Wednesday, August 10, 2022
Google search engine
HomeUncategorizedಅಚ್ಚರಿ ಹುಟ್ಟಿಸುತ್ತೆ ʼಮ್ಯಾನ್‌ vs ವೈಲ್ಡ್‌ʼ ಶೋ ನಿರೂಪಕನ ಡಯಟ್‌, ಪ್ರತಿದಿನ ಬೇಕು ಯಕೃತ್ತಿನ ಮಾಂಸ,...

ಅಚ್ಚರಿ ಹುಟ್ಟಿಸುತ್ತೆ ʼಮ್ಯಾನ್‌ vs ವೈಲ್ಡ್‌ʼ ಶೋ ನಿರೂಪಕನ ಡಯಟ್‌, ಪ್ರತಿದಿನ ಬೇಕು ಯಕೃತ್ತಿನ ಮಾಂಸ, ಮೂಳೆಯ ಮಜ್ಜೆ..!

ಅಚ್ಚರಿ ಹುಟ್ಟಿಸುತ್ತೆ ʼಮ್ಯಾನ್‌ vs ವೈಲ್ಡ್‌ʼ ಶೋ ನಿರೂಪಕನ ಡಯಟ್‌, ಪ್ರತಿದಿನ ಬೇಕು ಯಕೃತ್ತಿನ ಮಾಂಸ, ಮೂಳೆಯ ಮಜ್ಜೆ..!

ಮ್ಯಾನ್ vs ವೈಲ್ಡ್ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆಯುವವರು ಅದರ ನಿರೂಪಕ ಬೇರ್ ಗ್ರಿಲ್ಸ್. ಅವರ ಆಹಾರ ಪದ್ಧತಿ ಅಥವಾ ಡಯಟ್‌ ಬಗ್ಗೆ ಕೇಳಿದ್ರೆ ನೀವು ಇನ್ನೂ ಅಚ್ಚರಿಪಡ್ತೀರ. ಶೋನಲ್ಲಿ ಎಲ್ಲವನ್ನೂ ತಿನ್ನುವ ಬೇರ್‌ ಗ್ರಿಲ್ಸ್‌, ಮನೆಯಲ್ಲಿ ಯಾವ ರೀತಿ ಆಹಾರ ಸೇವಿಸ್ತಾರೆ ಅನ್ನೋದು ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.

ಮ್ಯಾನ್ vs ವೈಲ್ಡ್, ಟಿವಿ ಪ್ರಪಂಚದ ಅತ್ಯಂತ ಯಶಸ್ವಿ ಪ್ರದರ್ಶನಗಳಲ್ಲಿ ಒಂದು. ಅದರ ಹೋಸ್ಟ್ ಬೇರ್ ಗ್ರಿಲ್ಸ್ ಕೂಡ ಅಷ್ಟೇ ಫೇಮಸ್‌. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ರಂತಹ ಪ್ರಸಿದ್ಧ ವ್ಯಕ್ತಿಗಳು ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್, ಶೋನಲ್ಲಿ ಹಾವು, ಚೇಳುಗಳನ್ನೂ ಬಿಡುವುದಿಲ್ಲ. ಆದ್ರೆ ಮನೆಯಲ್ಲಿ ತಮ್ಮ ಡಯಟ್‌ ಯಾವ ರೀತಿ ಇರುತ್ತದೆ ಅನ್ನೋದನ್ನು ಅವರೇ ಬಹಿರಂಗಪಡಿಸಿದ್ದಾರೆ.

ರೆಡ್‌ ಮೀಟ್‌, ಡೈರಿ ಉತ್ಪನ್ನಗಳು ಮತ್ತು ಹಣ್ಣುಗಳು ಬೇರ್‌ ಗ್ರಿಲ್ಸ್‌ಗೆ ಫೇವರಿಟ್‌. ಆದ್ರೆ ಡ್ರೈ ಫ್ರೂಟ್ಸ್‌, ಧಾನ್ಯಗಳು ಮತ್ತು ತರಕಾರಿಗಳನ್ನು ಅವರು ತಿನ್ನುವುದೇ ಇಲ್ಲವಂತೆ. ಮಧ್ಯಾಹ್ನದ ಊಟಕ್ಕೆ ನಾನ್ ವೆಜ್, ಮೊಟ್ಟೆ, ಬೆಣ್ಣೆ ಮತ್ತು ಹಣ್ಣುಗಳನ್ನು ತಿನ್ನುತ್ತಾರೆ. ಪ್ರತಿದಿನ ಯಕೃತ್ತಿನ ಮಾಂಸವನ್ನು ತಿನ್ನುತ್ತಾರಂತೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಪಿಜ್ಜಾ ಅಥವಾ ಕರಿದ ವಸ್ತುಗಳನ್ನು ಸೇವಿಸ್ತಾರೆ. ಇನ್ನು ಮುಂದೆ ಹಸಿ ಮಾಂಸವನ್ನು ತಿನ್ನುವುದಿಲ್ಲ ಅಂತಾ ಖುದ್ದು ಬೇರ್‌ ಗ್ರಿಲ್ಸ್‌ ಹೇಳಿದ್ದಾರೆ.

ಬೇರ್ ಗ್ರಿಲ್ಸ್ ಸಾಹಸಮಯ ಪ್ರವಾಸ ಮುಗಿಸಿಕೊಂಡು ಮನೆಗೆ ಬಂದಾಗ ಮೊದಲು ಬರ್ಗರ್ ತಿನ್ನುತ್ತಾರೆ. ಚೀಸ್‌ ಮತ್ತು ಮೊಟ್ಟೆ ಹಾಕಿರುವ ಬರ್ಗರ್‌ ಅವರಿಗೆ ಇಷ್ಟವಂತೆ. ಒಂದು ಚಮಚ ಮೂಳೆಯ ಮಜ್ಜೆ, ಗ್ರೀಕ್ ಮೊಸರು, ಜೇನುತುಪ್ಪ ಮತ್ತು ಹಣ್ಣುಗಳು ಕೂಡ ಅವರ ಡಯಟ್‌ನಲ್ಲಿರುತ್ತವೆ. ಕಿತ್ತಳೆ ಹಣ್ಣಿನ ಜ್ಯೂಸ್‌ ಅವರ ಫೇವರಿಟ್‌. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಮರೆಯೋದಿಲ್ಲ. ಟೆನಿಸ್ ಅವರ ನೆಚ್ಚಿನ ಹವ್ಯಾಸ. ಇದರೊಂದಿಗೆ ವೇಯ್ಟ್‌ ಟ್ರೇನಿಂಗ್‌ ಮತ್ತು ಯೋಗಾಸನವನ್ನೂ ಮಾಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments