Thursday, August 11, 2022
Google search engine
HomeUncategorizedಇಷ್ಟಾರ್ಥ ಸಿದ್ಧಿಗಾಗಿ ನಾಗರಪಂಚಮಿಯಂದು ಈ ದೇವಿಯನ್ನೂ ಪೂಜಿಸಿ

ಇಷ್ಟಾರ್ಥ ಸಿದ್ಧಿಗಾಗಿ ನಾಗರಪಂಚಮಿಯಂದು ಈ ದೇವಿಯನ್ನೂ ಪೂಜಿಸಿ

ಭವಿಷ್ಯ ಪುರಾಣದ ಪ್ರಕಾರ ನಾಗ ಪಂಚಮಿ ತಿಥಿ ಬಹಳ ಮಹತ್ವದ್ದು. ನಾಗರ ಪಂಚಮಿಯಂದು ಹಾವಿಗೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ನಾಗರ ಪಂಚಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿ ಆಚರಿಸಲಾಗುತ್ತದೆ.

ಹಿಂದೂ ಧರ್ಮದ ಪ್ರಾಚೀನ ದೇವರುಗಳು ಹಾಗೂ ಹಾವಿಗೆ ವಿಶೇಷ ಸಂಬಂಧವಿದೆ. ಶೇಷನಾಗನ ಮೇಲೆ ಮಲಗಿರುವ ವಿಷ್ಣು, ಕುತ್ತಿಗೆಗೆ ಹಾವನ್ನು ಸುತ್ತಿಕೊಂಡಿರುವ ಶಿವನಿಗೂ ಹಾವಿಗೂ ಸಂಬಂಧವಿದೆ. ಕೆಲವೊಂದು ದೇವಿ ದೇವಸ್ಥಾನಗಳಲ್ಲಿ ನಾಗನ ಪೂಜೆ ನಡೆಯುತ್ತದೆ. ತಾಯಿ ದುರ್ಗೆಯ ಆರಂಭಿಕ ರೂಪವಾಗಿ ನಾಗರ ಹಾವನ್ನು ಅನೇಕರು ಪೂಜೆ ಮಾಡ್ತಾರೆ.

ಹಿಂದೂ ಪುರಾಣದ ಪ್ರಕಾರ, ನಾಗರನನ್ನು ನಾಗ ಲೋಕದ ರಾಜನೆಂದು ಪರಿಗಣಿಸಲಾಗಿದೆ. ನಾಗರಪಂಚಮಿಯಂದು ಸರ್ಪಗಳ ದೇವಿ ಮನಸಾ ದೇವಿ ಪೂಜೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಮನಸಾ ದೇವಿಯ ದೊಡ್ಡ ದೇವಾಲಯವಿದೆ. ಶಿವನ ಭಾಗವಾಗಿ ಮನಸಾ ದೇವಿಯ ಜನನವಾಗಿದೆ ಎಂದು ನಂಬಲಾಗಿದೆ.

ಮನಸಾ ದೇವಿಯನ್ನು ನಾಗ ಸಮುದಾಯದ ದೇವಿ ಹಾಗೂ ನಾಗರಾಜ ವಾಸುಕಿಯ ಸಹೋದರಿ ಎಂದು ನಂಬಲಾಗಿದೆ. ನಾಗರಪಂಚಮಿ ದಿನದಂದು ಮನಸಾ ದೇವಿ ಆರಾಧನೆ ಮಾಡುವುದ್ರಿಂದ ಭಕ್ತರ ಎಲ್ಲ ಆಸೆ ಈಡೇರುತ್ತದೆ. ಜೊತೆಗೆ ಹಾವು ಕಚ್ಚುವ ಭಯ ದೂರವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments