Tuesday, September 27, 2022
Google search engine
HomeUncategorizedʼದೇವರʼ ಎದುರು ಊದುಬತ್ತಿ ಹಚ್ಚಲು ಇದೆ ಕಾರಣ

ʼದೇವರʼ ಎದುರು ಊದುಬತ್ತಿ ಹಚ್ಚಲು ಇದೆ ಕಾರಣ

ʼದೇವರʼ ಎದುರು ಊದುಬತ್ತಿ ಹಚ್ಚಲು ಇದೆ ಕಾರಣ

 

agarbatti sticks effects, ಅಗರಬತ್ತಿಯ ಹೊಗೆಯಿಂದ ಕ್ಯಾನ್ಸರ್‌‌ ಬರುವ ಚಾನ್ಸ್ ಇದೆಯಂತೆ! - did you know incense sticks smoke more dangerous than tobacco smoke - Vijaya Karnataka

ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ.

ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ.

ನಾವು ಅದರ ಸುಗಂಧವನ್ನು ಆಸ್ವಾದಿಸಿದಾಗ, TRPV3 ಪ್ರೋಟೀನ್ ಅನ್ನು ನಮ್ಮ ಮೆದುಳಿಗೆ ಪ್ರಚೋದಿಸುತ್ತದೆ. ಇದರಿಂದ ನಮ್ಮ ಇಂದ್ರಿಯಗಳೆಲ್ಲ ಸಡಿಲಗೊಂಡು, ಒತ್ತಡ ಕಡಿಮೆಯಾಗುತ್ತದೆ.

ಧೂಪದ್ರವ್ಯಗಳನ್ನು ಹಚ್ಚುವುದರಿಂದ ಉಲ್ಲಾಸಮಯ ಹಾಗೂ ಕಾಂತಿವರ್ಧಕ ಸುವಾಸನೆ ಹರಡುತ್ತದೆ. ಅದು ನಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಅವನ್ನು ಹಚ್ಚಲಾಗುತ್ತದೆ.

ಯಾವಾಗಲೂ ಶುದ್ಧ ಸಾರವಿರುವ, ಒಳ್ಳೆಯ ಗುಣಮಟ್ಟದ ಅಗರ್ಬತ್ತಿಗಳನ್ನು ಕೊಂಡುಕೊಳ್ಳಿ. ಕೃತಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿರುವ ಕಳಪೆ ಗುಣಮಟ್ಟದ ಊದಿನಕಡ್ಡಿಗಳು ಆರೋಗ್ಯಕ್ಕೆ ಹಾನಿಕಾರಕ. ಅವುಗಳಿಂದ ಮನೆಯೊಳಗೆ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಹೆಚ್ಚಾಗಿ, ರಕ್ತದಲ್ಲಿ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಅಧಿಕವಾಗಬಹುದು.

ವಾಸ್ತುಪ್ರಕಾರ ಧೂಪದ್ರವ್ಯಗಳು ಗಾಳಿಯಲ್ಲಿರುವ ಹಾನಿಕಾರಕ ಕಂಪನಗಳನ್ನು ತಟಸ್ಥಗೊಳಿಸುವ ಮೂಲಕ ಸಕಾರಾತ್ಮಕತೆಯನ್ನು ಹರಡುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments