Friday, December 9, 2022
Google search engine
HomeUncategorizedಈ ರಾಶಿಯವರಿಗೆ ಧನಪ್ರಾಪ್ತಿಗೆ ಇವತ್ತು ಶುಭ ದಿನ

ಈ ರಾಶಿಯವರಿಗೆ ಧನಪ್ರಾಪ್ತಿಗೆ ಇವತ್ತು ಶುಭ ದಿನ

ಈ ರಾಶಿಯವರಿಗೆ ಧನಪ್ರಾಪ್ತಿಗೆ ಇವತ್ತು ಶುಭ ದಿನ

ಮೇಷ ರಾಶಿ

ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ.

ವೃಷಭ ರಾಶಿ

ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ ಸಾಧ್ಯತೆ ಇದೆ. ಉತ್ಸಾಹ ವೃದ್ಧಿಸಲಿದೆ. ಮನಸ್ಸು ಪ್ರಫುಲ್ಲವಾಗಲಿದೆ. ಅಧಿಕ ಸಂವೇದನಾಶೀಲತೆ ಹಾಗೂ ಭಾವುಕತೆಯ ಅನುಭವವಾಗಲಿದೆ.

ಮಿಥುನ ರಾಶಿ

ಇವತ್ತು ನಿಮಗೆ ಮಿಶ್ರ ಫಲವಿದೆ. ಆಯಾಸ, ಕೋಪ, ವ್ಯಗ್ರತೆ ಮತ್ತು ಪ್ರಸನ್ನತೆ ಹೀಗೆ ಮಿಶ್ರ ಅನುಭವಗಳಾಗಲಿವೆ. ನಿಗದಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಕರ್ಕ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ತನು-ಮನ ಎರಡೂ ದೃಷ್ಟಿಯಿಂದ ಆರೋಗ್ಯವಾಗಿರುತ್ತೀರಿ. ಉತ್ಸಾಹ ತುಂಬಿರುತ್ತದೆ. ಕುಟುಂಬಸ್ಥರು ಮತ್ತು ಮಿತ್ರರಿಂದ ಸುಖ-ಸಂತೋಷ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ

ಸಂವೇದನಾಶೀಲತೆ ಮೇಲೆ ನಿಯಂತ್ರಣ ಇರಲಿ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗುತ್ತೀರಿ. ಚಿಂತೆಯಿಂದಾಗಿಯೇ ಮಾನಸಿಕ-ದೈಹಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ವ್ಯರ್ಥ ವಾದ-ವಿವಾದದಿಂದ ದೂರವಿರಿ.

ಕನ್ಯಾ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ವಿಭಿನ್ನ ಕ್ಷೇತ್ರಗಳಲ್ಲಿ ಯಶಸ್ಸು, ಕೀರ್ತಿ, ಲಾಭ ದೊರೆಯಲಿದೆ. ಧನಪ್ರಾಪ್ತಿಗೆ ಇವತ್ತು ಶುಭ ದಿನ. ಗೃಹಸ್ಥ ಜೀವನದಲ್ಲಿ ಸಾಮರಸ್ಯ ಇರುತ್ತದೆ.

ತುಲಾ ರಾಶಿ

ಇವತ್ತು ನಿಮಗೆ ಶುಭ ಫಲವಿದೆ. ಮನೆ ಮತ್ತು ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಉದ್ಯೋಗಿಗಳಿಗೆ ಪದೋನ್ನತಿಯ ಅವಕಾಶ ಸಿಗಬಹುದು. ಸರ್ಕಾರಿ ಕೆಲಸಗಳು ಸಫಲವಾಗುತ್ತವೆ.

ವೃಶ್ಚಿಕ ರಾಶಿ

ಶಾರೀರಿಕ ಆಯಾಸ, ಆಲಸ್ಯ ಮತ್ತು ಮಾನಸಿಕ ಚಿಂತೆಯ ಅನುಭವವಾಗಲಿದೆ. ವ್ಯವಹಾರದಲ್ಲಿ ಅಡ್ಡಿ-ಆತಂಕ ಎದುರಾಗಬಹುದು. ಮಕ್ಕಳ ಬಗ್ಗೆ ಚಿಂತೆ ಕಾಡಬಹುದು.

ಧನು ರಾಶಿ

ಇಂದು ಪ್ರತಿ ಕಾರ್ಯವನ್ನೂ ಸಮಾಧಾನದಿಂದ ಮಾಡಿ. ಹೊಸ ಕಾರ್ಯವನ್ನು ಆರಂಭಿಸಬೇಡಿ. ನೀರಿನ ಸಮೀಪದಲ್ಲಿ ಎಚ್ಚರಿಕೆಯಿಂದಿರಿ. ಮಾತು, ವರ್ತನೆ ಮತ್ತು ಕೋಪದ ಮೇಲೆ ನಿಯಂತ್ರಣ ಇರಲಿ.

ಮಕರ ರಾಶಿ

ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ಆದಾಯ ವೃದ್ಧಿಸಲಿದೆ. ದಲಾಲಿ, ಕಮಿಷನ್ ಇತ್ಯಾದಿಗಳಿಂದ ಲಾಭವಾಗಲಿದೆ. ಧನಲಾಭದ ಪ್ರಬಲ ಯೋಗವಿದೆ. ಮಕ್ಕಳ ಬಗ್ಗೆ ಚಿಂತೆ ಕಾಡಬಹುದು.

ಕುಂಭ ರಾಶಿ

ಇವತ್ತು ನಿಮಗೆ ಶುಭ ದಿನ. ಇಂದು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ನಿಮ್ಮ ಕೀರ್ತಿ ವೃದ್ಧಿಸಲಿದೆ. ಕುಟುಂಬಸ್ಥರೊಂದಿಗೆ ಆರಾಮಾಗಿ ಕಾಲ ಕಳೆಯಲಿದ್ದೀರಿ.

ಮೀನ ರಾಶಿ

ಇಂದು ಕಲ್ಪನಾ ಲೋಕದಲ್ಲಿ ವಿಹರಿಸುತ್ತೀರಿ. ವಿದ್ಯಾರ್ಥಿಗಳಿಗೆ ಶುಭ ದಿನ. ಓದಿನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೀರಿ. ಪ್ರಯಾಣಕ್ಕೂ ದಿನ ಉತ್ತಮವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments