Sunday, March 26, 2023
Google search engine
HomeUncategorizedಈ ರಾಶಿಯವರಿಗಿಂದು ದೊರೆಯಲಿದೆ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ

ಈ ರಾಶಿಯವರಿಗಿಂದು ದೊರೆಯಲಿದೆ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ

ಈ ರಾಶಿಯವರಿಗಿಂದು ದೊರೆಯಲಿದೆ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ

ಮೇಷ : ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಕಚೇರಿ ಕೆಲಸಗಳಲ್ಲಿ ಕೊಂಚ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ.

ವೃಷಭ : ವೈವಾಹಿಕ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ಆದಷ್ಟು ಲೋಹದ ವಸ್ತುಗಳನ್ನು ದಾನ ಮಾಡಿ. ಕಲಾವಿದರಿಗೆ ಇದು ಉತ್ತಮ ದಿನವಾಗಿದೆ. ವಾಹನ ಖರೀದಿ ಮಾಡಲಿದ್ದೀರಿ. ಜವಳಿ ವ್ಯಾಪಾರಿಗಳು ಲಾಭ ನಿರೀಕ್ಷಿಸಬಹುದು.

ಮಿಥುನ : ಚಿಕ್ಕ ಚಿಕ್ಕ ವಿಷಯಕ್ಕೆ ಅತಿಯಾದ ಕೋಪ ಸಲ್ಲದು. ಇದರಿಂದ ದಾಂಪತ್ಯ ಜೀವನದಲ್ಲಿ ವಿರಸ ಮೂಡಲಿದೆ. ಹೀಗಾಗಿ ಸಹನೆ ಕಾಯ್ದುಕೊಳ್ಳುವುದನ್ನು ಕಲಿತುಕೊಳ್ಳಿ. ಕಚೇರಿ ಕೆಲಸದಲ್ಲಿ ಯಾವುದೇ ಕಿರಿಕಿರಿ ಇರುವುದಿಲ್ಲ.

ಕಟಕ : ಅಂದುಕೊಂಡ ಕೆಲಸಗಳು ಸಾಂಘವಾಗಿ ನೆರವೇರಲಿದೆ. ಗೃಹ ನಿರ್ಮಾಣ ಚಟುವಟಿಕೆಗಳು ಚುರುಕುಗೊಳ್ಳಲಿದೆ. ಗುರುವಿನ ಆರಾಧನೆ ಮಾಡಿ. ಉದ್ಯಮಿಗಳ ಪಾಲಿಗೆ ಇದು ನೆಮ್ಮದಿಯ ದಿನವಾಗಿದೆ. ಸ್ತ್ರೀಯರಿಗೆ ಧನ ಲಾಭವಿದೆ.

ಸಿಂಹ : ಕೌಟುಂಬಿಕ ಕಲಹಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಇದರಿಂದ ನಿಮ್ಮ ಮೇಲೆಯೇ ಅಪವಾದ ಎದುರಾಗುವ ಸಾಧ್ಯತೆ ಇದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಕೇಳಿಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ.

ಕನ್ಯಾ : ಇಂದು ವಾಹನ ಪ್ರಯಾಣ ಒಳ್ಳೆಯದಲ್ಲ. ಹೀಗಾಗಿ ಆದಷ್ಟು ಎಚ್ಚರಿಕೆಯಿಂದಿರಿ. ಅನಿರೀಕ್ಷಿತ ಜವಾಬ್ದಾರಿಗಳು ನಿಮ್ಮ ಹೆಗಲೇರಲಿದೆ. ಇದರಿಂದ ಒತ್ತಡ ಅನುಭವಿಸುವ ಸಾಧ್ಯತೆ ಇದೆ.

ತುಲಾ : ರಾಜಕೀಯ ವ್ಯಕ್ತಿಗಳಿಗೆ ಅನುಕೂಲಕರ ದಿನವಾಗಿದೆ. ನಿಮ್ಮ ಏಳ್ಗೆಯನ್ನು ಕಂಡು ಹೊಟ್ಟೆಕಿಚ್ಚು ಮಾಡುವವರು ಅಕ್ಕ ಪಕ್ಕದಲ್ಲೇ ಇದ್ದಾರೆ. ಹೀಗಾಗಿ ದೃಷ್ಟಿದಾರ ಕಟ್ಟಿಕೊಳ್ಳಿ. ಬೆಂಕಿಯಿಂದ ದೂರವಿರಿ.

ವೃಶ್ಚಿಕ : ವಿದ್ಯಾರ್ಥಿಗಳಿಗೆ ಶುಭ ಲಾಭವಿದೆ. ನಿಮ್ಮ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುವುದು. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ನಾಗದೋಷ ಪರಿಹಾರ ಮಾಡಿಕೊಳ್ಳಿ.

ಧನು : ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಹೊರಗಿನ ಆಹಾರ ಸೇವನೆ ಬೇಡ. ಸಾದ್ಯವಾದಷ್ಟು ದ್ರವರೂಪದ ಆಹಾರವನ್ನೇ ಸೇವನೆ ಮಾಡಿ. ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಸಾಲಗಾರರ ಕಾಟವಿದೆ.

ಮಕರ : ಉದ್ಯೋಗದಲ್ಲಿ ಲಾಭ ನಿಮ್ಮನ್ನು ಅರಸಿ ಬರಲಿದೆ. ಅತಿಯಾಗಿ ಖರ್ಚು ವೆಚ್ಚ ಮಾಡಬೇಡಿ. ಇದರಿಂದ ಸಂಪಾದನೆಯೆಲ್ಲ ನೀರಿನಂತೆ ಪೋಲಾಗಲಿದೆ. ಮನೆಯಲ್ಲಿ ಶುಭ ಕಾರ್ಯದ ಮುನ್ಸೂಚನೆ ಸಿಗಲಿದೆ. ಆಂಜನೇಯನ ಆರಾಧನೆ ಮಾಡಿ.

ಕುಂಭ : ಮನೆಗೆ ಬಂಧು – ಮಿತ್ರರ ಆಗಮನವಿದೆ. ಕುಲದೇವತೆ ದರ್ಶನ ಮಾಡಲು ತೆರಳಲಿದ್ದೀರಿ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಕೋಪದ ಕೈಗೆ ಬುದ್ಧಿ ಕೊಡಬೇಡಿ.

ಮೀನ : ಕಚೇರಿಯಲ್ಲಿ ಹಿತಶತ್ರುಗಳ ಕಾಟವಿದೆ. ಹೀಗಾಗಿ ಯಾರ  ಜೊತೆಯೂ ಅತಿಯಾದ ಸಲುಗೆ ಬೇಡ, ಸ್ನೇಹಿತರ ಜೊತೆ ಸೇರಿ ಪಿಕ್ನಿಕ್​ ಹೋಗಲಿದ್ದೀರಿ. ಪೋಷಕರ ಆರೋಗ್ಯ ಬಗ್ಗೆ ಜಾಗ್ರತೆ ಇರಲಿ. ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಿ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿ ಕೇಳುವಿರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments