Saturday, September 24, 2022
Google search engine
HomeUncategorizedಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಡುಗೆ ಮನೆಯಲ್ಲಿ ಪುಟ್ಟ ಮಗುವಿನ ದೋಸೆ ಕಾರುಬಾರಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗುವಷ್ಟು ವಯಸ್ಸಿನ ಕಂದಮ್ಮ ಅಡುಗೆ ಮನೆಯಿಂದ ದೋಸೆ ತಂದು ಅಮ್ಮನಿಗೆ ಬಡಿಸುವುದು ವಿಡಿಯೋದಲ್ಲಿ ಕಾಣಬಹುದು. ಇದನ್ನು ಜೋಷಿಕ್​ ಎಂಬ ಪುಟದಿಂದ ಇನ್​ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 16 ಮಿಲಿಯನ್​ ಬಾರಿ ವೀಕ್ಷಣೆಯಾಗಿದೆ.

ಜೋಶಿಕ್​ ಎಂಬ ಪುಟ್ಟ ಹುಡುಗ ಅಡುಗೆಮನೆಯಿಂದ ಒಂದು ದೊಡ್ಡ ಚಮಚದ ಮೇಲೆ ದೋಸೆಯೊಂದಿಗೆ ಹೊರಬಂದು, ಕೆಳಗೆ ಬೀಳದಂತೆ ಗಮನ ಕೇಂದ್ರೀಕರಿಸಿ ಅಮ್ಮನ ತಟ್ಟೆಗೆ ಹಾಕುತ್ತದೆ.

ನೆಟ್ಟಿಗರಿಗೆ ಈ ವಿಡಿಯೋಗೆ ಕಾಮೆಂಟ್​ ಮಾಡದೇ ಇರಲಾಗಿಲ್ಲ. ಸಾವಿರಾರು ಮಂದಿ ಮಗುವಿನ ದೋಸೆ ಸಾಹಸವನ್ನು ಮೆಚ್ಚಿ ಅಭಿಪ್ರಾಯ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments