Friday, March 24, 2023
Google search engine
HomeUncategorizedಈತ ಹೋದಲ್ಲೆಲ್ಲಾ ಆಗುತ್ತಿತ್ತು ಮಳೆ….! ಇಲ್ಲಿದೆ ‌ʼರೇನ್‌ ಮ್ಯಾನ್ʼ ಕುರಿತ ವಿಚಿತ್ರ ಸ್ಟೋರಿ

ಈತ ಹೋದಲ್ಲೆಲ್ಲಾ ಆಗುತ್ತಿತ್ತು ಮಳೆ….! ಇಲ್ಲಿದೆ ‌ʼರೇನ್‌ ಮ್ಯಾನ್ʼ ಕುರಿತ ವಿಚಿತ್ರ ಸ್ಟೋರಿ

ಈತ ಹೋದಲ್ಲೆಲ್ಲಾ ಆಗುತ್ತಿತ್ತು ಮಳೆ….! ಇಲ್ಲಿದೆ ‌ʼರೇನ್‌ ಮ್ಯಾನ್ʼ ಕುರಿತ ವಿಚಿತ್ರ ಸ್ಟೋರಿ

ನ್ಯೂಯಾರ್ಕ್​: ಕೆಲವೊಮ್ಮೆ ಯಾರೂ ಊಹಿಸದ ವಿಚಿತ್ರಗಳು ಈ ಭೂಮಿಯ ಮೇಲಿದೆ. ಕೆಲವು ನಿಗೂಢ ವ್ಯಕ್ತಿಗಳೂ ಇದ್ದಾರೆ. ಅಂಥವರಲ್ಲಿ ಒಬ್ಬರು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ವಾಸಿಸುವ ಡೊನಾಲ್ಡ್ ಅಕಾ ಡಾನ್ ಡೆಕ್ಕರ್. ಇವರು ‘ದಿ ರೇನ್ ಮ್ಯಾನ್’ ಅಂದರೆ ಮಳೆ ಮನುಷ್ಯ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇದಕ್ಕೆ ಕಾರಣ, ಇವರು ಎಲ್ಲಿಗೆ ಹೋದರೂ, ಇದ್ದಕ್ಕಿದ್ದಂತೆ ಮಳೆ ಬೀಳಲು ಪ್ರಾರಂಭಿಸುತ್ತದೆಯಂತೆ.

1983ರಲ್ಲಿ ಡಾನ್ ಡೆಕ್ಕರ್ 21 ವರ್ಷ ವಯಸ್ಸಿನವರಾಗಿದ್ದಾಗ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದರು. ಆ ಸಮಯದಲ್ಲಿ ಇವರ ಅಜ್ಜ ನಿಧನರಾದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಡಾನ್​ಗೆ ತಾತ್ಕಾಲಿಕ ಜಾಮೀನು ನೀಡಲಾಗಿತ್ತು. ಡಾನ್ ಡೆಕ್ಕರ್​ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಆಗ ಇದ್ದಕ್ಕಿದ್ದಂತೆ ಮಳೆ ಆಗಿದ್ದು ಎಲ್ಲರೂ ಅಚ್ಚರಿಗೊಳಗಾದರು.

ಡಾನ್ ಮನೆಯಿಂದ ಹೊರಗೆ ಬಂದೊಡನೆ ಅದು ನಿಂತಿತು. ಇದು ಹೇಗೆ ಸಂಭವಿಸಿತು ಎಂದು ಯಾರಿಗೂ ಅರ್ಥವಾಗಲಿಲ್ಲ. ಇದಾದ ಬಳಿಕ ಡಾನ್​ ಎಲ್ಲಿಗೆ ಹೋದರೂ ಹೀಗೆಯೇ ಆಗತೊಡಗಿತ್ತು. ಡಾನ್​ಗೆ ದೆವ್ವ ಮೆಟ್ಟಿದೆ ಎಂದು ಸುದ್ದಿಯಾಯಿತು. ಅವರ ದೇಹದ ಮೇಲೆ ಪವಿತ್ರ ಶಿಲುಬೆಯನ್ನು ಇರಿಸಲಾಯಿತು. ಹಾಗೆ ಮಾಡಿದಾಗ ಡಾನ್ ಚರ್ಮವು ಇದ್ದಕ್ಕಿದ್ದಂತೆ ಸುಟ್ಟುಹೋಯಿತು !

ಅವರ ಸುದ್ದಿ ಎಲ್ಲೆಡೆ ವೈರಲ್​ ಆಗಿ ಜನ ಅವರನ್ನು ರೇನ್‌ ಮ್ಯಾನ್‌ ಎಂದೇ ಕರೆಯುತ್ತಿದ್ದಾರೆ. ಜೈಲಿಗೆ ಹೋದಾಗಲೂ ಅಲ್ಲಿ ಮಾತ್ರ ಮಳೆ ಬಂತು. ಜೈಲು ಅಧಿಕಾರಿಗಳು ಚರ್ಚ್‌ನಿಂದ ಪಾದ್ರಿಯನ್ನು ಕರೆಸಿದರು. ಅವರು ಬೈಬಲ್ ಓದಲು ಪ್ರಾರಂಭಿಸಿದ ತಕ್ಷಣ, ಬೈಬಲ್ ಹೊರತುಪಡಿಸಿ, ಅಲ್ಲಿದ್ದ ಎಲ್ಲವೂ ಮಳೆಯಿಂದ ಒದ್ದೆಯಾಯಿತು. ಆದರೆ ಬೈಬಲ್ ಓದಿದ ಕೂಡಲೇ ಮಳೆ ಇದ್ದಕ್ಕಿದ್ದಂತೆ ನಿಂತುಹೋಯಿತು. ಡಾನ್ ಅವರೊಂದಿಗಿನ ಕೊನೆಯ ಘಟನೆ ಇದು.

ಡಾನ್ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಹುಶಃ ಅವರ ಅಜ್ಜ ಅವೆಲ್ಲವನ್ನೂ ಮಾಡಿಸುತ್ತಿದ್ದ ಎಂದು ಹೇಳಿದ್ದ. ಇದನ್ನು ನೋಡಿದವರು ಹಲವರು ಇದ್ದಾರೆ. ಆದರೆ ಈ ಘಟನೆಯನ್ನು ನೋಡದವರು ಯಾರೂ ಇಂದಿಗೂ ನಂಬುತ್ತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments