Sunday, March 26, 2023
Google search engine
HomeUncategorizedಈ ರಾಶಿಯವರಿಗೆ ಕೂಡಿ ಬರಲಿದೆ ಇಂದು ವೈವಾಹಿಕ ಸಂಬಂಧ

ಈ ರಾಶಿಯವರಿಗೆ ಕೂಡಿ ಬರಲಿದೆ ಇಂದು ವೈವಾಹಿಕ ಸಂಬಂಧ

ಈ ರಾಶಿಯವರಿಗೆ ಕೂಡಿ ಬರಲಿದೆ ಇಂದು ವೈವಾಹಿಕ ಸಂಬಂಧ

ಮೇಷ : ಕಚೇರಿಯಲ್ಲಿ ಕೆಲಸ ಮಾಡುವವರು ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ. ನೀವು ಎಷ್ಟೇ ಕೆಲಸ ಮಾಡಿದರೂ ಸಹ ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಒಪ್ಪುವುದೇ ಇಲ್ಲ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯಗಳಲ್ಲಿ ಗೆಲುವಿದೆ.

ವೃಷಭ : ನೀವಿಂದು ಹಿತಶತ್ರುಗಳ ಕಾಟದಿಂದ ಮುಕ್ತರಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ಕಷ್ಟವಿದ್ದರೂ ಕೊನೆಯಲ್ಲಿ ಉತ್ತಮ ಫಲಿತಾಂಶ ದೊರಕಿದೆ. ಹೊಸ ಉದ್ಯಮಕ್ಕೆ ಕುಟುಂಬಸ್ಥರು ನೆರವು ನೀಡಲಿದ್ದಾರೆ. ಸ್ನೇಹಿತರನ್ನು ಬಹಳ ದಿನಗಳ ಬಳಿಕ ಭೇಟಿ ಮಾಡಲಿದ್ದೀರಿ.

ಮಿಥುನ : ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕುಟುಂಬಸ್ಥರ ಜೊತೆ ಸೇರಿ ಪ್ರವಾಸಕ್ಕೆ ತೆರಳುವ ಯೋಜನೆ ಮಾಡಲಿದ್ದೀರಿ. ಸಾಲದ ಸುಳಿಯಿಂದ ಮುಕ್ತಿ ಸಿಗಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.

ಕಟಕ : ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಂಬಂಧಗಳು ಸುಧಾರಿಸಲಿದೆ. ಬಹಳ ದಿನಗಳಿಂದ ಅಂದುಕೊಂಡ ಕಾರ್ಯವು ಇಂದು ನೆರವೇರಲಿದೆ.

ಸಿಂಹ : ಕುಟುಂಬದೊಂದಿಗೆ ಇಂದು ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರಾಗಲಿದೆ. ಭೂಮಿಯನ್ನು ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ. ಭೂಮಿಯ ಮೇಲಿನ ಹೂಡಿಕೆ ನಿಮಗೆ ಲಾಭ ನೀಡಲಿದೆ.

ಕನ್ಯಾ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ತುಲಾ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ವೃಶ್ಚಿಕ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

ಧನು : ನಿಮ್ಮ ವ್ಯಾಪಾರ- ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.

ಮಕರ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.

ಕುಂಭ : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಇರಲಿದೆ.

ಮೀನ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments