Thursday, December 8, 2022
Google search engine
HomeUncategorizedಇದು ಹೈಫೈ ಕಳ್ಳರ ಕಥೆ….! ಕಾರಿನಲ್ಲಿ ಬಂದು ಬಲ್ಬ್‌ ಕಳವು

ಇದು ಹೈಫೈ ಕಳ್ಳರ ಕಥೆ….! ಕಾರಿನಲ್ಲಿ ಬಂದು ಬಲ್ಬ್‌ ಕಳವು

ಇದು ಹೈಫೈ ಕಳ್ಳರ ಕಥೆ….! ಕಾರಿನಲ್ಲಿ ಬಂದು ಬಲ್ಬ್‌ ಕಳವು

ಇದು ಹೈ ಫೈ ಕಳ್ಳರ ಕಥೆ. ಆಲ್ಟೋ ಕಾರಲ್ಲಿ ಬಂದ ನಾಲ್ವರ ಗುಂಪು ಅಂಗಡಿಗಳ ಹೊರಗೆ ಹಾಕಿದ್ದ ಬಲ್ಬ್ ಗಳನ್ನು ಕದ್ದೊಯ್ದಿದೆ. ರಾಜಸ್ಥಾನದ ಜುಂಜುನುದಲ್ಲಿ ನಡೆದಿರುವ ಕಳ್ಳತನದ ಸಂಪೂರ್ಣ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜುಂಜುನುವಿನ ನವಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ.

ನಾಲ್ವರು ಕಳ್ಳರ ತಂಡ ಆಲ್ಟೋ ಕಾರಿನಲ್ಲಿ ಬಂದಿದೆ. ಅವರಲ್ಲಿ ಇಬ್ಬರು ಕಾರಿನಿಂದ ಇಳಿದು ಮೊಬೈಲ್ ಅಂಗಡಿಯ ಹೊರಗಿನ ಬಲ್ಬ್ ಅನ್ನು ಕದಿಯಲು ಪ್ರಯತ್ನಿಸಿದ್ದಾರೆ. ನಂತರ ಅವರಲ್ಲಿ ಒಬ್ಬರು ರಸ್ತೆಯ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಅಂಗಡಿಯ ಹೊರಗೆ ಇರಿಸಲಾದ ಕುರ್ಚಿಯನ್ನು ಎತ್ತಿಕೊಂಡು ಬಲ್ಬ್ ಅನ್ನು ಕದ್ದಿದ್ದಾರೆ.

ಆಗ ಪಕ್ಕದಲ್ಲಿ ಮಲಗಿದ್ದ ಅಂಗಡಿ ಮಾಲೀಕ ಮಹೇಂದ್ರ ದೂತ್ ಸದ್ದು ಕೇಳಿ ಎಚ್ಚರಗೊಂಡಿದ್ದಾರೆ. ತಕ್ಷಣ ಅವರು ಕೂಗುತ್ತಿದ್ದಂತೆ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಮಹೇಂದ್ರ ಅವರು ಬೆಳಗ್ಗೆ ಸಿಸಿ  ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳರು ಬಲ್ಬ್ ಕದ್ದೊಯ್ದಿರುವುದು ಪತ್ತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments