Friday, October 7, 2022
Google search engine
HomeUncategorizedಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಸುಮಾರು 10 ವರ್ಷಗಳಿಂದ ಬ್ಯಾಂಕ್​ ಖಾತೆಯಿಂದ ಸಂಬಳ ತೆಗೆಯದ ಸ್ವೀಪರ್​ ಧೀರಜ್​ ಕಥೆ ನೆನಪಿರಬಹುದು. ದುರದೃಷ್ಟವಶಾತ್​, ಕ್ಷಯರೋಗದಿಂದಾಗಿ ಭಾನುವಾರ ನಸುಕಿನಲ್ಲಿ ಆತ ಮೃತರಾಗಿದ್ದಾರೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಆತನ ಬ್ಯಾಂಕ್​ ಖಾತೆಯಲ್ಲಿ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

ಪ್ರಯಾಗರಾಜ್​ನಲ್ಲಿರುವ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಸಫಾಯಿಕರ್ಮಚಾರಿಯಾಗಿದ್ದ ಧೀರಜ್​ಗೆ ಅವರ ತಂದೆಯ ಕೆಲಸವೇ ಸಿಕ್ಕಿತ್ತು. ತಂದೆ ಕೂಡ ಅದೇ ಆಸ್ಪತ್ರೆಯಲ್ಲಿ ಸ್ವೀಪರ್​ ಆಗಿದ್ದರು. ಅವರ ಮರಣದ ನಂತರ ಧೀರಜ್​ಗೆ ಕೆಲಸ ಸಿಕ್ಕಿತ್ತು.

ವಿಚಿತ್ರ ಕಾರಣಗಳಿಗಾಗಿ ತಂದೆ ಮತ್ತು ಮಗ ಇಬ್ಬರೂ ತಮ್ಮ ವೇತನದ ಖಾತೆಯಿಂದ ಯಾವುದೇ ಹಣವನ್ನು ಹಿಂಪಡೆದಿರಲಿಲ್ಲ. ತಂದೆಯಂತೆ ಧೀರಜ್​ ಕೂಡ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದ. ಅವರ 80 ವರ್ಷದ ತಾಯಿ ಕೂಡ ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿದ್ದರು.

ಕೆಲವು ತಿಂಗಳ ಹಿಂದೆ ಕೆಲವು ಅಧಿಕಾರಿಗಳು ಧೀರಜ್​ ಹಣದ ಬಗ್ಗೆ ವಿಚಾರಿಸಲು ಸಹ ಬಂದಿದ್ದರು. ಇನ್ನು ಭಯದಿಂದ ಆತ ಮದುವೆಯಾಗಿರಲಿಲ್ಲ. ಅವರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಸಲ್ಲಿಸುತ್ತಿದ್ದರು ಎಂದು ಆತನ ಸ್ನೇಹಿತ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments