Friday, December 9, 2022
Google search engine
HomeUncategorizedಈ ರಾಶಿಯವರಿಗಿದೆ ಇಂದು ಆದಾಯದಲ್ಲಿ ವೃದ್ಧಿ

ಈ ರಾಶಿಯವರಿಗಿದೆ ಇಂದು ಆದಾಯದಲ್ಲಿ ವೃದ್ಧಿ

ಈ ರಾಶಿಯವರಿಗಿದೆ ಇಂದು ಆದಾಯದಲ್ಲಿ ವೃದ್ಧಿ

ಮೇಷ ರಾಶಿ

ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸ್ವಾದಿಷ್ಟ ಭೋಜನ ಸವಿಯಲಿದ್ದೀರಿ. ಆನಂದವಾಗಿ ಕಾಲ ಕಳೆಯಲಿದ್ದೀರಿ. ಭವಿಷ್ಯಕ್ಕಾಗಿ ಉತ್ತಮ ಆರ್ಥಿಕ ಯೋಜನೆ ರೂಪಿಸಬಹುದು.

ವೃಷಭ ರಾಶಿ

ಇವತ್ತು ಅತ್ಯಂತ ಸ್ಪೂರ್ತಿ ಮತ್ತು ಪ್ರಸನ್ನತೆ ನಿಮ್ಮನ್ನು ಆವರಿಸಲಿದೆ. ಆರೋಗ್ಯ ಉತ್ತಮವಾಗಿರುವುದರಿಂದ ಸುಖ ಮತ್ತು ಆನಂದದ ಅನುಭೂತಿಯಾಗಲಿದೆ. ಸಂಬಂಧಿಕರು, ಮಿತ್ರರಿಂದ ಉಪಹಾರ ದೊರೆಯುತ್ತದೆ.

ಮಿಥುನ ರಾಶಿ

ಸಂಯಮಶೀಲ ಮತ್ತು ವಿಚಾರಪೂರ್ಣ ವ್ಯವಹಾರ ನಿಮ್ಮನ್ನು ಅನಿಷ್ಠಗಳಿಂದ ಬಚಾವ್ ಮಾಡಲಿದೆ. ನಿಮ್ಮ ಮಾತು ಮತ್ತು ತಪ್ಪು ಗ್ರಹಿಕೆಯಿಂದ ಸಮಸ್ಯೆ ಆಗಬಹುದು. ಶಾರೀರಿಕ ಕಷ್ಟ ಮನಸ್ಸನ್ನೂ ಅಸ್ವಸ್ಥಗೊಳಿಸುತ್ತದೆ.

ಕರ್ಕ ರಾಶಿ

ಆಕಸ್ಮಿಕ ಧನಲಾಭವಿದೆ. ಇಂದು ನಿಮ್ಮ ಪಾಲಿಗೆ ಅತ್ಯಂತ ರೋಮಾಂಚಕ ಮತ್ತು ಆನಂದದಾಯಕ ದಿನ. ಆದಾಯದಲ್ಲಿ ವೃದ್ಧಿಯಾಗಲಿದೆ. ವಿವಿಧ ಬಗೆಯ ಲಾಭವಿದೆ.

ಸಿಂಹ ರಾಶಿ

ನೀವು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುವುದು ವಿಳಂಬವಾಗಬಹುದು. ಕಚೇರಿ ಮತ್ತು ಮನೆಯಲ್ಲಿ ಜವಾಬ್ಧಾರಿ ಹೆಚ್ಚಾಗಲಿದೆ. ಹೆಚ್ಚು ಗಂಭೀರತೆಯ ಅನುಭವವಾಗಲಿದೆ.

ಕನ್ಯಾ ರಾಶಿ

ಆಯಾಸ, ಆತಂಕ ಮತ್ತು ಚಿಂತೆ ಹೆಚ್ಚಾಗಿರುತ್ತದೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮಕ್ಕಳ ಆರೋಗ್ಯದ ಬಗೆಗೂ ಆತಂಕ ಕಾಡುತ್ತದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾದ ವಿವಾದ ಉಂಟಾಗುತ್ತದೆ.

ತುಲಾ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ವ್ಯವಹಾರದಲ್ಲಿ ಸಮಸ್ಯೆ ಆಗಬಹುದು. ಇದರಿಂದ ಜಗಳ ಏರ್ಪಡುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವಾಗಲಿದೆ.

ವೃಶ್ಚಿಕ ರಾಶಿ

ನೌಕರಿ ಹಾಗೂ ವ್ಯಾಪಾರದಲ್ಲಿ ಲಾಭವಾಗಲಿದೆ. ಮಿತ್ರರು, ಸಂಬಂಧಿಕರು, ಮತ್ತು ಹಿರಿಯರಿಂದ್ಲೂ ಲಾಭವಿದೆ. ಸಾಮಾಜಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೀರಿ. ಪ್ರಯಾಣ ಮಾಡಬೇಕಾಗಿ ಬರಬಹುದು.

ಧನು ರಾಶಿ

ಆರ್ಥಿಕ ಮತ್ತು ವ್ಯಾವಹಾರಿಕ ಯೋಜನೆಗಳಿಗೆ ಇಂದು ಶುಭ ದಿನ. ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಪರೋಪಕಾರಿ ಭಾವನೆ ಹೆಚ್ಚಲಿದೆ. ಮೋಜು ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ.

ಮಕರ ರಾಶಿ

ನಕಾರಾತ್ಮಕ ವಿಚಾರಗಳಿಂದ ಮನಸ್ಸಿನಲ್ಲಿ ಹತಾಶೆ ಉಂಟಾಗಲಿದೆ. ಮಾನಸಿಕ ಉದ್ವೇಗ ಮತ್ತು ಕೋಪ ಹೆಚ್ಚಾಗಿರುತ್ತದೆ. ಮಾತಿನ ಮೇಲೆ ಸಂಯಮವಿರಲಿ. ಇಲ್ಲದೇ ಹೋದಲ್ಲಿ ಮನೆಯಲ್ಲಿ ಜಗಳ ಏರ್ಪಡುತ್ತದೆ.

ಕುಂಭ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯ ಮತ್ತು ಕೆಲಸದಲ್ಲಿ ಹೊಸ ವಿಚಾರಧಾರೆಗಳ ಪ್ರವೇಶವಾಗಲಿದೆ. ಬರವಣಿಗೆ ಮತ್ತು ಸಾಹಿತ್ಯದಲ್ಲಿ ನಿಮ್ಮ ಸೃಜನಶೀಲತೆ ಬೆಳಕಿಗೆ ಬರಲಿದೆ.

ಮೀನ ರಾಶಿ

ಇವತ್ತಿನ ದಿನವನ್ನು ಸುಖ-ಶಾಂತಿಯಿಂದ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ಪಾಲುದಾರಿಕೆಗೆ ಅನುಕೂಲಕರ ಸಮಯ. ಪತಿ ಪತ್ನಿ ನಡುವೆ ದಾಂಪತ್ಯ ಜೀವನದಲ್ಲಿ ನಿಕಟತೆಯ ಅನುಭವವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments