Thursday, August 11, 2022
Google search engine
HomeUncategorizedಈ ರಾಶಿಯವರ ಮನೆಯಲ್ಲಿರಲಿದೆ ಇಂದು ಆನಂದದ ವಾತಾವರಣ

ಈ ರಾಶಿಯವರ ಮನೆಯಲ್ಲಿರಲಿದೆ ಇಂದು ಆನಂದದ ವಾತಾವರಣ

ಈ ರಾಶಿಯವರ ಮನೆಯಲ್ಲಿರಲಿದೆ ಇಂದು ಆನಂದದ ವಾತಾವರಣ

ಮೇಷ ರಾಶಿ

ಮಾತಿನ ಮೇಲೆ ಹಿಡಿತವಿರಲಿ. ಇಲ್ಲದೇ ಹೋದಲ್ಲಿ ಅನಾವಶ್ಯಕ ವಾದ ವಿವಾದಗಳಿಂದ ಭಿನ್ನಾಭಿಪ್ರಾಯ ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಊಟ ದೊರೆಯವ ಸಾಧ್ಯತೆಯಿಲ್ಲ. ಖರ್ಚನ್ನು ಕಡಿಮೆ ಮಾಡಿ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.

ವೃಷಭ ರಾಶಿ

ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಕಲಹ ಉಂಟಾಗಬಹುದು. ಇವತ್ತು ಆದಾಯ ಕಡಿಮೆ ಮತ್ತು ಖರ್ಚು ಅಧಿಕ. ಈಶ್ವರನ ಧ್ಯಾನ ಮತ್ತು ಆಧ್ಯಾತ್ಮಿಕತೆಯಿಂದ ಮನಸ್ಸು ಶಾಂತವಾಗಬಹುದು.

ಮಿಥುನ ರಾಶಿ

ಕಚೇರಿಯಲ್ಲಿ ನಿಮ್ಮ ಪ್ರಭಾವ ಇತರರ ಮೇಲಾಗಲಿದೆ. ನಿಮ್ಮ ಕೆಲಸ ಹಿರಿಯ ಅಧಿಕಾರಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಅವರು ಸಂತುಷ್ಟಗೊಳ್ಳುತ್ತಾರೆ. ಕೆಲಸಗಳನ್ನೆಲ್ಲ ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಮಾಡುತ್ತೀರಿ.

ಕರ್ಕ ರಾಶಿ

ಇಂದು ಧಾರ್ಮಿಕ ಕಾರ್ಯಗಳಲ್ಲಿ ಸಮಯ ಕಳೆಯಲಿದ್ದೀರಿ. ಸ್ನೇಹಿತರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ಅಧಿಕ ಶ್ರಮವಹಿಸಿ ಎಲ್ಲಾ ಕೆಲಸ ಪೂರ್ಣಗೊಳಿಸುತ್ತೀರಿ. ನ್ಯಾಯಯುತವಾಗಿ ವ್ಯವಹಾರ ನಡೆಸಲಿದ್ದೀರಿ.

ಸಿಂಹ ರಾಶಿ

ಮನಸ್ಸು ಚಿಂತೆಯಿಂದ ವ್ಯಗ್ರವಾಗಲಿದೆ. ಆಯಾಸ ಮತ್ತು ನಿಶ್ಯಕ್ತಿಯ ಅನುಭವವಾಗಲಿದೆ. ಇದರಿಂದ ಕೆಲಸದ ವೇಗ ಕುಂಠಿತವಾಗಲಿದೆ. ಕಚೇರಿಯಲ್ಲಿ ನಿಮ್ಮೊಂದಿಗೆ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ನಡವಳಿಕೆ ನಕಾರಾತ್ಮಕವಾಗಿರಲಿದೆ.

ಕನ್ಯಾ ರಾಶಿ

ಯಾರ ಜೊತೆಗೂ ವಾದ-ವಿವಾದ ಅಥವಾ ಜಗಳ ಮಾಡಬೇಡಿ. ಮಾತು ಮತ್ತು ನಡವಳಿಕೆಯಲ್ಲಿ ಸಂಯಮವಿರಲಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತು ನಿಮಗೆ ಭರಪೂರ ಮನರಂಜನೆ ದೊರೆಯಲಿದೆ. ಸ್ನೇಹಿತರೊಂದಿಗೆ ಪಾರ್ಟಿ ಅಥವಾ ಪಿಕ್ನಿಕ್ ಗೆ ಹೋಗುವ ಸಾಧ್ಯತೆ ಇದೆ. ವಸ್ತ್ರ, ಆಭರಣ, ವಾಹನ ಮತ್ತು ಭೋಜನ ಸುಖ ದೊರೆಯಲಿದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಅನುಕೂಲಕರ ದಿನ. ಮನೆಯಲ್ಲಿ ಆನಂದದ ವಾತಾವರಣವಿರಲಿದೆ. ದೇಹದ ಆರೋಗ್ಯ ಉತ್ತಮವಾಗಿರಲಿದೆ. ಮನಸ್ಸು ಕೂಡ ಉಲ್ಲಾಸದಿಂದಿರುತ್ತದೆ. ಉದ್ಯೋಗ ಮತ್ತು ಉದ್ಯಮ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿರುತ್ತದೆ.

ಧನು ರಾಶಿ

ಮಾನಸಿಕವಾಗಿ ಬಹಳಷ್ಟು ಚಿಂತೆ ನಿಮ್ಮನ್ನು ಕಾಡಲಿದೆ. ಉದ್ಯಮ ಕ್ಷೇತ್ರದಲ್ಲಿ ಅದೃಷ್ಟವಿಲ್ಲ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತುಷ್ಟರಾಗುವುದಿಲ್ಲ. ಮನಸ್ಸಿನಲ್ಲಿ ಗೊಂದಲವಿರುವುದರಿಂದ ನಿರ್ಣಯ ತೆಗೆದುಕೊಳ್ಳುವಲ್ಲಿ ಹಿನ್ನಡೆಯಾಗಲಿದೆ.

ಮಕರ ರಾಶಿ

ನಿಮ್ಮ ಹಠಮಾರಿತನದ ಸ್ವಭಾವವನ್ನು ಬದಲಾಯಿಸಿಕೊಳ್ಳಿ. ಅಧಿಕ ಭಾವುಕತೆಯಿಂದ ಮನಸ್ಸಿನಲ್ಲಿ ಅಸ್ವಸ್ಥ ಭಾವನೆ ಮೂಡಲಿದೆ. ಸಮಾಜದಲ್ಲೂ ನಿಮ್ಮ ಗೌರವಕ್ಕೆ ಭಂಗ ಬರಬಹುದು. ತಾಯಿಯಿಂದ ಲಾಭವಿದೆ.

ಕುಂಭ ರಾಶಿ

ಅವಶ್ಯ ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದು ಶುಭ ದಿನ. ಸೃಜನಾತ್ಮಕ ಶಕ್ತಿ ವೃದ್ಧಿಸಲಿದೆ. ದೃಢ ಮನಸ್ಥಿತಿಯಿಂದಾಗಿ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಿತ್ರರೊಂದಿಗೆ ಪ್ರವಾಸ ಆಯೋಜನೆ ಮಾಡಲಿದ್ದೀರಿ.

ಮೀನ ರಾಶಿ

ಮನಸ್ಸು ಅತಿಯಾಗಿ ಭಾವುಕಗೊಳ್ಳಲಿದೆ. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಆತ್ಮೀಯರು ಸಿದ್ಧರಿರುವುದಿಲ್ಲ. ಪ್ರಯಾಣದ ಸಮಯದಲ್ಲಿ ಎಚ್ಚರ ವಹಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments