Monday, December 5, 2022
Google search engine
HomeUncategorizedಈ ರಾಶಿಯ ಉದ್ಯೋಗಿಗಳಿಗಿದೆ ಇಂದು ಹೆಚ್ಚಿನ ಲಾಭ

ಈ ರಾಶಿಯ ಉದ್ಯೋಗಿಗಳಿಗಿದೆ ಇಂದು ಹೆಚ್ಚಿನ ಲಾಭ

ಈ ರಾಶಿಯ ಉದ್ಯೋಗಿಗಳಿಗಿದೆ ಇಂದು ಹೆಚ್ಚಿನ ಲಾಭ

ಮೇಷ ರಾಶಿ

ಹೊಸ ಕಾರ್ಯ ಆರಂಭಿಸಲು ಪ್ರೇರಣೆ ಸಿಗಲಿದೆ. ನಿಮ್ಮ ವಿಚಾರಗಳಲ್ಲಿ ಸ್ಥಿರತೆ ಇರುವುದಿಲ್ಲ. ಕೆಲವೊಂದು ವಿಷಯಗಳಲ್ಲಿ ಗೊಂದಲ ಕಾಡಬಹುದು. ಸ್ಪರ್ಧಾತ್ಮಕ ವಾತಾವರಣವಿರುತ್ತದೆ.

ವೃಷಭ ರಾಶಿ

ಇಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ, ಆದ್ರೆ ಕೊಂಚ ವಿಳಂಬವಾಗಬಹುದು. ನಿರಂತರ ಪ್ರಯತ್ನದಿಂದ ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ಆರ್ಥಿಕ ಆಯೋಜನೆಗೆ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ಸ್ಪೂರ್ತಿಯ ಅನುಭವವಾಗುತ್ತದೆ. ಉತ್ತಮ ಭೋಜನ, ವಸ್ತ್ರಾಲಂಕಾರ, ಮಿತ್ರರು ಸಂಬಂಧಿಕರ ಭೇಟಿಯಿಂದ ದಿನ ಆನಂದವಾಗಿ ಕಳೆಯಲಿದೆ. ದಾಂಪತ್ಯ ಜೀವನದಲ್ಲಿ ಸುಖ-ಸಮೃದ್ಧಿಯಿರುತ್ತದೆ.

ಕರ್ಕ ರಾಶಿ

ಸರಳವಾಗಿ ಕೆಲಸ ಪೂರ್ಣಗೊಳಿಸಲಿದ್ದೀರಿ. ಗೌರವ ಪ್ರತಿಷ್ಠೆ ವೃದ್ಧಿಸಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.

ಸಿಂಹ ರಾಶಿ

ಹೊಸ ಯೋಜನೆ ಆರಂಭಿಸಲು ಶುಭ ದಿನ. ಸರ್ಕಾರದಿಂದ ನಿಮಗೆ ಲಾಭವಾಗಲಿದೆ. ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ, ಪ್ರೋತ್ಸಾಹ ಕೂಡ ದೊರೆಯಲಿದೆ.

ಕನ್ಯಾ ರಾಶಿ

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಸುಖಮಯ ಪ್ರಸಂಗಗಳು ನಡೆಯುತ್ತವೆ. ಹೆಚ್ಚು ಹಣ ಖರ್ಚಾಗಲಿದೆ.

ತುಲಾ ರಾಶಿ

ಇಂದು ನಿಮಗೆ ಖುಷಿ ಮತ್ತು ಯಶಸ್ಸು ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ಉದ್ಯೋಗಿಗಳಿಗೆ ಹೆಚ್ಚಿನ ಲಾಭವಿದೆ.

ವೃಶ್ಚಿಕ ರಾಶಿ

ಯಾವುದೇ ಕಾರ್ಯದಲ್ಲಿ ಯೋಚಿಸಿ ಮುಂದಡಿ ಇಡಿ. ಒಡಹುಟ್ಟಿದವರೊಂದಿಗೆ ಆತ್ಮೀಯ ಸಂಬಂಧವಿರಲಿ. ಮಿತ್ರರು ಸಂಬಂಧಿಕರ ಭೇಟಿಯಾಗಲಿದೆ. ಅಂದುಕೊಂಡ ಕಾರ್ಯ ಕೈಗೂಡಲಿದೆ.

ಧನು ರಾಶಿ

ಮನಸ್ಸಿನಲ್ಲಿ ವ್ಯಾಕುಲತೆ ಮತ್ತು ಅಶಾಂತಿ ತುಂಬಿರುತ್ತದೆ. ಶಾರೀರಿಕವಾಗಿ ಆಯಾಸದ ಅನುಭವವಾಗಲಿದೆ. ಹಿರಿಯ ಅಧಿಕಾರಿಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು.

ಮಕರ ರಾಶಿ

ವ್ಯಾಪಾರವನ್ನು ವಿಸ್ತರಿಸಲು ಸಮಯ ಅನುಕೂಲಕರವಾಗಿದೆ. ಆರ್ಥಿಕ ಯೋಜನೆಯನ್ನೂ ರೂಪಿಸಬಹುದು. ಬಾಕಿ ವಸೂಲಿ ಮತ್ತು ಹಣಕಾಸು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.

ಕುಂಭ ರಾಶಿ

ಉದ್ಯೋಗಿಗಳಿಗೆ ಪದೋನ್ನತಿಗಾಗಿ ಹೊಸ ಮಾರ್ಗ ಗೋಚರಿಸಲಿದೆ. ಈಗ ನೀವು ಮಾಡುತ್ತಿರುವ ಕೆಲಸ ಭವಿಷ್ಯದಲ್ಲಿ ಲಾಭ ತಂದುಕೊಡಲಿದೆ. ಹಿಂದೆ ಮಾಡಿದ ಕೆಲಸಗಳಿಂದ ಲಾಭ ದೊರೆಯುತ್ತದೆ.

ಮೀನ ರಾಶಿ

ಇಂದು ಅತ್ಯಂತ ಸಮಾಧಾನದಿಂದಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಮಾನಸಿಕ ಉದ್ವೇಗ, ಧನ ಮತ್ತು ಮಾನಹಾನಿಯಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments