Wednesday, August 17, 2022
Google search engine
HomeUncategorizedಅಂತರ್ಜಾತಿ ಪ್ರೇಮ ವಿವಾಹ ಪ್ರಕರಣ: ಮಚ್ಚಿನಿಂದ ಮೂವರ ಮೇಲೆ ದಾಳಿ

ಅಂತರ್ಜಾತಿ ಪ್ರೇಮ ವಿವಾಹ ಪ್ರಕರಣ: ಮಚ್ಚಿನಿಂದ ಮೂವರ ಮೇಲೆ ದಾಳಿ

ಅಂತರ್ಜಾತಿ ಪ್ರೇಮ ವಿವಾಹ ಪ್ರಕರಣ: ಮಚ್ಚಿನಿಂದ ಮೂವರ ಮೇಲೆ ದಾಳಿ

ಕೊಪ್ಪಳ: ಅಂತರ್ಜಾತಿ ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಲಾಗಿದೆ. ಕೊಪ್ಪಳ ತಾಲೂಕಿನ ಇಂದಿರಾನಗರ ಗ್ರಾಮದಲ್ಲಿ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಹನುಮೇಶ ಭೋವಿ, ಹನುಮೇಶ ಆಗೋಲಿ, ವೆಂಕಟೇಶ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ತೀವ್ರವಾಗಿ ಗಾಯಗೊಂಡಿರುವ ಹನುಮೇಶ ಬೋವಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಎಲ್ಲಪ್ಪ ಓಬಳಬಂಡಿ, ಬಸವರಾಜ ಓಬಳಬಂಡಿ ಅವರ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮೂವರು ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments