Tuesday, September 27, 2022
Google search engine
HomeUncategorizedಈ ರಾಶಿಯವರಿಗೆ ಇದೆ ಇಂದು ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ದಿನ

ಈ ರಾಶಿಯವರಿಗೆ ಇದೆ ಇಂದು ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ದಿನ

ಈ ರಾಶಿಯವರಿಗೆ ಇದೆ ಇಂದು ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ದಿನ

ಮೇಷ ರಾಶಿ

ಆಧ್ಯಾತ್ಮಿಕವಾಗಿ ವಿಶಿಷ್ಟ ಅನುಭವವಾಗಲಿದೆ. ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ನಿಮ್ಮ ಅತಿಯಾದ ಮಾತು ಮತ್ತು ವರ್ತನೆಯಿಂದ ಯಾರಿಗೂ ನೋವಾಗದಂತೆ ಎಚ್ಚರ ವಹಿಸಿ.

ವೃಷಭ ರಾಶಿ

ಇಂದು ದಾಂಪತ್ಯ ಜೀವನದ ವಿಶೇಷ ಆನಂದ ದೊರೆಯಲಿದೆ. ಮಿತ್ರರಿಂದ ಲಾಭವಾಗಲಿದೆ. ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ಮಕ್ಕಳೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ

ಕಾರ್ಯದಲ್ಲಿ ಸಫಲತೆ, ಯಶಸ್ಸು ಮತ್ತು ಕೀರ್ತಿ ದೊರೆಯುತ್ತದೆ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ.

ಕರ್ಕ ರಾಶಿ

ಇಂದು ಶಾಂತಿ ಸಮಾಧಾನದಿಂದಿರಿ. ಆರೋಗ್ಯ ಜೊತೆಜೊತೆಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿ

ಇಂದು ನಿಮಗೆ ಶುಭ ದಿನ. ಗೃಹಸ್ಥ ಜೀವನದಲ್ಲಿ ಆನಂದ ತುಂಬಿರುತ್ತದೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳು ನಿಮ್ಮಿಂದಾಗಿ ಪ್ರಸನ್ನರಾಗಿರುತ್ತಾರೆ.

ಕನ್ಯಾ ರಾಶಿ

ಆರೋಗ್ಯ ಉತ್ತಮವಾಗಿರಲಿದೆ. ಮಧುರ ಮಾತುಗಳಿಂದ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಮಧ್ಯಾಹ್ನದ ನಂತರ ತರಾತುರಿಯ ನಿರ್ಣಯ ಬೇಡ.

ತುಲಾ ರಾಶಿ

ದೀರ್ಘಾವಧಿಯ ಆರ್ಥಿಕ ಯೋಜನೆಗಳಿಗೆ ಅನುಕೂಲಕರ ದಿನ. ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಸ್ಪೂರ್ತಿ ಮತ್ತು ಉಲ್ಲಾಸದ ಅನುಭವವಾಗಲಿದೆ.

ವೃಶ್ಚಿಕ ರಾಶಿ

ಕುಟುಂಬ ಸದಸ್ಯರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆಯಲಿದ್ದೀರಿ. ಜಗಳ ಮತ್ತು ಚರ್ಚೆಗಳಿಂದ ದೂರವಿರಿ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ.

ಧನು ರಾಶಿ

ಇಂದು ಕಷ್ಟದಾಯಕ ದಿನ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕೋಪ ಮತ್ತು ಆವೇಶ ಹೆಚ್ಚಾಗಿರುತ್ತದೆ. ಮಾತು ಮತ್ತು ವ್ಯವಹಾರದಲ್ಲಿ ಸಂಯಮವಿರಲಿ.

ಮಕರ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಯಾವುದೇ ಶುಭ ಪ್ರಸಂಗಗಳನ್ನು ಆಯೋಜಿಸಲಿದ್ದೀರಿ. ಯಾವುದೇ ವಸ್ತುಗಳನ್ನು ಖರೀದಿಸಲು ಶುಭ ದಿನ. ಮಿತ್ರರಿಂದ ಶುಭ ಸಮಾಚಾರ ಬರಲಿದೆ.

ಕುಂಭ ರಾಶಿ

ಹಿರಿಯರು ಮತ್ತು ಉನ್ನತ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ದೇಹ ಮತ್ತು ಮನಸ್ಸಿಗೆ ಆಯಾಸ ಹಾಗೂ ಆಲಸ್ಯ ಕಾಡಲಿದೆ. ಮಕ್ಕಳ ಸಮಸ್ಯೆ ನಿಮ್ಮನ್ನು ಚಿಂತಿತರನ್ನಾಗಿ ಮಾಡಲಿದೆ. ಗೃಹಸ್ಥ ಜೀವನದಲ್ಲಿ ಆನಂದವಿರುತ್ತದೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಸಿಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments