Wednesday, August 17, 2022
Google search engine
HomeUncategorizedಈ ರಾಶಿಯವರಿಗಿದೆ ಇಂದು ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಈ ರಾಶಿಯವರಿಗಿದೆ ಇಂದು ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಈ ರಾಶಿಯವರಿಗಿದೆ ಇಂದು ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಮೇಷ ರಾಶಿ

ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ದೀರ್ಘ ಸಮಯದಿಂದ ಬಾಕಿ ಇದ್ದ ಆರ್ಥಿಕ ಯೋಜನೆಗಳು ಪೂರ್ಣಗೊಳ್ಳಲಿವೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ.

ವೃಷಭ ರಾಶಿ

ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ. ಆದ್ರೆ ನಿಷ್ಠೆಯಿಂದ ಕಾರ್ಯ ಮುಂದುವರಿಸುತ್ತೀರಿ. ನಿಮ್ಮ ಮಧುರ ಮಾತು ಇತರರನ್ನು ಪ್ರಭಾವಿತಗೊಳಿಸುತ್ತದೆ. ಇದರಿಂದ ನಿಮಗೆ ಲಾಭವಾಗಲಿದೆ.

ಮಿಥುನ ರಾಶಿ

ಇಂದು ನಿಮ್ಮ ಮನಸ್ಸು ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಮನಸ್ಸು ಸ್ಥಿಮಿತದಲ್ಲಿರದ ಕಾರಣ ನಿರ್ಣಯ ಶಕ್ತಿಯ ಅಭಾವವಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು.

ಕರ್ಕ ರಾಶಿ

ಕೈಗೊಂಡ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗುತ್ತದೆ. ಇದರಿಂದ ನಿಮ್ಮ ಆನಂದ, ಉತ್ಸಾಹ ದ್ವಿಗುಣವಾಗುತ್ತದೆ. ಮಿತ್ರರು, ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ಸಿಂಹ ರಾಶಿ

ಇಂದು ನಿಮಗೆ ಮಿಶ್ರಫಲಗಳಿವೆ. ನಿಮ್ಮ ಮನಸ್ಸು ಗೊಂದಲಮಯವಾಗಿರುತ್ತದೆ. ಕೆಲಸದಲ್ಲಿ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಹಾಗಾಗಿ ನಿರಾಸೆ ಆವರಿಸುವ ಸಾಧ್ಯತೆ ಇದೆ.

ಕನ್ಯಾ ರಾಶಿ

ನಿಮ್ಮ ಮಾತಿನ ಮಾಧುರ್ಯ, ಸೌಹಾರ್ದ ಸಂಬಂಧ ಸೃಷ್ಟಿಸಲು ಸಹಕಾರಿಯಾಗಲಿದೆ. ವೈಚಾರಿಕ ಸಮೃದ್ಧಿ ಹೆಚ್ಚಾಗಲಿದೆ. ವ್ಯಾಪಾರ ದಂಧೆಯಲ್ಲಿ ಯಶಸ್ಸು ಸಿಗುತ್ತದೆ.

ತುಲಾ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಿರಿ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಲ್ಲವಾದಲ್ಲಿ ಯಾರೊಂದಿಗಾದ್ರೂ ಜಗಳವಾಗಬಹುದು.

ವೃಶ್ಚಿಕ ರಾಶಿ

ನೌಕರಿ-ದಂಧೆ ಮತ್ತು ವ್ಯಾಪಾರದಲ್ಲಿ ಇಂದು ಲಾಭವಾಗುತ್ತದೆ. ಮಿತ್ರರು, ಸಂಬಂಧಿಕರು ಮತ್ತು ಹಿರಿಯರಿಂದ್ಲೂ ಲಾಭ ದೊರೆಯುವ ಸಾಧ್ಯತೆ ಇದೆ.

ಧನು ರಾಶಿ

ನಿಮ್ಮ ಕೀರ್ತಿ, ಪ್ರತಿಷ್ಠೆ ಮತ್ತು ಯಶಸ್ಸು ವೃದ್ಧಿಸಲಿದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುತ್ತಾರೆ. ಪದೋನ್ನತಿ ಯೋಗವೂ ಇದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮಕರ ರಾಶಿ

ಬೌದ್ಧಿಕ ಕಾರ್ಯಗಳಿಗೆ ಅನುಕೂಲಕರ ದಿನ. ಸಾಹಿತ್ಯ, ಲೇಖನಾದಿ ಕಾರ್ಯಗಳನ್ನು ಕೈಗೊಳ್ಳಬಹುದು. ಮನಸ್ಸಿನಲ್ಲಿ ಕೂಡ ಹೊಸ ಹೊಸ ವಿಚಾರಧಾರೆಗಳು ಮೂಡಲಿವೆ.

ಕುಂಭ ರಾಶಿ

ನಿಷೇಧಾತ್ಮಕ ಕಾರ್ಯಗಳಿಂದ ದೂರವಿರಿ. ನಕಾರಾತ್ಮಕ ಆಲೋಚನೆಗಳು ಬೇಡ. ಜಗಳ ಮತ್ತು ವಿವಾದಗಳಿಂದ ದೂರವಿರುವುದು ಉತ್ತಮ. ಕೋಪ ಮತ್ತು ಮಾತಿನ ಮೇಲೆ ಸಂಯಮ ಇರಲಿ.

ಮೀನ ರಾಶಿ

ಇಂದು ನಿತ್ಯದ ಕೆಲಸಗಳಿಂದ ಬಿಡುವು ಪಡೆಯುತ್ತೀರಿ. ಮೋಜು-ಮಸ್ತಿ, ಸುತ್ತಾಟ, ಮನರಂಜನೆಯಲ್ಲಿ ಕಾಲ ಕಳೆಯಲಿದ್ದೀರಿ. ಮಿತ್ರರೊಂದಿಗೆ ಪಿಕ್ನಿಕ್ ಗೆ ತೆರಳುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments