Saturday, September 24, 2022
Google search engine
HomeUncategorizedಈ ರಾಶಿಯವರಿಗಿದೆ ಇಂದು ಪ್ರತಿ ಕಾರ್ಯದಲ್ಲೂ ಯಶಸ್ಸು

ಈ ರಾಶಿಯವರಿಗಿದೆ ಇಂದು ಪ್ರತಿ ಕಾರ್ಯದಲ್ಲೂ ಯಶಸ್ಸು

ಈ ರಾಶಿಯವರಿಗಿದೆ ಇಂದು ಪ್ರತಿ ಕಾರ್ಯದಲ್ಲೂ ಯಶಸ್ಸು

ಮೇಷ ರಾಶಿ

ಇಂದು ಮಿಶ್ರಫಲವಿದೆ. ಆಯಾಸ, ಆಲಸ್ಯ ಮತ್ತು ಮಾನಸಿಕ ಅಶಾಂತಿ ಕಾಡುತ್ತದೆ. ಕೋಪ ಹೆಚ್ಚಾಗಿರುತ್ತದೆ. ಧಾರ್ಮಿಕ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.

ವೃಷಭ ರಾಶಿ

ಇಂದು ಶುಭ ದಿನ. ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಪ್ರೀತಿಪಾತ್ರರಿಂದ ಆನಂದ ಪ್ರಾಪ್ತಿಯಾಗುತ್ತದೆ. ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಿಗಲಿದೆ.

ಮಿಥುನ ರಾಶಿ

ಸಹೋದರರಿಂದ ಲಾಭವಿದೆ. ಸುಂದರ ಸ್ಥಳಕ್ಕೆ ಪ್ರವಾಸ ತೆರಳಲಿದ್ದೀರಿ. ಪ್ರತಿ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಗೌರವ ದೊರೆಯುತ್ತದೆ.

ಕರ್ಕ ರಾಶಿ

ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ದೊರೆಯಲಿದೆ. ಉದ್ಯೋಗಿಗಳಿಗೆ ಲಾಭವಾಗಲಿದೆ. ಕಿರಿಯ ಉದ್ಯೋಗಿಗಳ ಸಹಕಾರ ದೊರೆಯುತ್ತದೆ.

ಸಿಂಹ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಮಕ್ಕಳಿಂದ ಶುಭ ಸಮಾಚಾರ ದೊರೆಯುತ್ತದೆ. ಸ್ತ್ರೀ ಮಿತ್ರರಿಂದ ಲಾಭವಿದೆ. ಪರೋಪಕಾರಿ ಕೆಲಸ ಕೈಗೊಳ್ಳಲಿದ್ದೀರಿ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಸಮಸ್ಯೆಗಳು ಕಾಡುತ್ತವೆ. ಇದರಿಂದ ಮನಸ್ಸು ವ್ಯಾಕುಲಗೊಳ್ಳಲಿದೆ. ಸ್ಪೂರ್ತಿಯ ಅಭವಾವವಿರುತ್ತದೆ. ತಾಯಿಯ ಆರೋಗ್ಯ ಏರುಪೇರಾಗಬಹುದು.

ತುಲಾ ರಾಶಿ

ಇಂದು ಶುಭ ಫಲವಿದೆ. ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿದೆ. ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು. ಧನಲಾಭ ಯೋಗವಿದೆ. ಹೊಸ ಕಾರ್ಯ ಆರಂಭಕ್ಕೆ ಶುಭ ದಿನ.

ವೃಶ್ಚಿಕ ರಾಶಿ

ಇಂದು ಮಧ್ಯಮ ಫಲದಾಯಕ ದಿನ. ವ್ಯರ್ಥ ಖರ್ಚಿನ ಮೇಲೆ ನಿಯಂತ್ರಣವಿರಲಿ. ಮನೆಯಲ್ಲಿ ಜಗಳವಾಗದಂತೆ ಎಚ್ಚರ ವಹಿಸಿ. ದೈಹಿಕ ತೊಂದರೆ ಜೊತೆಗೆ ಮನಸ್ಸಿನಲ್ಲಿ ನಿರಾಸೆಯ ಭಾವ ಮೂಡುತ್ತದೆ.

ಧನು ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಧನಲಾಭದ ಸಾಧ್ಯತೆ ಇದೆ. ಸ್ತ್ರೀ ಮಿತ್ರರಿಂದ ಲಾಭವಾಗಲಿದೆ.

ಮಕರ ರಾಶಿ

ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಮಧುರ ಮಾತಿನಿಂದ್ಲೇ ನಿಗದಿತ ಕಾರ್ಯ ಪೂರ್ಣಗೊಳಿಸಲಿದ್ದೀರಿ. ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳಬೇಡಿ. ವ್ಯರ್ಥ ಖರ್ಚಿನಿಂದ ಬಚಾವ್ ಆಗಿ.

ಕುಂಭ ರಾಶಿ

ಅಧಿಕ ಚಿಂತೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅವಿವೇಕಿತನದ ನಿರ್ಧಾರ ಕೈಗೊಳ್ಳಬೇಡಿ. ಮಾತಿನ ಮೇಲೆ ಹಿಡಿತವಿರಲಿ.

ಮೀನ ರಾಶಿ

ಇಂದು ಶುಭದಿನ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವ್ಯಾಪಾರಿಗಳಿಗೆ ಆದಾಯ ವೃದ್ಧಿಸುತ್ತದೆ. ತಂದೆ ಮತ್ತು ಹಿರಿಯರಿಂದ ಲಾಭವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments