Tuesday, September 27, 2022
Google search engine
HomeUncategorizedಈ ರಾಶಿಯವರಿಗಿದೆ ಇಂದು ಮಿತ್ರರಿಂದ ಲಾಭ

ಈ ರಾಶಿಯವರಿಗಿದೆ ಇಂದು ಮಿತ್ರರಿಂದ ಲಾಭ

ಈ ರಾಶಿಯವರಿಗಿದೆ ಇಂದು ಮಿತ್ರರಿಂದ ಲಾಭ

ಮೇಷ ರಾಶಿ

ಖರ್ಚಿನ ಮೇಲೆ ನಿಯಂತ್ರಣವಿರಲಿ, ಯಾಕಂದ್ರೆ ಇಂದು ಅಧಿಕ ಹಣ ವ್ಯಯಿಸಲಿದ್ದೀರಿ. ಹಣಕಾಸು ವಿಷಯಗಳಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳಿತು. ಯಾರ ಜೊತೆಗೂ ವಾದ-ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ.

ವೃಷಭ ರಾಶಿ

ಇವತ್ತು ನಿಮಗೆ ಶುಭ ದಿನ. ನಿಮ್ಮ ರಚನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಯಾಗಲಿದೆ. ಮಾನಸಿಕವಾಗಿ ವೈಚಾರಿಕ ಸ್ಥಿರತೆಯ ಅನುಭವವಾಗಲಿದೆ. ಇದರಿಂದಾಗಿ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಮಿಥುನ ರಾಶಿ

ಇವತ್ತು ನಿಮಗೆ ಕಷ್ಟಗಳು ಎದುರಾಗುತ್ತವೆ. ಕುಟುಂಬ ಸದಸ್ಯರು ಮತ್ತು ಮಕ್ಕಳೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅನಾವಶ್ಯಕ ವಿವಾದದಲ್ಲಿ ಸಿಲುಕಿಕೊಳ್ಳುತ್ತೀರಾ.

ಕರ್ಕ ರಾಶಿ

ಇವತ್ತು ನಿಮಗೆ ಅತ್ಯಂತ ಲಾಭದಾಯಕ ದಿನ. ಆದಾಯದಲ್ಲಿ ವೃದ್ಧಿಯಾಗಲಿದೆ. ಇನ್ನಿತರ ವಿಧಾನಗಳಿಂದ್ಲೂ ಆರ್ಥಿಕ ಲಾಭವಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.

ಸಿಂಹ ರಾಶಿ

ವ್ಯವಹಾರಕ್ಕೆ ಇಂದು ಉತ್ತಮ ದಿನ. ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿವೆ.

ಕನ್ಯಾ ರಾಶಿ

ಇಂದು ನಿಮಗೆ ಶುಭದಿನ. ಸಂಬಂಧಿಗಳೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸ್ತ್ರೀ ಮಿತ್ರರಿಂದ ಲಾಭ ದೊರೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ.

ತುಲಾ ರಾಶಿ

ಇಂದು ನೀವು ಹೊಸ ಕಾರ್ಯವನ್ನು ಆರಂಭಿಸಬಹುದು. ಭಾಷೆ ಮತ್ತು ವ್ಯವಹಾರದಲ್ಲಿ ಸಂಯಮ ವಹಿಸುವುದು ಒಳಿತು. ದ್ವೇಷ ಮತ್ತು ಶತ್ರುಗಳಿಂದ ದೂರವೇ ಇರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ.

ವೃಶ್ಚಿಕ ರಾಶಿ

ಇವತ್ತಿನ ದಿನ ಕೊಂಚ ಭಿನ್ನವಾಗಿರುತ್ತದೆ. ನಿಮಗಾಗಿ ಸಮಯ ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ಓಡಾಟ, ಮನರಂಜನೆ, ಪಾರ್ಟಿ ಹಾಗೂ ಸಣ್ಣದೊಂದು ಪ್ರವಾಸ ಮಾಡಲಿದ್ದೀರಿ. ಅದ್ಭುತ ಭೋಜನ ಸವಿಯುವ ಯೋಗವಿದೆ.

ಧನು ರಾಶಿ

ಇಂದು ನಿಮಗೆ ಆರ್ಥಿಕ ಲಾಭವಾಗಲಿದೆ. ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಇದರಿಂದ ಮನಸ್ಸು ಪ್ರಸನ್ನವಾಗಿರುತ್ತದೆ. ಉದ್ಯೋಗಿಗಳಿಗೂ ಲಾಭವಾಗಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ.

ಮಕರ ರಾಶಿ

ಮನಸ್ಸು ಚಿಂತಾಗ್ರಸ್ಥವಾಗಿರಲಿದೆ, ಗೊಂದಲಗಳು ಕಾಡಬಹುದು. ಇದರಿಂದಾಗಿ ಯಾವುದೇ ಕಾರ್ಯವನ್ನು ದೃಢನಿಶ್ಚಯದಿಂದ ಮಾಡಲು ಸಾಧ್ಯವಾಗುವುದಿಲ್ಲ. ಅದೃಷ್ಟ ನಿಮ್ಮ ಜೊತೆಗಿಲ್ಲದೇ ಇರುವುದರಿಂದ ಯಾವುದೇ ಮಹತ್ವದ ಕೆಲಸ ಮಾಡಬೇಡಿ.

ಕುಂಭ ರಾಶಿ

ಮನಸ್ಸಿನಲ್ಲಿ ಪ್ರೇಮದ ಭಾವನೆಗಳು ಮೂಡಲಿವೆ. ಹಣ ಗಳಿಕೆಗಾಗಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಆಭರಣ, ವಸ್ತ್ರ, ಸೌಂದರ್ಯ ವರ್ಧಕಗಳ ಖರೀದಿಗೆ ಹಣ ವ್ಯಯವಾಗಲಿದೆ.

ಮೀನ ರಾಶಿ

ಇಂದು ನಿಮಗೆ ಶುಭದಿನ. ನಿಮ್ಮ ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕ ಸ್ಥಿರತೆಯಿಂದಾಗಿ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments