದಂತಹ ಸಮಸ್ಯೆ ನಿಮ್ಮನ್ನ ಕಾಡಬಹುದು.

ಧನು : ಲಾಟರಿ ವ್ಯವಹಾರದಲ್ಲಿ ಇಳಿದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಕುಂಠಿತವಾಗಿರಲಿದೆ. ವೃತ್ತಿರಂಗದಲ್ಲಿ ಬಡ್ತಿ ಸಿಕ್ಕರೂ ಸಹ ನೆಮ್ಮದಿ ಇರೋದಿಲ್ಲ. ಸಂಗಾತಿಯ ಸಲಹೆಯನ್ನ ಸ್ವೀಕಾರ ಮಾಡಿ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿರಲಿದೆ.

ಮಕರ: ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ರಾಜಕೀಯ ರಂಗದವರು ಕೊಂಚ ಕಿರಿಕಿರಿ ಅನುಭವಿಸಲಿದ್ದೀರಿ. ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ.

ಕುಂಭ : ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗೋದ್ರಿಂದ ನಿಮ್ಮ ದಿನ ಆತಂಕದಲ್ಲಿಯೇ ಸಾಗಲಿದೆ. ಹೊಸ ಉದ್ಯಮಗಳಿಗೆ ಬಂಡವಾಳ ಹೂಡಿಕೆ ಮಾಡಲು ಇದು ಸಕಾಲವಲ್ಲ.

ಮೀನ : ಕುಟುಂಬದಲ್ಲಿ ಅಸಮಾಧಾನದ ವಾತಾವರಣ ಉಂಟಾಗಲಿದೆ. ಆರ್ಥಿಕವಾಗಿ ಅಭಿವೃದ್ಧಿ ಕಾಣಲಿದ್ದೀರಿ. ವೃತ್ತಿರಂಗದಲ್ಲಿ ಹಲವು ಸ್ಪರ್ಧೆಯನ್ನ ಎದುರಿಸಬೇಕಾಗಿ ಬರಬಹುದು. ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ನೀಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments