Sunday, March 26, 2023
Google search engine
HomeUncategorizedಈ ರಾಶಿಯ ಉದ್ಯೋಗಿಗಳಿಗೆ ಇದೆ ಇಂದು ಲಾಭ

ಈ ರಾಶಿಯ ಉದ್ಯೋಗಿಗಳಿಗೆ ಇದೆ ಇಂದು ಲಾಭ

ಈ ರಾಶಿಯ ಉದ್ಯೋಗಿಗಳಿಗೆ ಇದೆ ಇಂದು ಲಾಭ

ಮೇಷ ರಾಶಿ

ಇವತ್ತು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಯಾರೊಂದಿಗೂ ಉಗ್ರ ಚರ್ಚೆ ನಡೆಯದಂತೆ ಎಚ್ಚರ ವಹಿಸಿ. ಶಾರೀರಿಕ ಮತ್ತು ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗುತ್ತದೆ.

ವೃಷಭ ರಾಶಿ

ಓದು-ಬರಹದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಂದ ಸಾಧ್ಯವಾಗುವುದಿಲ್ಲ. ಮಧ್ಯಾಹ್ನದ ನಂತರ ನಿಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಂದು ಹೊಸ ಕೆಲಸ ಆರಂಭಿಸುವ ಧೈರ್ಯ ಮಾಡಬಹುದು.

ಮಿಥುನ ರಾಶಿ

ಇಂದು ಹೊಸ ಕಾರ್ಯ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಆತ್ಮೀಯರನ್ನು ಭೇಟಿಯಾಗಿ ಆನಂದವಾಗಿ ಕಾಲ ಕಳೆಯಲಿದ್ದೀರಿ. ಪ್ರತಿಸ್ಪರ್ಧಿಗಳ ವಿರುದ್ಧ ಜಯಶಾಲಿಗಳಾಗುತ್ತೀರಿ.

ಕರ್ಕ ರಾಶಿ

ಸಣ್ಣದೊಂದು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಇವತ್ತು ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ.

ಸಿಂಹ ರಾಶಿ

ಇವತ್ತು ಯಾವುದೇ ನಿರ್ಣಯ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಹಾಗಾಗಿ ಯಾವುದೇ ಅವಶ್ಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕುಟುಂಬದ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ. ಮಾತಿನ ಮೇಲೆ ಸಂಯಮ ಇರಲಿ.

ಕನ್ಯಾ ರಾಶಿ

ಆರೋಗ್ಯ ಉತ್ತಮವಾಗಿರುತ್ತದೆ. ಖುಷಿಯಾಗಿ ದಿನ ಕಳೆಯಲಿದ್ದೀರಿ. ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಲಾಭವಾಗಲಿದೆ. ಹಿರಿಯ ಅಧಿಕಾರಿಗಳು ಸಂತುಷ್ಟರಾಗಿರುವುದರಿಂದ ಪದೋನ್ನತಿ ಯೋಗವಿದೆ.

ತುಲಾ ರಾಶಿ

ವ್ಯಾಪಾರದಲ್ಲಿ ಹಿರಿಯ ಅಧಿಕಾರಿಗಳಿಂದ ಲಾಭವಿದೆ. ಆರ್ಥಿಕ ಆಯೋಜನೆ ಯಾವುದೇ ವಿಘ್ನಗಳಿಲ್ಲದೆ ಪೂರ್ಣಗೊಳ್ಳಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಮಾನಸಿಕವಾಗಿ ಶಾಂತಿಯ ಅನುಭವವಾಗುತ್ತದೆ. ಮಕ್ಕಳಿಂದ ಸುಖ ಪ್ರಾಪ್ತಿಯಿದೆ.

ವೃಶ್ಚಿಕ ರಾಶಿ

ಧನಲಾಭದ ಸಾಧ್ಯತೆ ಇದೆ. ಉದ್ಯಮದಲ್ಲಿ ಪದೋನ್ನತಿ ಯೋಗವಿದೆ. ಪ್ರತಿ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ತಾಯಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ಗೌರವ – ಪ್ರತಿಷ್ಠೆ ದೊರೆಯಲಿದೆ. ಗೃಹಸ್ಥ ಜೀವನ ಉತ್ತಮವಾಗಿರುತ್ತದೆ.

ಧನು ರಾಶಿ

ಆರ್ಥಿಕ ತೊಂದರೆಗಳು ಎದುರಾಗಬಹುದು. ಮಧ್ಯಾಹ್ನದ ನಂತರ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆಕಸ್ಮಿಕ ಧನಪ್ರಾಪ್ತಿ ಯೋಗವಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ

ಇವತ್ತು ಕುಟುಂಬದವರೊಡನೆ ಪ್ರವಾಸ ಕೈಗೊಳ್ಳಲಿದ್ದೀರಿ. ಮಧ್ಯಾಹ್ನದ ನಂತರ ಮನಸ್ಸಿನಲ್ಲಿ ವ್ಯಗ್ರತೆಯ ಅನುಭವವಾಗಲಿದೆ. ಖರ್ಚು ಹೆಚ್ಚಾಗುವುದರಿಂದ ಹಣಕಾಸಿನ ಸಮಸ್ಯೆ ಎದುರಾಗಬಹುದು.

ಕುಂಭ ರಾಶಿ

ಗಣೇಶನ ಆಶೀರ್ವಾದದಿಂದ ಇವತ್ತು ಸುಖ –ಶಾಂತಿಯಿಂದ ದಿನ ಕಳೆಯಲಿದ್ದೀರಿ. ಕುಟುಂಬದಲ್ಲೂ ಆನಂದದ ವಾತಾವರಣವವಿರುತ್ತದೆ. ಮನರಂಜನೆ ಹಾಗೂ ವಾಹನ ಸುಖದ ಯೋಗವಿದೆ.

ಮೀನ ರಾಶಿ

ಯಾವುದೇ ವ್ಯಕ್ತಿಯೊಂದಿಗೆ ಬೌದ್ಧಿಕ ಚರ್ಚೆ ಅಥವಾ ವಾದ-ವಿವಾದದಲ್ಲಿ ತೊಡಗಬೇಡಿ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಣೆಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments