ಇನ್ನೆರಡು ತಿಂಗಳು ಕಾಯಿರಿ ಕುಮಾರಣ್ಣ ಅಧಿಕಾರಕ್ಕೆ ಬರ್ತಾರೆ; ಅಧಿಕಾರಿ ವಿರುದ್ಧ ಹರಿಹಾಯ್ದ ವೇಳೆ ಹೆಚ್.ಡಿ. ರೇವಣ್ಣ ಹೇಳಿಕೆ
ಇನ್ನೆರಡು ತಿಂಗಳು ಕಾಯಿರಿ ಕುಮಾರಣ್ಣ ಅಧಿಕಾರಕ್ಕೆ ಬರ್ತಾರೆ. ಆಗ ನಿಮ್ಮಗಳಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕು ಎಂದು ನನಗೆ ಗೊತ್ತಿದೆ. ಹೀಗೆಂದು ಶಾಸಕ ಎಚ್.ಡಿ. ರೇವಣ್ಣ ಅಧಿಕಾರಿ ವಿರುದ್ಧ ಹರಿಹಾಯ್ದ ವೇಳೆ ಎಚ್ಚರಿಕೆ ನೀಡಿದ್ದಾರೆ.
ಹಾಸನ ತಾಲೂಕಿನ ಮೆಳಗೋಡು ಗ್ರಾಮದಲ್ಲಿ ಅಹವಾಲು ಸ್ವೀಕಾರ ಮತ್ತು ಗ್ರಾಮ ಸಭೆ ವೇಳೆ ಈ ಮಾತುಗಳನ್ನು ಹೇಳಿದ ರೇವಣ್ಣ, 10 ರೂಪಾಯಿಯನ್ನೂ ತೆಗೆದುಕೊಳ್ಳದೆ ನಿಮಗೆ ಕೆಲಸ ಕೊಟ್ಟೆ. ಈಗ ಜನರ ಸೇವೆ ಮಾಡ್ರಿ ಅಂದ್ರೆ ನಾಟಕ ಮಾಡ್ತೀರಾ ಎಂದು ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಅರ್ಜುನ್ ವಿರುದ್ಧ ಕಿಡಿ ಕಾರಿದ್ದಾರೆ.
ತಿಂಗಳಾದರೂ ಒಂದು ಟ್ರಾನ್ಸ್ಫಾರ್ಮರ್ ಬದಲಾಯಿಸಲು ಆಗಿಲ್ಲ ಅಂದರೆ ನೀವು ಏನು ಕೆಲಸ ಮಾಡುತ್ತೀರಿ. ಹಳ್ಳಿ ಜನರಿಗೆ ಬೇಕಾಗಿರುವುದು ಕುಡಿಯುವ ನೀರು, ವಿದ್ಯುತ್. ಅದನ್ನೇ ಸಮರ್ಪಕವಾಗಿ ನೀಡಿಲ್ಲವೆಂದರೆ ಹೇಗೆ ಎಂದು ಗರಂ ಆಗಿದ್ದಾರೆ.