ಇದ್ದಕ್ಕಿದ್ದಂತೆ ಕುಸಿದ ಎಲಿವೇಟರ್; ವ್ಯಕ್ತಿಯನ್ನು ಬಲಿ ಪಡೆದ ಹಳೆ ವಿಡಿಯೋ ಮತ್ತೆ ವೈರಲ್

ಅಂಡರ್ ಗ್ರೌಂಡ್ ನಿಲ್ದಾಣವೊಂದರ ಕೆಳಗೆ ದೊಡ್ಡ ರಂಧ್ರ ಕಾಣಿಸಿಕೊಂಡಿದ್ದರಿಂದ ಎಸ್ಕಲೇಟರ್ನೊಳಕ್ಕೆ ವ್ಯಕ್ತಿಯೊಬ್ಬರು ಅಚಾನಕ್ಕಾಗಿ ಬೀಳುತ್ತಾರೆ. ಈ ಭಯಾನಕ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ ಮತ್ತು ಹಲವರನ್ನು ಬೆಚ್ಚಿಬೀಳಿಸಿದೆ.
ಬಿಬಿಸಿ ಪ್ರಕಾರ, ಫೆಬ್ರವರಿ 2018 ರಲ್ಲಿ ಟರ್ಕಿಯ ಇಸ್ತಾನ್ಬುಲ್ನಲ್ಲಿರುವ ಅಯಾಜಗಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕರು ಎಸ್ಕಲೇಟರ್ ನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಎಸ್ಕಲೇಟರ್ ಕೆಳಗೆ ಉಂಟಾದ ದೊಡ್ಡ ಗುಂಡಿಯಿಂದಾಗಿ ಎಸ್ಕಲೇಟರ್ ಹಾಳಾಗಿ ಗುಂಡಿಯೊಳಕ್ಕೆ ವ್ಯಕ್ತಿ ಬೀಳುತ್ತಾರೆ. ಅವರ ರಕ್ಷಣೆಗೆ ಇತರರು ಮುಂದಾದ್ರೂ ಅದು ಸಾಧ್ಯವಾಗುವುದಿಲ್ಲ.
ಅಂತಿಮವಾಗಿ ಅಗ್ನಿಶಾಮಕ ದಳದಿಂದ ರಕ್ಷಿಸಲ್ಪಟ್ಟ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.