Monday, December 5, 2022
Google search engine
HomeUncategorizedಅಬ್ಬಬ್ಬಾ….! ಒಂಬತ್ತು ಮಕ್ಕಳನ್ನು ಸೈಕಲ್​ ಮೇಲೆ ಕುಳ್ಳರಿಸಿಕೊಂಡು ಸವಾರಿ; ವಿಡಿಯೋ ವೈರಲ್​

ಅಬ್ಬಬ್ಬಾ….! ಒಂಬತ್ತು ಮಕ್ಕಳನ್ನು ಸೈಕಲ್​ ಮೇಲೆ ಕುಳ್ಳರಿಸಿಕೊಂಡು ಸವಾರಿ; ವಿಡಿಯೋ ವೈರಲ್​

ಅಬ್ಬಬ್ಬಾ….! ಒಂಬತ್ತು ಮಕ್ಕಳನ್ನು ಸೈಕಲ್​ ಮೇಲೆ ಕುಳ್ಳರಿಸಿಕೊಂಡು ಸವಾರಿ; ವಿಡಿಯೋ ವೈರಲ್​

ಒಂದು ಸೈಕಲ್​ ಮೇಲೆ ಎಷ್ಟು ಮಂದಿ ಹೋಗಲು ಸಾಧ್ಯ? ಮೂರು, ನಾಲ್ಕು… ಚಿಕ್ಕ ಚಿಕ್ಕಮಕ್ಕಳಿದ್ದು ಭಾರಿ ಸರ್ಕಸ್​ ಮಾಡಿದರೆ ಐದು…. ಹೂಂ… ಹೂಂ…. ಒಂದು ಸೈಕಲ್​ನಲ್ಲಿ 9 ಮಂದಿ ಹೋಗಿದ್ದಾರೆ! ನಂಬಲು ಅಸಾಧ್ಯ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ.

ಒಂಬತ್ತು ಮಕ್ಕಳನ್ನು ಒಂದೇ ಸೈಕಲ್​ ಮೇಲೆ ಹೊತ್ತೊಯ್ಯುತ್ತಿದ್ದಾನೆ ಓರ್ವ ವ್ಯಕ್ತಿ. ಹಿಂಭಾಗದಲ್ಲಿ ಮುಂಭಾಗದಲ್ಲಿ ಅಲ್ಲದೆ ಭುಜವನ್ನೇರಿ, ಚಕ್ರದ ಮೇಲೆ ಹೀಗೆ ಎಲ್ಲೆಂದರಲ್ಲಿ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಪುಟ್ಟ ಮಕ್ಕಳನ್ನು ಕೂರಿಸಿಕೊಂಡು ನಿಲ್ಲಿಸಿಕೊಂಡು ಈ ವ್ಯಕ್ತಿ ಸೈಕಲ್​ ಓಡಿಸುತ್ತಿದ್ದಾನೆ.

ಸ್ವಲ್ಪ ಆಯ ತಪ್ಪಿದರೂ ಎಲ್ಲರ ಜೀವಕ್ಕೂ ಅಪಾಯ. ಆದರೆ ಅದ್ಯಾವುದನ್ನೂ ಲೆಕ್ಕಿಸದೇ ಆತ ಸೈಕಲ್​ ತುಳಿಯುತ್ತಿದ್ದು, ಮಕ್ಕಳು ಆರಾಮಾಗಿ ಇದ್ದರೆ. ಇದಕ್ಕೆ ನಿನ್ನೆ ನಿನ್ನೆಗೆ, ನಾಳೆ ನಾಳೆಗೆ ಎಂಬ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ ಕೊಟ್ಟು ವೈರಲ್​ ಮಾಡಲಾಗಿದೆ.

ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದಿಲ್ಲವಾದರೂ ಈ ಪರಿ ಸಾಹಸ ಮಾಡುತ್ತಿರುವ ಸವಾರನಿಗೆ ಮಾತ್ರ ಹ್ಯಾಟ್ಸ್​ ಆಫ್​ ಹೇಳಲೇಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments