Friday, December 9, 2022
Google search engine
HomeUncategorized‘ಅದೃಷ್ಟ’ ಬದಲಿಸುತ್ತೆ ನೀವು ಧರಿಸುವ ಬಟ್ಟೆ

‘ಅದೃಷ್ಟ’ ಬದಲಿಸುತ್ತೆ ನೀವು ಧರಿಸುವ ಬಟ್ಟೆ

‘ಅದೃಷ್ಟ’ ಬದಲಿಸುತ್ತೆ ನೀವು ಧರಿಸುವ ಬಟ್ಟೆ

ಬಟ್ಟೆ ಮಾನ ಮುಚ್ಚುವ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ವ್ಯಕ್ತಿಯ ನಡವಳಿಕೆ, ಸ್ವಭಾವ, ಆತ್ಮವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ ಬಟ್ಟೆ ಕೂಡ ಬದಲಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಭಾರತೀಯರು ಧರಿಸುವ ಬಟ್ಟೆಯಲ್ಲಿ ಸಾಕಷ್ಟು ಬದಲಾವಣೆ ನೋಡಬಹುದಾಗಿದೆ. ಅಲ್ಲಲ್ಲಿ ಹರಿದ ಜೀನ್ಸ್ ಸೇರಿದಂತೆ ಭಿನ್ನ ಭಿನ್ನ ಫ್ಯಾಷನ್ ಬಟ್ಟೆಯಲ್ಲಿ ನೋಡಬಹುದಾಗಿದೆ. ಆದ್ರೆ ಹಿಂದೂ ಶಾಸ್ತ್ರದ ಪ್ರಕಾರ ಕೆಲವೊಂದು ಬಟ್ಟೆ ನಮಗೆ ಶುಭವಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಬಟ್ಟೆ ಹಾಕಿಕೊಳ್ಳುವುದ್ರಿಂದ ದೇಹದಲ್ಲಿರುವ ಶಕ್ತಿಯ ನಷ್ಟವಾಗುತ್ತದೆ. ಇದು ಮನಸ್ಸು ಹಾಗೂ ದೇಹವನ್ನು ದುರ್ಬಲಗೊಳಿಸಿ ಕೆಲ ರೋಗಗಳಿಗೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಪ್ರೇಮ, ರೋಮ್ಯಾನ್ಸ್, ಸಂತೋಷ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಮನರಂಜನೆ ಹಾಗೂ ಐಷಾರಾಮಿ ಗ್ರಹವೆಂದೂ ಚಂದ್ರನನ್ನು ಕರೆಯಲಾಗುತ್ತದೆ. ಹರಿದ ಬಟ್ಟೆ ಧರಿಸುವುದ್ರಿಂದ ಚಂದ್ರ ಗ್ರಹ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ.

ಫೆಂಗ್ ಶೂಯಿ ಪ್ರಕಾರ ಹರಿದ ಹಾಗೂ ಹಳೆ ಬಟ್ಟೆ, ದುಃಖವನ್ನು ನೀಡುತ್ತದೆಯಂತೆ. ಹರಿದ ಜೀನ್ಸ್, ಶರ್ಟ್ ಧರಿಸುವುದ್ರಿಂದ ಬಡತನ ನಮ್ಮನ್ನರಸಿ ಬರುತ್ತದೆಯಂತೆ. ಹರಿದ ಬಟ್ಟೆ ಆಕರ್ಷಕವಾಗಿದ್ದು, ಸುಂದರವಾಗಿ ಕಾಣುತ್ತಿದ್ದರೂ ಅದನ್ನು ಖರೀದಿ ಮಾಡಬೇಡಿ. ಹರಿದ ಬಟ್ಟೆ ಮನೆಯಿಂದ ಹೊರಗೆ ನಿಶಿದ್ಧ. ಮನೆಯಲ್ಲಿ ಇದನ್ನು ಧರಿಸಿದ್ರೆ ಸಕಾರಾತ್ಮಕ ಶಕ್ತಿ ನಷ್ಟವಾಗಿ ನಕಾರಾತ್ಮಕ ಶಕ್ತಿ ಮನೆ ಪ್ರವೇಶಕ್ಕೆ ಕಾರಣವಾಗುತ್ತದೆ.

ಬುಧವಾರ, ಗುರುವಾರ ಹಾಗೂ ಶುಕ್ರವಾರ ಮಾತ್ರ ಹೊಸ ಬಟ್ಟೆ ಧರಿಸಬೇಕು. ಒಣಗಿದ ಬಟ್ಟೆಯನ್ನು ಎಂದೂ ರಾತ್ರಿ ಹೊರಗೆ ಬಿಡಬೇಡಿ. ನಕಾರಾತ್ಮಕ ಶಕ್ತಿ ಬಟ್ಟೆ ಮೂಲಕ ಮನೆ, ಮನಸ್ಸು ಪ್ರವೇಶ ಮಾಡುತ್ತದೆ. ಶನಿವಾರ ಎಂದೂ ಹೊಸ ಬಟ್ಟೆ ಧರಿಸಬೇಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments