Saturday, November 26, 2022
Google search engine
HomeUncategorizedಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಅಪ್ಪನಿಗೆ ಟಾಸ್ಕ್​ ಕೊಟ್ಟು ಬೆಚ್ಚಿಬೀಳಿಸುವ ಪುಟ್ಟ ಬಾಲೆ: ವೈರಲ್​ ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಈ ಯಾಂತ್ರಿಕತೆಯ ಬದುಕಿನಲ್ಲಿ ಆಗಾಗ್ಗೆ ಕುಟುಂಬದಲ್ಲಿ ನಡೆಯುವ ಚಿಕ್ಕಪುಟ್ಟ ತಮಾಷೆಗಳು ಜೀವನದಲ್ಲಿ ಖುಷಿ ಕೊಡುತ್ತವೆ. ಅದು ಈಗಿನ ಅಗತ್ಯ ಕೂಡ ಹೌದು. ಚಿಕ್ಕಮಕ್ಕಳಿದ್ದರೆ ಮನೆಯಲ್ಲಿ ಅದುವೇ ಸೊಗಸು. ಆದರೆ ಹಲವು ಕುಟುಂಬಗಳಲ್ಲಿ ಚಿಕ್ಕಮಕ್ಕಳು ಸ್ಮಾರ್ಟ್​ಫೋನ್​ನಿಂದಾಗಿ ಉಳಿದ ಖುಷಿಗಳಿಂದ ದೂರು ಉಳಿದಿದ್ದರೆ, ಇನ್ನು ಅಪ್ಪ-ಅಮ್ಮನೂ ಮಕ್ಕಳನ್ನು ನೋಡಿಕೊಳ್ಳುವ ಪುರುಸೊತ್ತು ಇಲ್ಲದೇ ದಿನ ಕಳೆಯುತ್ತಾರೆ.

ಇವುಗಳ ನಡುವೆ ಈಗ ವೈರಲ್​ ಆಗಿರುವ ಅಪ್ಪ-ಮಗಳ ಕ್ಯೂಟ್​ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಇಂಥ ತಮಾಷೆ, ಹಾಸ್ಯ ಆಗಾಗ್ಗೆ ಮನೆಯಲ್ಲಿ ನಡೆಯುತ್ತಿದ್ದರೆ ಚೆನ್ನ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಇದರಲ್ಲಿ ಮಗಳು ತಂದೆಗೆ ತಮಾಷೆ ಮಾಡುವುದನ್ನು ನೋಡಬಹುದು. ಯಾವುದೋ ಒಂದು ಸವಾಲನ್ನು ಮಗಳು ಅಪ್ಪನಿಗೆ ನೀಡುತ್ತಾಳೆ. ಅಡುಗೆ ಮನೆಗೆ ಅಪ್ಪನನ್ನು ಆಹ್ವಾನಿಸುವ ಪುಟ್ಟ ಬಾಲಕಿ, ಅಪ್ಪನ ಕೈಗೆ ಹಗ್ಗ ಕಟ್ಟಿ ಎರಡು ಜಗ್​ಗಳನ್ನು ತೂಗಿಬಿಡುತ್ತಾಳೆ. ನಂತರ ನೀವೆಷ್ಟು ಭಾರ ಹೊತ್ತುಕೊಳ್ಳಲು ಸಾಧ್ಯ ಎಂದು ಕೇಳುತ್ತಾ ಅಪ್ಪನ ಕೈಗಳ ಮೇಲೆ ಪುಸ್ತಕಗಳನ್ನು ಇಡುತ್ತಾ ಹೋಗುತ್ತಾಳೆ.

ಕೊನೆಯಲ್ಲಿ ಕೇಕ್​ ಇಡುತ್ತಾಳೆ. ನಂತರ ನಿಧಾನವಾಗಿ ಕತ್ತರಿಯಿಂದ ಹಗ್ಗವನ್ನು ಕಟ್​ ಮಾಡಿದಾಗ ಮೇಲಿರುವ ಕೇಕ್​ ಅಪ್ಪನ ಮುಖಕ್ಕೆ ಅಪ್ಪಳಿಸಿ ಅಪ್ಪನ ಮುಖ ಕೇಕ್​ಮಯವಾಗುತ್ತದೆ. ಈ ಸಂದರ್ಭದಲ್ಲಿ ಏನಾಯಿತೆಂದು ತಿಳಿಯದ ಅಪ್ಪ ಅಲ್ಲಿಯೇ ಆಯತಪ್ಪಿ ಬೀಳುತ್ತಾರೆ.

ಮಗಳು ಈ ಹಾಸ್ಯದ ತುಣುಕಿಗೆ ಹಲವು ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Adorable little girl pulls clever prank on daddy. Dad can’t even be fully mad, he’s honestly impressed. from aww

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments