Saturday, September 24, 2022
Google search engine
HomeUncategorizedಇದೇ ಮೊದಲ ಬಾರಿಗೆ ಹುಟ್ಟುಹಬ್ಬದಂದು ಅಮ್ಮನ ಆಶೀರ್ವಾದ ಪಡೆಯದ ನರೇಂದ್ರ ಮೋದಿ; ಇದರ ಹಿಂದಿನ ಕಾರಣ...

ಇದೇ ಮೊದಲ ಬಾರಿಗೆ ಹುಟ್ಟುಹಬ್ಬದಂದು ಅಮ್ಮನ ಆಶೀರ್ವಾದ ಪಡೆಯದ ನರೇಂದ್ರ ಮೋದಿ; ಇದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ

ಇದೇ ಮೊದಲ ಬಾರಿಗೆ ಹುಟ್ಟುಹಬ್ಬದಂದು ಅಮ್ಮನ ಆಶೀರ್ವಾದ ಪಡೆಯದ ನರೇಂದ್ರ ಮೋದಿ; ಇದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆಯುವುದು ವಾಡಿಕೆಯಾಗಿತ್ತು. ಇಂದು ನರೇಂದ್ರ ಮೋದಿಯವರು 72ನೇ ವಸಂತಕ್ಕೆ ಕಾಲಿಟ್ಟಿದ್ದು, ಬಿಡುವಿಲ್ಲದ ಕಾರ್ಯಕ್ರಮಗಳ ಕಾರಣಕ್ಕೆ ಇದೆ ಮೊದಲ ಬಾರಿಗೆ ತಾಯಿ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ.

ದೇಶದಿಂದ ಕಣ್ಮರೆಯಾಗಿದ್ದ ಚೀತಾಗಳು ಏಳು ದಶಕಗಳ ಬಳಿಕ ಭಾರತಕ್ಕೆ ಆಗಮಿಸಿದ್ದು, ಇವುಗಳನ್ನು ಭಾರತದ ಕಾಡಿನೊಳಗೆ ಬಿಡಲು ಖುದ್ದು ನರೇಂದ್ರ ಮೋದಿ ಅವರೇ ಆಗಮಿಸಿದ್ದರು. ಅಲ್ಲದೆ ಆ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಧಾನಿಯವರು ಪಾಲ್ಗೊಂಡಿದ್ದಾರೆ.

ಹೀಗಾಗಿ ನರೇಂದ್ರ ಮೋದಿಯವರು ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ. ಇದನ್ನು ಮಧ್ಯಪ್ರದೇಶದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸ್ಮರಿಸಿಕೊಂಡ ನರೇಂದ್ರ ಮೋದಿಯವರು, ನನ್ನ ತಾಯಿಯ ಪಾದಸ್ಪರ್ಶಿಶಿ ಆಶೀರ್ವಾದ ಪಡೆಯಲು ಈ ಬಾರಿ ಸಾಧ್ಯವಾಗಿಲ್ಲ. ಆದರೆ ಇಂದು ಬುಡಕಟ್ಟು ಪ್ರದೇಶಗಳ ಲಕ್ಷಾಂತರ ತಾಯಂದಿರು ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments