Saturday, November 26, 2022
Google search engine
HomeUncategorizedಅಮೇಥಿಯಲ್ಲಿ ಸೋತಾಗಿನಿಂದಲೂ ರಾಹುಲ್ ಗಾಂಧಿ ಓಡುತ್ತಲೇ ಇದ್ದಾರೆ: ಸ್ಮೃತಿ ಇರಾನಿ ವ್ಯಂಗ್ಯ

ಅಮೇಥಿಯಲ್ಲಿ ಸೋತಾಗಿನಿಂದಲೂ ರಾಹುಲ್ ಗಾಂಧಿ ಓಡುತ್ತಲೇ ಇದ್ದಾರೆ: ಸ್ಮೃತಿ ಇರಾನಿ ವ್ಯಂಗ್ಯ

ಅಮೇಥಿಯಲ್ಲಿ ಸೋತಾಗಿನಿಂದಲೂ ರಾಹುಲ್ ಗಾಂಧಿ ಓಡುತ್ತಲೇ ಇದ್ದಾರೆ: ಸ್ಮೃತಿ ಇರಾನಿ ವ್ಯಂಗ್ಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕುರಿತು ಕಿಡಿ ಕಾರಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋತಾಗಿನಿಂದಲೂ ರಾಹುಲ್ ಗಾಂಧಿ ದೇಶದಾದ್ಯಂತ ಓಡುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಮಾತುಗಳನ್ನು ಆಡಿರುವ ಸ್ಮೃತಿ ಇರಾನಿ, ಈ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತದ ಕೊಳಕು ನೆಲದ ಮೇಲೆ ಕಾಲಿಡಬೇಡಿ ಎಂದವರ ಜೊತೆ, ಗೋ ಹತ್ಯೆ ಮಾಡಿದವರ ಜೊತೆ ಹೆಜ್ಜೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲ ಕಾಂಗ್ರೆಸ್ ಸೋಲು ಕಾಣುತ್ತಿದ್ದು, ಮುಂದೆಯೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ ಸ್ಮೃತಿ ಇರಾನಿ, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಪಾಲ್ಗೊಂಡಿದ್ದವರ ವಿರುದ್ಧವೂ ಕಿಡಿ ಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments