Sunday, March 26, 2023
Google search engine
HomeUncategorizedʼಅಮ್ಮಾವ್ರ ಗಂಡʼ ಈ ಆಟೋ ಚಾಲಕ; ವಾಹನದ ಹಿಂದೆ ಬರೆದ ಸಾಲನ್ನ ಓದಿ ನಸುನಕ್ಕ ನೆಟ್ಟಿಗರು

ʼಅಮ್ಮಾವ್ರ ಗಂಡʼ ಈ ಆಟೋ ಚಾಲಕ; ವಾಹನದ ಹಿಂದೆ ಬರೆದ ಸಾಲನ್ನ ಓದಿ ನಸುನಕ್ಕ ನೆಟ್ಟಿಗರು

ʼಅಮ್ಮಾವ್ರ ಗಂಡʼ ಈ ಆಟೋ ಚಾಲಕ; ವಾಹನದ ಹಿಂದೆ ಬರೆದ ಸಾಲನ್ನ ಓದಿ ನಸುನಕ್ಕ ನೆಟ್ಟಿಗರು

ಲಾರಿ ಹಿಂದೆ, ಆಟೋ ಹಿಂದೆ ಬರೆದಿರುವ ಸಾಲುಗಳನ್ನ ಎಂದಾದರೂ ಓದಿದ್ದಿರಾ ? ಓದುವುದಕ್ಕೆ ತಮಾಷೆ ಅನಿಸಿದರೂ ಅರ್ಥಬದ್ಧವಾಗಿರುವ ಸಾಲುಗಳು. ಕವಿಗೂ, ಸಾಹಿತಿಗೂ ಹೊಳೆಯದ ಪದಪುಂಜಗಳು ಇಲ್ಲಿ ಸಾಲಿನ ರೂಪ ಪಡೆದಿರುತ್ತೆ.

ಬಹುತೇಕ ಬರಹಗಳು ಪ್ರೇಮ, ಭಗ್ನಪ್ರೇಮ ಇಲ್ಲಾ ತಂದೆ – ತಾಯಿಯ ಮೇಲಿನ ಭಕ್ತಿ, ಗೌರವ ಬಿಂಬಿಸುವ ಬರಹಗಳಾಗಿರುತ್ತೆ. ಇನ್ನೂ ಕೆಲ ಬರಹಗಳು ಓದ್ತಿದ್ದರಂತೂ ಮುಖದಲ್ಲಿ ನಗು ಉಕ್ಕಿ ಬರುವ ಹಾಗೆ ಮಾಡಿಸುತ್ತೆ.

ಟ್ರಾಫಿಕ್ನಲ್ಲಿ ನಿಂತಾಗೆಲ್ಲ ಈ ರೀತಿಯ ಸಾಲುಗಳು ಸಖತ್ ಮಜಾ ಕೊಡಿಸುತ್ತೆ. ಇತ್ತೀಚೆಗೆ ಇಂತಹದ್ದೇ ಆಟೋ ಹಿಂದೆ ಬರೆಯಲಾಗಿದ್ದ ಸಾಲೊಂದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

’ಕ್ಷಮಿಸಿ ಹುಡುಗಿಯರೇ, ನನ್ನ ಹೆಂಡತಿ ತುಂಬಾನೇ ಕಟ್ಟುನಿಟ್ಟು’ ಅಂತ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂದೆ ಬರೆದುಕೊಂಡಿದ್ದಾನೆ.

ಇದನ್ನ ಓದ್ತಿದ್ರೆ ಎಲ್ಲಾ ಹುಡುಗಿಯರು ಆತನ ಹಿಂದೆಯೇ ಬಿದ್ದಿದ್ದಾರೇನೋ ಅನ್ನೊ ಅರ್ಥ ಕೊಡುತ್ತೆ ಅಲ್ವಾ! ಟ್ರಾಫಿಕ್‌ನಲ್ಲಿ ನಿಂತಾಗ ವಂಶಿಕಾ ಗರ್ಗ ಅನ್ನೊರು, ಇದರ ಫೋಟೋ ತೆಗೆದು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನೂ ಶೀರ್ಷಿಕೆಯಲ್ಲಿ ’ ಕ್ಷಮಿಸಿ ಹುಡುಗಿಯರೇ, ಲಾಯಲ್ಟಿ ಲೆವಲ್ ಮ್ಯಾಕ್ಸ್” ಎಂದು ಬರೆದಿದ್ದಾರೆ.

ಈಗಾಗಲೇ ಈ ಪೋಸ್ಟ್‌ನ್ನ ಸಾವಿರಾರು ಜನ ನೋಡಿ ಕಾಮೆಂಟ್ ಮೇಲೆ ಕಾಮೆಂಟ್‌ ಹಾಕುತ್ತಿದ್ದಾರೆ. ಒಬ್ಬರು ’ಹೀಗೆ ಬರೆಯುವುದಕ್ಕೆ ಆತನ ಹೆಂಡತಿಯೇ ಕಟ್ಟಪ್ಪಣೆ ಮಾಡಿರಬೇಕು’ ಎಂದಿದ್ದಾರೆ. ಇನ್ನೊಬ್ಬರು’ ಈತ ಹೀಗೆ ಬಹಿರಂಗವಾಗಿ ಬರೆದಿದ್ದಾನೆ ಅಂದ್ರೆ, ಈತನ ಹಿಂದೆ ಅದೆಷ್ಟು ಜನ ಬಿದ್ದಿರಬೇಕು’ ಎಂದು ಹಾಸ್ಯ ಮಾಡಿದ್ದಾರೆ.

ಮತ್ತೊಬ್ಬರಂತೂ ’ ಈ ಆಟೋ ಚಾಲಕನ ಐಡಿಯಾಗೆ ಒಂದು ಬಿಯರ್ ಕೊಡಿಸ್ಲೇಬೇಕು’ ಎಂದಿದ್ದಾರೆ. ಯುವತಿಯೊಬ್ಬಳು ’ನನ್ನ ಹುಡುಗನೂ ಇಷ್ಟು ಪ್ರಾಮಾಣಿಕವಾಗಿದ್ದರೆ ಸಾಕು, ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಸಮಯ ಕಳೆಯುವ ನನ್ನ ಹುಡುಗ ಇವನಿಂದ ಕಲಿಯೋದು ತುಂಬಾ ಇದೆ” ಎಂದು ಕಾಮೆಂಟ್ ಮಾಡಿದ್ದಾಳೆ.

ಮಾರ್ಚ್ 5ರಂದು ಹಂಚಿಕೊಂಡ ಈ ಆಟೋ-ರಿಕ್ಷಾ ಪೋಸ್ಟ್ನ್ನ101K ವೀಕ್ಷಣೆಯನ್ನ ಹೊಂದಿದೆ. ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದ್ದು. 100ಕ್ಕೂ ಹೆಚ್ಚು ರಿಟ್ವಿಟ್‌ಗಳನ್ನ ಪಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments