Monday, December 5, 2022
Google search engine
HomeUncategorizedಇಳಿಕೆಯಾದ ಚಿಲ್ಲರೆ ಹಣದುಬ್ಬರ: ಸಾಲಗಾರರಿಗೆ ಸಿಹಿ ಸುದ್ದಿ..? ಬಡ್ಡಿದರ ಏರಿಕೆಗೆ ಬೀಳಲಿದೆಯಾ ಬ್ರೇಕ್…?

ಇಳಿಕೆಯಾದ ಚಿಲ್ಲರೆ ಹಣದುಬ್ಬರ: ಸಾಲಗಾರರಿಗೆ ಸಿಹಿ ಸುದ್ದಿ..? ಬಡ್ಡಿದರ ಏರಿಕೆಗೆ ಬೀಳಲಿದೆಯಾ ಬ್ರೇಕ್…?

ಇಳಿಕೆಯಾದ ಚಿಲ್ಲರೆ ಹಣದುಬ್ಬರ: ಸಾಲಗಾರರಿಗೆ ಸಿಹಿ ಸುದ್ದಿ..? ಬಡ್ಡಿದರ ಏರಿಕೆಗೆ ಬೀಳಲಿದೆಯಾ ಬ್ರೇಕ್…?

ಚಿಲ್ಲರೆ ಹಣದುಬ್ಬರದರ ಅಕ್ಟೋಬರ್ ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇಕಡ 6.77 ಕ್ಕೆ ಕುಸಿದಿದೆ. ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರದ ಶೇಕಡ 7.41 ರಷ್ಟು ಇತ್ತು.

ಸಗಟು ಹಣದುಬ್ಬರ ದರ ಅಕ್ಟೋಬರ್ ನಲ್ಲಿ 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಶೇಕಡ 8.39 ರಷ್ಟು ಇದೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಏರಿಕೆ ಚಿಂತನೆ ಕೈಬಿಡುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆದಿದೆ.

ಹಣದುಬ್ಬರ ತಗ್ಗಿಸುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್‌ಬಿಐ ಗಣನೀಯವಾಗಿ ಏರಿಕೆ ಮಾಡಿದೆ. ಇದರ ಪರಿಣಾಮ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿ ದರವನ್ನು ಸಾಕಷ್ಟು ಹೆಚ್ಚಳ ಮಾಡಿದ್ದು, ಗೃಹ ಸಾಲ, ವಾಹನ ಸಾಲ ಮೊದಲಾದ ಸಾಲಗಳ ಇಎಂಐ ಏರಿಕೆಯಾಗಿದೆ.

ಸದ್ಯಕ್ಕೆ ಹಣದುಬ್ಬರ ಇಳಿಕೆಯಾಗಿರುವುದು ಸಮಾಧಾನದ ಸಂಗತಿಯಾಗಿದ್ದು, ಹಣದುಬ್ಬರ ಇಳಿಕೆಯಾಗಿರುವುದರಿಂದ ಬಡ್ಡಿದರ ಏರಿಕೆ ಆಲೋಚನೆಯನ್ನು ಆರ್‌ಬಿಐ ಕೈಬಿಡಬಹುದು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments