Sunday, March 26, 2023
Google search engine
HomeUncategorizedಅಂಧನಿಂದ ಸ್ಕೇಟಿಂಗ್ ಫ್ಲಿಪ್​: ನೋಡುಗರಿಂದ ಶ್ಲಾಘನೆಗಳ ಮಹಾಪೂರ

ಅಂಧನಿಂದ ಸ್ಕೇಟಿಂಗ್ ಫ್ಲಿಪ್​: ನೋಡುಗರಿಂದ ಶ್ಲಾಘನೆಗಳ ಮಹಾಪೂರ

ಅಂಧನಿಂದ ಸ್ಕೇಟಿಂಗ್ ಫ್ಲಿಪ್​: ನೋಡುಗರಿಂದ ಶ್ಲಾಘನೆಗಳ ಮಹಾಪೂರ

ಅಭ್ಯಾಸ ಮತ್ತು ನಿರಂತರ ಪ್ರಯತ್ನದಿಂದ ಕರಗತವಾಗದ ವಿಷಯ ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಾರೆ. ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಇದು ಹೃದಯಸ್ಪರ್ಶಿ ಉದಾಹರಣೆಯೂ ಆಗಿದೆ.

ದೃಷ್ಟಿಹೀನ ಸ್ಕೇಟ್‌ಬೋರ್ಡರ್ ಒಬ್ಬರು ತನ್ನ ಫ್ಲಿಪ್ ಟ್ರಿಕ್‌ನಲ್ಲಿ ಕೌಶಲ ತೋರುತ್ತಿರುವ ವಿಡಿಯೋ ಇದಾಗಿದೆ. ಈ ಕಿರು ವಿಡಿಯೋ ಖಂಡಿತವಾಗಿಯೂ ನಿಮ್ಮನ್ನು ಖುಷಿಯಲ್ಲಿ ಮುಳುಗಿಸುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಗುಡ್ ನ್ಯೂಸ್ ಮೂವ್ ಮೆಂಟ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಕಿರು ಕ್ಲಿಪ್‌ನಲ್ಲಿ, ದೃಷ್ಟಿಹೀನ ಸ್ಕೇಟ್‌ಬೋರ್ಡರ್ ತನ್ನ ಫ್ಲಿಪ್ ಟ್ರಿಕ್ ಅನ್ನು ಪರಿಪೂರ್ಣಗೊಳಿಸುವುದನ್ನು ಕಾಣಬಹುದು. ಮೊದಲಿಗೆ, ಅವರು ತನ್ನ ಬೆತ್ತದ ಸಹಾಯದಿಂದ ಮೆಟ್ಟಿಲುಗಳ ಎತ್ತರವನ್ನು ಅಳೆಯುತ್ತಾರೆ. ನಂತರ ಎರಡನೇ ಬಾರಿಗೆ ಫ್ಲಿಪ್ ಮಾಡಲು ಪ್ರಯತ್ನಿಸುತ್ತಾರೆ.

ಫ್ಲಿಪ್​ ಸರಿಯಾಗಿ ಮಾಡಿದರೂ ಇಳಿಯುವಾಗ ಆಯ ತಪ್ಪಿ ಬೀಳುತ್ತಾರೆ. ಆದರೆ ಅದು ದೊಡ್ಡ ವಿಷಯವಲ್ಲ. ಆತ ಫ್ಲಿಪ್​ ಮಾಡಲು ಟ್ರೈ ಮಾಡಿರುವುದಕ್ಕೆ ಅಲ್ಲಿರುವ ಜನರು ಅಭಿನಂದಿಸುವುದನ್ನು ಕಾಣಬಹುದು. ಎಲ್ಲವೂ ಇದ್ದು ಏನೂ ಇಲ್ಲ ಎಂದು ಕೊರಗುವವರ ಮಧ್ಯೆ ಈತ ಮಹಾನ್​ ವ್ಯಕ್ತಿಯಾಗಿ ಕಾಣಿಸುತ್ತಾರೆ ಎಂದು ಹಲವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments