Saturday, September 24, 2022
Google search engine
HomeUncategorizedಈ ಕಿರಿದಾದ ಬೆಟ್ಟದ ತುದಿಯಲ್ಲಿ ನಡೆಯಲು ಗಟ್ಟಿಯಿರಬೇಕು ಗುಂಡಿಗೆ…!

ಈ ಕಿರಿದಾದ ಬೆಟ್ಟದ ತುದಿಯಲ್ಲಿ ನಡೆಯಲು ಗಟ್ಟಿಯಿರಬೇಕು ಗುಂಡಿಗೆ…!

ಈ ಕಿರಿದಾದ ಬೆಟ್ಟದ ತುದಿಯಲ್ಲಿ ನಡೆಯಲು ಗಟ್ಟಿಯಿರಬೇಕು ಗುಂಡಿಗೆ…!

ಲೆಲ್ಯಾಂಡ್​ ನಿಸ್ಕಿ ಎಂಬ ಪರ್ವತಾರೋಹಿ ಅತ್ಯಂತ ಕಿರಿದಾದ ಪರ್ವತ ಶಿಖರದ ಮೇಲೆ ನಡೆಯುವ ಸಾಹಸದ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದ ಸ್ಥಳವು ವಾಷಿಂಗ್ಟನ್​ ಸ್ಟೇಟ್​ನ ನಾರ್ತ್​ ಕ್ಯಾಸ್ಕೇಡ್ಸ್​ ರಾಷ್ಟ್ರೀಯ ಉದ್ಯಾನವನದ ಶಿಖರವಾಗಿದೆ. ಲೆಲ್ಯಾಂಡ್​ ನಿಸ್ಕಿ ಅವರು ಸೆಪ್ಟೆಂಬರ್​ 2ರಂದು ಇನ್​ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪರ್ವತದ ತುಟ್ಟತುದಿಯ ಮೇಲಿನ ಕಿರಿದಾದ ಪ್ರದೇಶದಲ್ಲಿ ನಡೆಯುವುದನ್ನು ಕಾಣಬಹುದು. ಅಲ್ಲಿ ಕಾಲುದಾರಿ ಸಹ ಇಲ್ಲ. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಲ್ಲಿ ಇಡಬೇಕಾದಂತಿದೆ. ಸ್ವಲ್ಪ ಆಯತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ. ಆತ ಕೇವಲ ಹೆಲ್ಮೆಟ್​ ಧರಿಸಿದ್ದು, ಸಣ್ಣದೊಂದು ಬ್ಯಾಗ್​ ಸಹ ಕಾಣಿಸುತ್ತದೆ.

ನಾನು ಕೆಲವು ಸೂಪರ್​ ಎಕ್ಸ್​ಪೋಸ್ಟ್​ ಥಿನ್​ ರಿಡ್ಜ್​ ಕ್ಲೈಂಬಿಂಗ್​ ಪ್ರೀತಿಸುತ್ತೇನೆ. ಒಂದೆರಡು ದಿನಗಳ ಹಿಂದೆ ಬೋಸ್ಟನ್​ ಜಲಾನಯನ ಪ್ರದೇಶಕ್ಕೆ ಬಂದಿದ್ದೇನೆ, ಕ್ಯಾಸ್ಕೇಡ್​ಗಳ ಸುತ್ತಲಿನ ಎಲ್ಲಾ ನಂಬಲಾಗದ ಪ್ರದೇಶಗಳಿಂದ ಆಶ್ಚರ್ಯಚಕಿತನಾಗಿದ್ದೇನೆ ಎಂದು ಅವರು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments