Friday, October 7, 2022
Google search engine
HomeUncategorizedಅರ್ಧಗಂಟೆಯಲ್ಲಿ 8 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ; ಸಿಸಿ ಟಿವಿಯಲ್ಲಿತ್ತು ಕಳ್ಳರ ಹಕೀಕತ್ತು

ಅರ್ಧಗಂಟೆಯಲ್ಲಿ 8 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ; ಸಿಸಿ ಟಿವಿಯಲ್ಲಿತ್ತು ಕಳ್ಳರ ಹಕೀಕತ್ತು

ಅರ್ಧಗಂಟೆಯಲ್ಲಿ 8 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ; ಸಿಸಿ ಟಿವಿಯಲ್ಲಿತ್ತು ಕಳ್ಳರ ಹಕೀಕತ್ತು

ಅದು ಲುಧಿಯಾನದ ಫೇಮಸ್ ಮೊಬೈಲ್ ಶೋರೂಂ. ಈ ಶೋರೂಮ್ ಮೇಲೆ ಕಣ್ಣು ಹಾಕಿದ ಮೊಬೈಲ್ ಕಳ್ಳರು ರಾತ್ರೋ ರಾತ್ರಿ ನುಗ್ಗಿ ಅರ್ಧ ಗಂಟೆಯಲ್ಲಿ ಲಕ್ಷಾಂತರ ಮೌಲ್ಯದ ಮೊಬೈಲ್ ಕದ್ದೊಯ್ದಿದ್ದಾರೆ. ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಮಲ್ಹಾರ್ ರಸ್ತೆಯಲ್ಲಿರುವ ಮೊಬೈಲ್ ಶೋ ರೂಮ್‌ನ ಸಿಬ್ಬಂದಿಗಳು ಶೋ ರೂಮ್‌ನಿಂದ ತಡವಾಗಿ ಮನೆಗೆ ಹೊರಟಿದ್ದಾರೆ. ಅದೇ ಶೋ ರೂಮ್ ಮುಂದೆ ಕೂತಿದ್ದ ಗಾರ್ಡ್‌ಗಳು ನಿದ್ದೆಗೆ ಜಾರಿದ್ದೇ ತಡ. ಮೂವರು ಕಳ್ಳರು ಅಂಗಡಿಯಲ್ಲಿದ್ದ ಒನ್‌ಪ್ಲಸ್‌ ಬ್ರಾಂಡ್‌ನ ಮೊಬೈಲ್‌ಗಳನ್ನು ಕದ್ದೊಯ್ತಿದ್ದಾರೆ. ಬೆಳಿಗ್ಗೆ ಶೋ ರೂಮ್‌ಗೆ ಬಂದ ಸಿಬ್ಬಂದಿಗಳು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನ ನೋಡಿ ಶಾಕ್ ಆಗಿದ್ದಾರೆ. ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಎಸಿಪಿ ಕ್ರೈಂ ಸುಮಿತ್ ಸೂದ್, ಸಿಐಎ ಪ್ರಭಾರಿ ರಾಜೇಶ್‌ಕುಮಾರ್‌ ಮತ್ತು ಠಾಣೆ ಮೂವರು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆಗ ಸುಮಾರು 28 ಮೊಬೈಲ್‌ಗಳು ಕದ್ದಿರುವುದು ಬೆಳಕಿಗೆ ಬಂದಿದೆ. ಅವುಗಳ ಬೆಲೆ ಸುಮಾರು ಎಂಟು ಲಕ್ಷ ಎಂದು ಅಂದಾಜಿಸಲಾಗಿದೆ. ಕೊನೆಗೆ ಸಿಸಿಟಿವಿ ಪರೀಕ್ಷಿಸಿದ್ದಾಗ ಕಳ್ಳರು ಮಾಡಿರುವ ಕರ್ಮಕಾಂಡಗಳು ಬೆಳಕಿಗೆ ಬಂದಿದೆ.

ಸಿಸಿಟಿವಿಯ ದೃಶ್ಯಗಳ ಆಧಾರದ ಈ ಘಟನೆ ಬೆಳಗಿನ ಜಾವ 5:05ಕ್ಕೆ, ಎಂದು ಎಸಿಪಿ ಸುಮಿತ್‌ ಸೂದ್ ಮಾಧ್ಯಮದ ಮುಂದೆ ಹೇಳಿದ್ದಾರೆ. ಅಷ್ಟೆಅಲ್ಲ ಆದಷ್ಟು ಬೇಗ ಆರೋಪಿಗಳನ್ನ ಪತ್ತೆಮಾಡಿ ಬಂಧಿಸಲಾವುದು ಎಂದು ಕೂಡಾ ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments