Friday, October 7, 2022
Google search engine
HomeUncategorizedಅಚ್ಚರಿಗೊಳಿಸುತ್ತೆ ಹುಡುಗಿ ಡಾನ್ಸ್​ಗೆ ಆನೆ ನೀಡಿದ ಪ್ರತಿಕ್ರಿಯೆ

ಅಚ್ಚರಿಗೊಳಿಸುತ್ತೆ ಹುಡುಗಿ ಡಾನ್ಸ್​ಗೆ ಆನೆ ನೀಡಿದ ಪ್ರತಿಕ್ರಿಯೆ

ಅಚ್ಚರಿಗೊಳಿಸುತ್ತೆ ಹುಡುಗಿ ಡಾನ್ಸ್​ಗೆ ಆನೆ ನೀಡಿದ ಪ್ರತಿಕ್ರಿಯೆ

ಮನುಷ್ಯರು ಹಾಗೂ ಕೆಲವು ಪ್ರಾಣಿಗಳ ನಡುವೆ ಒಳ್ಳೆಯ ಬಾಂಡಿಂಗ್​ ಇರುತ್ತದೆ. ಮನುಷ್ಯರ ಮಾತುಗಳನ್ನು, ಅವರ ಬಾಡಿ ಲಾಂಗ್ವೆಜ್​ಗಳನ್ನು ಅರ್ಥೈಸಿಕೊಳ್ಳುವ ಸ್ವಭಾವ ಇದೆ. ಇದರಲ್ಲಿ ಆನೆ ಕೂಡ ಸೇರಿದೆ.

ಆನೆಯು ತನ್ನ ಕಿವಿಗಳನ್ನು ಅಲ್ಲಾಡಿಸುವ ಮೂಲಕ ತನ್ನೆದುರು ನೃತ್ಯ ಮಾಡುವ ಹುಡುಗಿಯನ್ನು ಅನುಕರಿಸುವ ವಿಡಿಯೋ ವೈರಲ್​ ಆಗಿದ್ದು 7 ಮಿಲಿಯನ್​ ವೀಕ್ಷಣೆಗಳೊಂದಿಗೆ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.

ಆನೆಗಳು ದೆೈತ್ಯ ಜೀವಿಯಾಗಿದ್ದರೂ ಅವುಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಪ್ರೀತಿಯಿಂದ ಸಂವಹನ ನಡೆಸುತ್ತವೆ. ಇದಕ್ಕೆ ಉದಾಹರಣೆಯಾಗಿ ಹಲವಾರು ವೀಡಿಯೋಗಳು ಕಾಣ ಸಿಗುತ್ತವೆ.

ಆನೆ ಮತ್ತು ಅದರ ಮಾವುತ ಹಾಗೂ ಹುಡುಗಿ ನಿಂತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಂತರ ಆ ಹುಡುಗಿ ಆನೆಯ ಮುಂದೆ ಡ್ಯಾನ್ಸ್​ ಮಾಡಲು ಪ್ರಾರಂಭಿಸುತ್ತಾಳೆ, ಸಂತೋಷದಿಂದ ತನ್ನ ಕೈ ಮತ್ತು ಕಾಲುಗಳನ್ನು ಕುಣಿಸುತ್ತಾಳೆ.

ಅಚ್ಚರಿ ಎಂಬಂತೆ ಆನೆಯು ಅದೇ ರೀತಿ ನೃತ್ಯದ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಹುಡುಗಿಯನ್ನು ಅನುಕರಿಸಲು ಪ್ರಾರಂಭಿಸುತ್ತದೆ. ಅದರಲ್ಲೂ ತನ್ನ ಕಿವಿಯ ಮೂಲಕ ಆ ಕೆಲಸ ಮಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments