Tuesday, December 6, 2022
Google search engine
HomeUncategorizedಈತನ ವೇಷ ನೋಡಿ ನಗುತ್ತಿದ್ದಾರೆ ಜನ; ಅಷ್ಟಕ್ಕೂ ಮಾಡಿದ್ದೇನು ಅನ್ನೋದನ್ನ ನೀವೇ ನೋಡಿ…!

ಈತನ ವೇಷ ನೋಡಿ ನಗುತ್ತಿದ್ದಾರೆ ಜನ; ಅಷ್ಟಕ್ಕೂ ಮಾಡಿದ್ದೇನು ಅನ್ನೋದನ್ನ ನೀವೇ ನೋಡಿ…!

ಈತನ ವೇಷ ನೋಡಿ ನಗುತ್ತಿದ್ದಾರೆ ಜನ; ಅಷ್ಟಕ್ಕೂ ಮಾಡಿದ್ದೇನು ಅನ್ನೋದನ್ನ ನೀವೇ ನೋಡಿ…!

ಇಂದು ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚಿರುವ ಕಾರಣ, ತಾವು ಪ್ರಸಿದ್ಧಿಗೆ ಬರಲು ಜನರು ವಿಧವಿಧ ವೇಷ ತೊಟ್ಟು ನರ್ತಿಸುವುದು ಮಾಮೂಲಾಗಿದೆ. ಅಂಥದ್ದರಲ್ಲಿ ಒಂದು ವಿಡಿಯೋ ವೈರಲ್​ ಆಗಿದೆ. ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಭೂತದ ಡ್ರೆಸ್​ನಲ್ಲಿ ಬಂದು ಕೆಲವು ದೇಶಗಳಲ್ಲಿ ಆಚರಿಸುವ ಹ್ಯಾಲೋವೀನ್​ ಡ್ರೆಸ್​ನಲ್ಲಿ ರೀಲ್ಸ್​ ಮಾಡುವವರು ಹೆಚ್ಚುತ್ತಿದ್ದಂತೆಯೇ, ಅದಕ್ಕೆ ಹಾರರ್​ ಟಚ್​ ಕೊಟ್ಟು ಹಲವರು ರೀಲ್ಸ್​ ಶುರು ಮಾಡಿಕೊಂಡಿದ್ದಾರೆ.

ಭಯಾನಕ ಕಥಾ ಹಂದರ ಹೊಂದಿರುವ “ಕಂಜ್ಯೂರಿಂಗ್” ವೆಬ್​ಸಿರೀಸ್​ನಲ್ಲಿ ಅತ್ಯಂತ ಭಯಾನಕ ಎನಿಸುವ ಪಾತ್ರ ನನ್​. ಈಗ ಜನರು ಇದರ ವೇಷಭೂಷಣ ತೊಟ್ಟು ರೀಲ್ಸ್​ ಮಾಡುತ್ತಿದ್ದಾರೆ. ‘imjustbesti’ ಪುಟದಲ್ಲಿ ವೈರಲ್​ ಆಗಿರುವ ನನ್​ ವೇಷಧಾರಿಯ ನೃತ್ಯ ಭಯಾನಕ ಎನ್ನುವುದಕ್ಕಿಂತ ಹೆಚ್ಚಾಗಿ ತಮಾಷೆ ಮೂಡಿಸುವಂತಿದೆ. ಆದರೆ ಮಕ್ಕಳು ಮಾತ್ರ ಈ ವಿಡಿಯೋ ನೋಡಿ ಭಯ ಪಟ್ಟುಕೊಳ್ಳುವುದು ಖಂಡಿತ.

ಕಪ್ಪು ಸೂಟ್, ದುಪಟ್ಟಾ ಧರಿಸಿ ಪಂಜಾಬಿ ಟ್ವಿಸ್ಟ್‌ನೊಂದಿಗೆ ದಿ ನನ್‌ನ ವೇಷಭೂಷಣವನ್ನು ಧರಿಸಿರುವ ವ್ಯಕ್ತಿಯೊಬ್ಬ ಡಾನ್ಸ್​ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ತಮಾಷೆಯಾಗಿ, ಆರಂಭದಲ್ಲಿ ಒಂದು ಕೈಯಲ್ಲಿ ರೋಲಿಂಗ್ ಪಿನ್ ಅನ್ನು ಹಿಡಿದಿರುವ ಈ ವ್ಯಕ್ತಿ ಹಿತ್ತಲಿನಲ್ಲಿ ಈಜುಕೊಳದ ಬಳಿ ನೃತ್ಯ ಮಾಡುತ್ತಿದ್ದಾನೆ. ಪಂಜಾಬ್‌ನ ಸಾಂಪ್ರದಾಯಿಕ ನೃತ್ಯ ಈತ ಮಾಡಿದ್ದು, ನೆಟ್ಟಿಗರು ಈ ಡಾನ್ಸ್​ಗೆ ಫಿದಾ ಆಗಿದ್ದಾರೆ. ‘ಪಂಜಾಬಿ ನನ್’ ಎಂದು ತಮಾಷೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments