Thursday, August 11, 2022
Google search engine
HomeUncategorizedಈ ರಾಶಿಯವರಿಗಿಂದು ಹೊಸ ಕೆಲಸ ಆರಂಭಿಸಲು ಶುಭ ದಿನ

ಈ ರಾಶಿಯವರಿಗಿಂದು ಹೊಸ ಕೆಲಸ ಆರಂಭಿಸಲು ಶುಭ ದಿನ

ಈ ರಾಶಿಯವರಿಗಿಂದು ಹೊಸ ಕೆಲಸ ಆರಂಭಿಸಲು ಶುಭ ದಿನ

ಮೇಷ ರಾಶಿ

ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಅಭಾವವಿರುತ್ತದೆ. ಅದರ ಜೊತೆಗೆ ಕೋಪ ಕೂಡ ಹೆಚ್ಚಾಗಿರುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆಯಾಗಬಹುದು.

ವೃಷಭ ರಾಶಿ

ಅಧಿಕ ಕೆಲಸದ ಒತ್ತಡ ಮತ್ತು ಊಟ, ತಿಂಡಿ ಕಡೆಗೆ ಗಮನ ಹರಿಸದೇ ಇರುವುದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು ಹಾಗೂ ನಿದ್ದೆಯ ಅಭಾವದಿಂದ ಆಯಾಸದ ಅನುಭವವಾಗುತ್ತದೆ.

ಮಿಥುನ ರಾಶಿ

ಮೋಜು ಮಸ್ತಿ ಮತ್ತು ಮನರಂಜನೆಯ ಬಗ್ಗೆ ವಿಶೇಷ ಆಸಕ್ತಿ ಮೂಡುತ್ತದೆ. ಪ್ರಿಯ ವ್ಯಕ್ತಿಗಳೊಂದಿಗೆ ಹೊರಗೆ ಸುತ್ತಾಡಲು ತೆರಳಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ಗೌರವ ಪ್ರತಿಷ್ಠೆ ವೃದ್ಧಿಸಲಿದೆ.

ಕರ್ಕ ರಾಶಿ

ಇಂದು ಅತ್ಯಂತ ಖುಷಿ ಮತ್ತು ಸಫಲತೆಯ ದಿನ. ಕುಟುಂಬದಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಸಹೋದ್ಯೋಗಿಗಳಿಂದ ಲಾಭವಾಗಲಿದೆ.

ಸಿಂಹ ರಾಶಿ

ಇವತ್ತು ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಸೃಜನಾತ್ಮಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ಮೂಡುತ್ತದೆ. ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಲು ಪ್ರೇರಣೆ ಸಿಗಲಿದೆ.

ಕನ್ಯಾ ರಾಶಿ

ಇವತ್ತು ಪ್ರತಿಕೂಲ ಪರಿಸ್ಥಿತಿಗಳು ಎದುರಾಗಲಿವೆ. ಅದನ್ನು ನಿಭಾಯಿಸಲು ಸನ್ನದ್ಧರಾಗಿರಿ. ಶಾರೀರಿಕ ಆರೋಗ್ಯ ಹದಗೆಡುವ ಸಾಧ್ಯತೆಯೂ ಇದೆ.

ತುಲಾ ರಾಶಿ

ಭಾಗ್ಯವೃದ್ಧಿಯ ಯೋಗವಿದೆ. ಇದರಿಂದ ಸಾಹಸಮಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉತ್ಸಾಹ ಮೂಡಲಿದೆ. ಹೊಸ ಕೆಲಸ ಆರಂಭಿಸಲು ಶುಭ ದಿನ.

ವೃಶ್ಚಿಕ ರಾಶಿ

ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಿಕೊಳ್ಳಿ. ಅತಿಯಾಗಿ ಮಾತನಾಡಬೇಡಿ. ಮನೆಯಲ್ಲಿ ಉದ್ಭವವಾಗುವ ಸಮಸ್ಯೆಗಳನ್ನೆಲ್ಲ ನಿಭಾಯಿಸಿ.

ಧನು ರಾಶಿ

ನಿಗದಿತ ಕೆಲಸಗಳಲ್ಲಿ ಸಫಲತೆ ಸಿಗಲಿದೆ. ಆರ್ಥಿಕ ಲಾಭವಾಗಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಪ್ರವಾಸ ಅದರಲ್ಲೂ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಪೂಜೆ ಹಾಗೂ ಧಾರ್ಮಿಕ ಕೆಲಸಗಳಿಗಾಗಿ ಹಣ ಕೂಡ ಖರ್ಚಾಗಲಿದೆ.

ಕುಂಭ ರಾಶಿ

ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೀರಿ. ದೇವರ ಕೃಪೆ ನಿಮ್ಮ ಮೇಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಅಧಿಕ ಧನಲಾಭವಾಗಲಿದೆ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಿದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಹಿರಿಯ ಅಧಿಕಾರಿಗಳ ಪ್ರೋತ್ಸಾಹ ದೊರೆಯಲಿದೆ. ಇದರಿಂದ ನಿಮ್ಮ ಉತ್ಸಾಹ ದುಪ್ಪಟ್ಟಾಗುತ್ತದೆ. ವ್ಯಾಪಾರಿಗಳ ಆದಾಯದಲ್ಲೂ ವೃದ್ಧಿಯಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments